ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಮೂಲಗಳ ಪುನಶ್ಚೇತನಕ್ಕೆ ನೆರವಾದ ಜಲಾಮೃತ ಯೋಜನೆ

|
Google Oneindia Kannada News

ಚಾಮರಾಜನಗರ, ಫೆಬ್ರವರಿ 18 : ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗಿರುವ ಜಲ ತಲ್ಲಣಗಳಿಗೆ ಪರಿಹಾರೋಪಾಯವಾಗಿ ರೂಪಿಸಲಾದ ಯೋಜನೆ 'ಜಲಾಮೃತ'. ಯೋಜನೆ ಜಲಸಂರಕ್ಷಣೆ, ಜಲ ಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಹಾಗೂ ಹಸಿರೀಕರಣವನ್ನು ಕೇಂದ್ರವಾಗಿಟ್ಟುಕೊಂಡಿದೆ.

ನೀರಿನ ಸಮಸ್ಯೆಯನ್ನು ಮೂಲದಿಂದ ನಿವಾರಿಸುವ ಸಲುವಾಗಿ ಯೋಜನೆ ಜಾರಿಗೆ ತರಲಾಗಿದೆ. ಕೃಷಿ ಚಟುವಟಿಕೆ ಹೆಚ್ಚಾಗಿ ಕಂಡುಬರುವ ಗ್ರಾಮೀಣ ಪ್ರದೇಶದ ಜಲ ಸಮಸ್ಯೆಗಳನ್ನು ಮುಖ್ಯವಾಗಿಟ್ಟುಕೊಂಡು ಜಿಲ್ಲಾ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಜಲಾಮೃತ ಯೋಜನೆಯ ಒಗ್ಗೂಡಿಸುವಿಕೆಯಡಿ ಗ್ರಾಮದ ಜನರನ್ನೇ ಬಳಸಿಕೊಂಡು ಜಲಸಂರಕ್ಷಣೆ ಕಾರ್ಯಕ್ರಮ ಮಾಡಲಾಗುತ್ತಿದೆ.

'ಜಲಾಮೃತ' ಯೋಜನೆ ಮುಖ್ಯಾಂಶಗಳು'ಜಲಾಮೃತ' ಯೋಜನೆ ಮುಖ್ಯಾಂಶಗಳು

ಜಲಾಮೃತ ಯೋಜನೆಯಡಿ ನೀರಿನ ವಿವಿಧ ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ. ಪ್ರಮುಖವಾಗಿ ಜಲ ಸಾಕ್ಷರತೆ ಮುಖೇನ ಜನರಲ್ಲಿ ನೀರಿನ ಮಿತ ಹಾಗೂ ಪ್ರಜ್ಞಾವಂತ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಒಲೆಯ ಮೇಲೆ ಕಾಯುತ್ತಿರುವುದು ಅಂತಹುದೇ ಮರುಕದ ನೀರು!ಒಲೆಯ ಮೇಲೆ ಕಾಯುತ್ತಿರುವುದು ಅಂತಹುದೇ ಮರುಕದ ನೀರು!

ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮದಡಿ ಕೊಳವೆಬಾವಿಗಳ ಮರುಪೂರಣ, ಕೆರೆಗಳ ಹೂಳೆತ್ತುವಿಕೆ, ನೂತನ ಕೆರೆ, ಚೆಕ್‍ಡ್ಯಾಂ, ಕಲ್ಯಾಣಿ ಕೊಳಗಳ ನಿರ್ಮಾಣ, ಜಾನುವಾರುಗಳ ಉಪಯೋಗಕ್ಕಾಗಿ ಗೋ ಕಟ್ಟೆಗಳ ನಿರ್ಮಾಣದಂತ ಕಾರ್ಯಗಳನ್ನು ಮಾಡಲಾಗುತ್ತಿದೆ.

ಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆ

ಜಲಮೂಲಗಳ ಸುತ್ತ ಗಿಡ ನೆಡುವುದು

ಜಲಮೂಲಗಳ ಸುತ್ತ ಗಿಡ ನೆಡುವುದು

ಹಸಿರೀಕರಣದ ಮುಖೇನ ಜಲಮೂಲಗಳ ಸುತ್ತ ಮರಗಳನ್ನು ಹೆಚ್ಚೆಚ್ಚು ಬೆಳೆಸುವ ಮಹತ್ತರ ಕಾರ್ಯವನ್ನೂ ಕೈಗೊಳ್ಳಲಾಗಿದೆ. ಜಲಾಮೃತ ಆರಂಭವಾದ ವರ್ಷವನ್ನು ಜಲವರ್ಷವೆಂದು ಘೋಷಿಸಿ, ಸರ್ವರಿಗೂ ಜಲ ಸದಾಕಾಲ ಎಂಬ ಧ್ಯೇಯವಾಕ್ಯದಡಿ, ಬರುವ 2 ವರ್ಷಗಳಲ್ಲಿ ರಾಜ್ಯಾದ್ಯಂತ 20,000 ಜಲಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಯೋಜನೆ ರೂಪಿಸಲಾಗಿದೆ.

ಜಲಾಮೃತ ಉಪಕ್ರಮ

ಜಲಾಮೃತ ಉಪಕ್ರಮ

ಚಾಮರಾಜನಗರ ಜಿಲ್ಲೆಯಲ್ಲಿ ಜಲಾಮೃತ ಯೋಜನೆಯಡಿ ಸಮಗ್ರ ಹಸಿರೀಕರಣ ಕಾರ್ಯಕ್ರಮದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ 1.50 ಲಕ್ಷ ಸಸಿ ನೆಡಲಾಗಿದೆ. ಜತೆಗೆ 498 ಸಾಂಪ್ರದಾಯಿಕ ಜಲಮೂಲಗಳನ್ನು ಗುರುತಿಸಲಾಗಿದ್ದು, ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ನೀರಿನ ತೊಂಬೆಗಳ ಗೋಡೆ ಬರಹ, ಸಾಕ್ಷರತಾ ಕಾರ್ಯಾಗಾರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

10 ಕೆರೆಗಳ ಆಯ್ಕೆ

10 ಕೆರೆಗಳ ಆಯ್ಕೆ

ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 29 ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು 500.73 ಲಕ್ಷ ರೂ. ಗಳ ವೆಚ್ಚದಲ್ಲಿ ಕೆರೆಗಳ ಅಗತ್ಯತೆ ತಕ್ಕಂತೆ ಅಭಿವೃದ್ಧಿ ಕಾರ್ಯಕ್ರಮ ಅನುಷ್ಟಾನಗೊಳಿಸಲಾಗುತ್ತಿದೆ.

ಚಾಮರಾಜನಗರ ತಾಲೂಕಿನಲ್ಲಿ ಎಚ್.ಮೂಕಳ್ಳಿಕೆರೆ, ಹೊಂಗನೂರು ಬಿಳಿಕೆರೆ, ಬೂದಂಬಳ್ಳಿ ಕೆರೆ, ಗಂಗವಾಡಿ, ಬೊಕ್ಕಪುರ ಮೂರುತುಬಿನ ಕೆರೆ, ಅರಕಲವಾಡಿ ದೊಡ್ಡಕೆರೆ, ಮರಿಯಾಲ ಶಿವಗಂಗೆ ಕೆರೆ, ಬೇಡರ ಪುರ ಕೆರೆ, ಕೊತ್ತಲವಾಡಿ ಕೆರೆ, ದೇವಲಾಪುರ ಕೆರೆ ಸೇರಿ 10 ಕೆರೆಗಳನ್ನು ಆಯ್ಕೆ ಮಾಡಲಾಗಿದೆ.

ನೀರಿನ ಮಹತ್ವ ತಿಳಿಸುವ ಕಾರ್ಯಕ್ರಮ

ನೀರಿನ ಮಹತ್ವ ತಿಳಿಸುವ ಕಾರ್ಯಕ್ರಮ

'ಹನಿ ನೀರನ್ನು ಉಳಿಸಿ, ಮುಂದಿನ ಪೀಳಿಗೆಗೆ ನೀಡುತ್ತೇವೆ' ಎಂಬ ಪ್ರತಿಜ್ಞೆಯೊಂದಿಗೆ ಆರಂಭವಾದ ಜಲಾಮೃತ ಯೋಜನೆ ನೀರಿನ ಮಹತ್ವ ತಿಳಿಸುವ ಜತೆಗೆ ನೀರಿನ ಉಳಿಸುವಿಕೆಯಲ್ಲೂ ಕಾರ್ಯನಿರ್ವಹಿಸುತ್ತಿದೆ.

ಗ್ರಾಮೀಣ ಭಾಗದ ಜನರಿಗೆ ಈ ಯೋಜನೆಯಿಂದಾಗಿ ಉದ್ಯೋಗವನ್ನು ಸಹ ಕಲ್ಪಿಸಲಾಗುತ್ತಿದೆ. ದೀರ್ಘಕಾಲಿಕವಾಗಿ ಉಳಿಯುವಂಥ ಕಾರ್ಯಕ್ರಮಗಳ ಮೂಲಕ ಮುಂಬರುವ ಪೀಳಿಗೆಗೆ ಸ್ವಸ್ಥ ಸಮಾಜವನ್ನು ಕೊಡುಗೆಯಾಗಿ ನೀಡುವತ್ತಾ ಹೆಜ್ಜೆ ಇಡಲಾಗುತ್ತಿದೆ.

English summary
Implementation of Jalamrutha project at Chamarajanagar district. Government of Karnataka launched project for conservation of water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X