ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದರೆ ವಿಶ್ವಕ್ಕೆ ವಿನಾಶದ ಮುನ್ಸೂಚನೆ!

|
Google Oneindia Kannada News

ಚಾಮರಾಜನಗರ, ಡಿ 20: ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿ (ಮುಜರಾಯಿ) ಇಲಾಖೆಯ ಪ್ರಮುಖ ದೇವಾಲಯಗಳಲ್ಲೊಂದ ಜಿಲ್ಲೆಯ ಐತಿಹಾಸಿಕ ಮಲೆ ಮಹಾದೇಶ್ವರ ದೇವಾಲಯದಲ್ಲಿ ಲೋಕಕ್ಕೆ ವಿನಾಶ ಎದುರಾದರೆ, ಅದರ ಮುನ್ಸೂಚನೆ ಸಿಗುತ್ತದೆಯೇ?

ಶಾಪಗ್ರಸ್ತ ಜಿಲ್ಲೆಯೆಂದು ಕರೆಯಲ್ಪಡುವ ಜಿಲ್ಲೆಯ ಈ ದೇವಾಲಯಕ್ಕೆ ಮುಖ್ಯಮಂತ್ರಿಗಳು ಬಂದು ದರ್ಶನ ಪಡೆಯುವುದು ಕಮ್ಮಿ. ಆದರೂ, ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆ ಐದಾರು ಬಾರಿ ದೇವಾಲಯಕ್ಕೆ ಹೋಗಿದ್ದರೆ, ಕೆಲವು ದಿನಗಳ ಹಿಂದೆ ಯಡಿಯೂರಪ್ಪನವರೂ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಬಂದಿದ್ದರು.

ಡಿ.12 ರಿಂದ 14ರವರೆಗೆ ಮಲೆ ಮಹದೇಶ್ವರನ ದರ್ಶನವಿಲ್ಲಡಿ.12 ರಿಂದ 14ರವರೆಗೆ ಮಲೆ ಮಹದೇಶ್ವರನ ದರ್ಶನವಿಲ್ಲ

ದೇವಾಲಯದ 77 ಮಲೆಗಳಲ್ಲಿ ಒಂದಾದ ಕೋಡುಗಲ್ಲು ಮಾದಪ್ಪನ ದೇವಾಲಯಕ್ಕೆ ಸುಮಾರು ಎಂಟು ಶತಮಾನಕ್ಕೂ ಹಿಂದಿನ ಇತಿಹಾಸವಿದೆ. ಮಲೆ ಮಹದೇಶ್ವರ ಸ್ವಾಮಿಯ ದೇವಾಲಯದಿಂದ ಉತ್ತರ ದಿಕ್ಕಿನಲ್ಲಿ ಬರುವ ಸಾಲೂರು ಮಠದ ರಸ್ತೆಯಲ್ಲಿ ಐದು ಕಿ.ಮೀ ದೂರವನ್ನು ಕ್ರಮಿಸಿದರೆ ಕೋಡುಗಲ್ಲು ಕ್ಷೇತ್ರ ಸಿಗುತ್ತದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ದೇವಾಲಯದಲ್ಲಿರುವ ಕೋಡುಗಲ್ಲು ಅಲುಗಾಡಿದರೆ ವಿಶ್ವಕ್ಕೆ ವಿನಾಶವಾಗಲಿದೆ ಎನ್ನುವುದು ಇಲ್ಲಿನ ನಂಬಿಕೆ. ಈ ಬಗ್ಗೆ ಬೆಟ್ಟದ ಬೇಡಗಂಪಣರು, ತಮ್ಮ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟಿನ ಯಥಾವತ್ ಕಾಪಿ ಹೀಗಿದೆ:

ಕೋಡುಗಲ್ಲು ಮಲೆಯ ಮಾಯ್ಕಾರ ಮಾದಪ್ಪನ ಎಪ್ಪತ್ತೇಳು ಮಲೆಗಳಲ್ಲಿ ಒಂದು

ಕೋಡುಗಲ್ಲು ಮಲೆಯ ಮಾಯ್ಕಾರ ಮಾದಪ್ಪನ ಎಪ್ಪತ್ತೇಳು ಮಲೆಗಳಲ್ಲಿ ಒಂದು

ಮುದ್ದು ಮಾದಪ್ಪ ಪವಾಡ ನೆಡೆಸಿದ ಧ್ಯಾನ ಮಾಡಿದ ಸ್ಥಳಗಳಲ್ಲಿ ಉಳಿದ ಕುರುಹುಗಳು ಪ್ರಸ್ತುತ ಪೂಜಾ ಸ್ಥಳಗಳಾಗಿ ಬದಲಾಗಿವೆ. ಪ್ರತಿ ನಿತ್ಯ ಸಾವಿರಾರು ಭಕ್ತರು ಪವಾಡ ನೆಡೆದ ಈ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಕೋಡುಗಲ್ಲು ಮಲೆಯ ಮಾದಪ್ಪನ ಎಪ್ಪತ್ತೇಳು ಮಲೆಗಳಲ್ಲಿ ಒಂದಾಗಿದೆ. ಮಹಾ ಮಹಿಮ ಮಾದಪ್ಪ ಧ್ಯಾನಾಮಗ್ನರಾಗಿ ಯೋಗದಲ್ಲಿ ಕುಳಿತಿರುವಾಗ ನೀಲಯ್ಯ ಎನ್ನುವವ ತನ್ನ ಹೆಂಡತಿಯಾದ ಶಿವ ಶರಣೆ ಸಂಕಮ್ಮನನ್ನು ವಾಮಚಾರ, ಮಾಟ ಮಂತ್ರಗಳಿಂದ ಬಂಧಿಸಿ ಸುಮಾರು ಆರು ತಿಂಗಳು ಹೆಜ್ಜೇನು ಭೇಟೆಗೆ ಹೋಗಿರುತ್ತಾನೆ.

ಮಹಾದೇವ ಮಾದಪ್ಪ ಧ್ಯಾನದ ಯೋಗ ನಿದ್ರೆ

ಮಹಾದೇವ ಮಾದಪ್ಪ ಧ್ಯಾನದ ಯೋಗ ನಿದ್ರೆ

ಇತ್ತ, ಸಂಕಮ್ಮ ಈ ದುಷ್ಟ ಶಕ್ತಿಯ ಬಂಧನದಿಂದ ಮುಕ್ತಿ ಪಡೆಯಲು ತನ್ನ ತವರು ಮನೆಯ ಮನೆಯ ದೇವರಾದ ಮಾದಪ್ಪನನ್ನು ನೆನೆಯುತ್ತಾಳೆ. ಇದನ್ನು ಹರಿತ ಮಹಾದೇವ ಮಾದಪ್ಪ ಧ್ಯಾನದ ಯೋಗ ನಿದ್ರೆಯಿಂದ ಎದ್ದು ಈ ಪುಣ್ಯಕ್ಷೇತ್ರ ದಿಂದ ಹೋರಟು ಜೋಳಿಗೆ, ಬೇತ ಹಾಗೂ ಕಂಸಾಳೆಯ ಜೋತೆಗೆ ಕೆಂಬರಗ ಹುಲಿಯನ್ನು ಹೆರಿ "ಕೋರಣ್ಯ ನೀಡಮ್ಮ ಕೋಡುಗಲ್ಲ ಮಾದೇವನಿಗೆ" ಎಂದು ಸಂಕಮ್ಮನಲ್ಲಿ ಭಿಕ್ಷೆಯನ್ನು ಕೇಳುತ್ತಾರೆ.

ಮಾದಪ್ಪ ಸಣ್ಣವನಾಗಿದ್ದಾಗ ಒಂದೊಂದೇ ಕಲ್ಲನ್ನು ಒಂದರ ಮೇಲೊಂದು ಜೋಡಿಸುತ್ತಿದ್ದ

ಮಾದಪ್ಪ ಸಣ್ಣವನಾಗಿದ್ದಾಗ ಒಂದೊಂದೇ ಕಲ್ಲನ್ನು ಒಂದರ ಮೇಲೊಂದು ಜೋಡಿಸುತ್ತಿದ್ದ

ಆಗ ಬಂಧನದಲ್ಲಿದ್ದ ಸಂಕಮ್ಮ ನಿನಗೆ ಹೇಗೆ ಭಿಕ್ಷೆ ನೀಡಲಿ ನನ್ನಪ್ಪ ಮನೆ ದೇವರೇ ಎನ್ನುತ್ತಾ ನೂಂದ ಮನದಲ್ಲಿ ನೆನೆಯುತ್ತಾಳೆ. ತಕ್ಷಣ ಮಾದಪ್ಪ ಮಾರಿ ಮಸಣಿಯರಿಂದ ಹಾಕಿದ ಸಂಕಮ್ಮನ ಸಂಕೋಲೆಯನ್ನು ಬಿಡುಗಡೆ ಮಾಡುತ್ತಾರೆ.
ಈ ಪ್ರಸಂಗ ನೆಡೆಯುವ ಮುನ್ನ ಮಹದೇಶ್ವರರು ಧ್ಯಾನ ಮಾಡುತ್ತಿದ್ದ ಸ್ಥಳವೇ ಕೋಡುಗಲ್ಲು ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಮಾದಪ್ಪ ಸಣ್ಣವನಾಗಿದ್ದಾಗ ಒಂದೊಂದೇ ಕಲ್ಲನ್ನು ಒಂದರ ಮೇಲೊಂದು ಜೋಡಿಸುತ್ತಿದ್ದ ಎನ್ನುವ ನಂಬಿಕೆಯೂ ಭಕ್ತರಲ್ಲಿದೆ.

Recommended Video

Team India ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿಕೊಟ್ಟ Mike Hussey | Oneindia Kannada
ಸಣ್ಣ ಕಲ್ಲುಗಳು ಗೋಪುರಾಕೃತಿಯಲ್ಲಿ ಕಾಣಸಿಗುತ್ತದೆ

ಸಣ್ಣ ಕಲ್ಲುಗಳು ಗೋಪುರಾಕೃತಿಯಲ್ಲಿ ಕಾಣಸಿಗುತ್ತದೆ

ಪ್ರಸ್ತುತ ಈ ಪವಾಡ ಪುಣ್ಯಕ್ಷೇತ್ರದಲ್ಲಿ ಕೊಂಬುಗಳಂತೆ ಜೋಡಿ ಕಲ್ಲುಗಳ ಕೋಡುಗಲ್ಲುಗಳಿವೆ. ಒಂದರ ಮೇಲೊಂದು ಸಣ್ಣ ಕಲ್ಲುಗಳು ಗೋಪುರಾಕೃತಿಯಲ್ಲಿ ಕಾಣಸಿಗುತ್ತದೆ. ಸುಮಾರು 800 ವರ್ಷಗಳಿಂದ ಈ ಕೋಡುಗಲ್ಲುಗಳು ವಾರೆಯಾಗಿ ಹೀಗೆಯೇ ನಿಂತಿದೆ. ಸಮುದ್ರ ಮಟ್ಟಕ್ಕಿಂತ 3,800 ಅಡಿ ಎತ್ತರ ಪ್ರದೇಶದಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೀಸುವ ಜೋರು ಗಾಳಿ ಮಳೆಯ ನಡುವೆಯೂ ಕೋಡುಗಲ್ಲು ಮಾದಪ್ಪನ ಕೋಡುಗಲ್ಲುಗಳು ಎಂದಿಗೂ ಅಲುಗಾಡಿಲ್ಲ ಮುಂದೊಂದು ದಿನ ಈ ಕೋಡುಗಲ್ಲು ಅಲುಗಾಡಿದರೆ ವಿಶ್ವಕ್ಕೆ ವಿನಾಶವಾಗಲಿದೆ ಎಂಬ ನಂಬಿಕೆ ಇಲ್ಲಿಯ ಜನರದ್ದಾಗಿದೆ.

English summary
Indication Will Show In Malai Mahadeshwaa Temple If Bad Days Ahead to World
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X