ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ಯೂಸ್​ಲೆಸ್ ಆದ ಫೋನ್ ಇನ್ ಪ್ರೋಗ್ರಾಂ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ನವೆಂಬರ್.23:ಸಮಸ್ಯೆಗಳನ್ನು ಕೇಳಲು ಮತ್ತು ಪರಿಹರಿಸಲು ಕಲ್ಪಿಸಿರುವ ಒಂದು ಗಂಟೆ ಅವಧಿಯ ಸೂಕ್ತ ವೇದಿಕೆ ಫೋನ್ ಇನ್ ಪ್ರೋಗ್ರಾಂ ಇದೀಗ ಯೂಸ್ ಲೆಸ್ ಆಗುತ್ತಿದೆ ಎಂದರೆ ತಪ್ಪಾಗಲಾರದು.

ಹೌದು, ಚಾಮರಾಜನಗರದ ಬಹುತೇಕ ಅಧಿಕಾರಿಗಳು ಈ ಫೋನ್ ಇನ್ ಪ್ರೋಗ್ರಾಂ ಗೆ ಬರ್ತಾರೆ. ಆದರೆ ಒಂದು ಗಂಟೆ ಕುಳಿತು ಕೆಲವರು ವಾಟ್ಸಾಪ್, ಫೇಸ್ ಬುಕ್ ಅಲ್ಲಿ ಮಗ್ನವಾಗಿದ್ದರೆ, ಕೆಲವರು ನಿದ್ದೆಯಲ್ಲಿ ಜಾರಿರುತ್ತಾರೆ. ಹೀಗೆ ಮಾಡಿದರೆ ಸಮಸ್ಯೆ ಕೇಳುವರ್ಯಾರು, ಬಗೆಹರಿಸುವರ್ಯಾರು ನೀವೇ ಹೇಳಿ.

'ಅಭಿವೃದ್ಧಿಯೆಂದರೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡುವುದಲ್ಲ''ಅಭಿವೃದ್ಧಿಯೆಂದರೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡುವುದಲ್ಲ'

ಉದಾಹರಣೆ ನೀಡುವುದೇ ಆದರೆ ನಾಲ್ಕೈದು ತಿಂಗಳ ಹಿಂದೆ ಸಮಸ್ಯೆಯೊಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಫೋನ್ ಇನ್ ಅಲ್ಲಿ ರಿಂಗಣಿಸಿತು. ಜಿಲ್ಲಾಧಿಕಾರಿ ಸಮಸ್ಯೆಯೇನು ಕೇಳಿದರು. ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಮಾರ್ಗದರ್ಶನ ಪಡೆದವರು ಮಾತ್ರ ಮಾರ್ಗವೇ ತೋಚದೆ ಸುಮ್ಮನಾದರು.

In Chamarajanagar the phone-in-program is becoming useless

ದೂರು ಕೆಲವರಿಗೆ ಆದಾಯದ ಕರೆಯಾದರೆ, ಕೆಲವರಿಗೆ ತಲೆನೋವಿನ ಕೆಲಸವೂ ಆಯಿತು. ಜಿಲ್ಲಾಧಿಕಾರಿಗಳಿಗೆ ಕೂತಲ್ಲೇ ವರದಿ ಸಿದ್ಧಪಡಿಸಿ ದೂರುದಾರರಿಗೆ, ಜಿಲ್ಲಾಧಿಕಾರಿಗಳಿಗೆ ಮಕ್ಬಲ್ ಟೋಪಿಯನ್ನ ಹಾಕಿದರು. ದೂರುದಾರರೋರ್ವರು ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ಆವಾಗಾವಾಗ ವಾಟ್ಸಾಪ್ ಗೆ ದಾಖಲೆ ಸಮೇತ ಚಿತ್ರಣವನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ.

ದೂರುದಾರರು ಸಂಬಂಧಿಸಿದ ನಿರ್ದೇಶಕರಿಗೂ, ಜಾಗೃತ ತಂಡದವರಿಗೂ ಜಿಲ್ಲಾಧಿಕಾರಿಗಳಿಗೆ ಕಳಿಸಿದ್ದನ್ನೇ ಕಳಿಸಲು ಪ್ರಾರಂಭಿಸಿದಾಗ ತಲೆ ನೋವು ಜಾಸ್ತಿಯಾಗಲಿದೆ ಎಂದು ಆ ಸಂಖ್ಯೆಯನ್ನ ಬ್ಲಾಕ್ ಮಾಡಿ ಸುಮ್ಮನಾದರು ಎಂಬ ಆರೋಪಗಳು ಕೇಳಿ ಬರುತ್ತಿದೆ.

ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ಕುರಿತು ಸಂವಾದಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ಕುರಿತು ಸಂವಾದ

ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು ಹಸ್ತಕ್ಷೇಪ ‌ನಡೆಸಿ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಿದ್ದಾರೆ. ಅಕ್ರಮವಾಗಿ ನಡೆಯುವ ಕೇಂದ್ರದವರು ಜಿಲ್ಲಾಧಿಕಾರಿಯೋರ್ವರನ್ನ ಹೊರತುಪಡಿಸಿ ಶಿಕ್ಷಣ ಇಲಾಖೆ ನಿರ್ದೇಶಕರು, ನಗರಸಭೆ ಆಯುಕ್ತರು, ಸೇರಿದಂತೆ ಬಹುತೇಕರೆಲ್ಲರಿಗೂ ಹಣ ನೀಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ.

ಸಮಸ್ಯೆಗಳು ಕಂಡಲ್ಲಿ ಚಿತ್ರ ಮೂಡುತ್ತದೆ: ಮೈಸೂರಿನಲ್ಲಿ ಹೀಗೊಬ್ಬ ಅಪರೂಪದ ಕಲಾವಿದಸಮಸ್ಯೆಗಳು ಕಂಡಲ್ಲಿ ಚಿತ್ರ ಮೂಡುತ್ತದೆ: ಮೈಸೂರಿನಲ್ಲಿ ಹೀಗೊಬ್ಬ ಅಪರೂಪದ ಕಲಾವಿದ

ಅಧಿಕಾರಿಗಳ ಕೇಂದ್ರ ಸ್ಥಾನದಲ್ಲಿರಬೇಕು ಎಂದು ಆಗ ಜಿಲ್ಲಾಧಿಕಾರಿಗಳು ಹೇಳುತ್ತಿದ್ದರೂ ಜಿಲ್ಲಾಧಿಕಾರಿಗಳ ಆದೇಶ ಇವರಿಗೆ ಕೇಳಿಸುತ್ತಿಲ್ಲ. ಪಾಲಿಸುತ್ತಿಲ್ಲ. ಇನ್ನು ಜನಸಾಮಾನ್ಯರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಾರೋ ಜಿಲ್ಲಾಧಿಕಾರಿಗಳೇ ಹೇಳಬೇಕು.

English summary
In Chamarajanagar the phone-in-program is becoming useless.Authorities are not paying attention to this. Here's a short news about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X