ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ ಕಾಡಂಚಿನಲ್ಲಿ ತಲೆ ಎತ್ತಿರುವ ಕಟ್ಟಡಗಳ ತೆರವು ಯಾವಾಗ?

|
Google Oneindia Kannada News

ಚಾಮರಾಜನಗರ, ಮೇ 26: ಬಂಡೀಪುರ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವುದರೊಂದಿಗೆ ಪ್ರಮುಖ ಪ್ರವಾಸಿ ತಾಣವಾಗಿರುವ ಕಾರಣದಿಂದ ಇಲ್ಲಿ ಕೆಲವು ಪ್ರಭಾವಿಗಳು ಸದ್ದಿಲ್ಲದೆ ಮನೆಗಳನ್ನು ಐಷಾರಾಮಿಯಾಗಿ ನಿರ್ಮಿಸಿ ಬಳಿಕ ಹೋಂಸ್ಟೇಯನ್ನಾಗಿ ಪರಿವರ್ತಿಸಿ ಆದಾಯ ತರುವ ಹಾದಿಯನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮವಲಯವೆಂದು ಪರಿಗಣಿಸಿದ್ದು, ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೂ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಪ್ರದೇಶಗಳಲ್ಲಿ ರೆಸಾರ್ಟ್ ನಿರ್ಮಿಸಿ ಆ ಮೂಲಕ ಹಣ ಸಂಪಾದಿಸುತ್ತಿರುವುದು ನಡೆಯುತ್ತಲೇ ಇದೆ.

 ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ತಲೆ ಎತ್ತಿದ ಅಕ್ರಮ ಕಟ್ಟಡ ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ತಲೆ ಎತ್ತಿದ ಅಕ್ರಮ ಕಟ್ಟಡ

 ಮನೆಯನ್ನು ಹೋಂಸ್ಟೇಯಾಗಿ ಪರಿವರ್ತನೆ

ಮನೆಯನ್ನು ಹೋಂಸ್ಟೇಯಾಗಿ ಪರಿವರ್ತನೆ

ಕೆಲವರು ವಾಸದ ಮನೆ ನಿರ್ಮಾಣಕ್ಕೆಂದು ಗ್ರಾಮ ಪಂಚಾಯಿತಿಯಿಂದ ಕಟ್ಟಡದ ಲೈಸನ್ಸ್ ಪಡೆದು ಬಳಿಕ ಐಷಾರಾಮಿ ಬಂಗಲೆ ನಿರ್ಮಿಸಿ ಆ ನಂತರ ಹೋಂಸ್ಟೇ ಮಾಡಿಕೊಂಡು ಹಣ ಸಂಪಾದಿಸುತ್ತಾರೆ. ದೂರದಿಂದ ಬರುವ ಪ್ರವಾಸಿಗರು ಇಲ್ಲಿ ವಾಸ್ತವ್ಯ ಹೂಡುವುದರಿಂದ ಸಂಪಾದನೆಯಾಗುತ್ತದೆ. ಇಂತಹ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಲವು ಹೋಂಸ್ಟೇಗಳು ಇಲ್ಲಿವೆ. ಇದೆಲ್ಲದರ ನಡುವೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕರೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಸುಮಾರು 16 ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದು, ಇಂತಹ ಕಟ್ಟಡಗಳನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

 ವಾಣಿಜ್ಯ ಚಟುವಟಿಕೆಗೆ ನಿರ್ಬಂಧ

ವಾಣಿಜ್ಯ ಚಟುವಟಿಕೆಗೆ ನಿರ್ಬಂಧ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮವಲಯವೆಂದು ಪರಿಗಣಿಸಿ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ. ಜತೆಗೆ ಗ್ರಾಮಪಂಚಾಯಿತಿಯಿಂದ ಕಟ್ಟಡ ನಿರ್ಮಾಣಕ್ಕೆ ಲೈಸನ್ಸ್ ಪಡೆಯುವ ಮುನ್ನ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ವಾಸದ ಮನೆ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿ ಗ್ರಾಮ ಪಂಚಾಯಿತಿಯಿಂದ ಲೈಸನ್ಸ್ ಪಡೆದು ಈಜುಕೊಳ ಸೇರಿದಂತೆ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ.

 12 ಮಂದಿಗೆ ನೋಟೀಸ್

12 ಮಂದಿಗೆ ನೋಟೀಸ್

ಕುಂದಕೆರೆ ವಲಯದ ಕಾಡಂಚಿನ ಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಮಾಳವಿಕಾ ಸೋಲಂಕಿ, ಶ್ವೇತಾ ಮುರಳಿ, ಗುಣವಂತದವೆ, ನಾಗೇಂದ್ರ, ಪ್ರತಾಪರೆಡ್ಡಿ, ಸೈಯ್ಯದ್ ತಾಸೀಮ್, ಎ.ಎಸ್.ರಾಜು, ಎನ್.ಎಂ.ನವೀನ್ ಕುಮಾರ್, ಕಾರ್ತಿಕ್, ಶಕೀಬ್ ಅಹಮದ್, ಅರವಿಂದ ವೆಂಕಟೇಶರೆಡ್ಡಿ ಮತ್ತು ನಿತೀಶ್ ನಾರಾಯಣ ರೆಡ್ಡಿ ಎಂಬ 12 ಮಂದಿ ಕಟ್ಟಡ ನಿರ್ಮಿಸುತ್ತಿದ್ದರಿಂದ ಅವರಿಗೆ ಅರಣ್ಯ ಇಲಾಖೆ ನೋಟೀಸ್ ನೀಡಿ ಒಂದು ವಾರದಲ್ಲಿ ತಮ್ಮ ದಾಖಲಾತಿಗಳನ್ನು ತಂದು ತೋರಿಸುವಂತೆ ಸೂಚಿಸಿ ತೆರವಿಗೆ ದಿನಾಂಕ ನಿಗದಿಗೊಳಿಸುವಂತೆಯೂ ಜಿಲ್ಲಾಧಿಕಾರಿಯನ್ನು ಕೋರಲಾಗಿತ್ತು.
ಇದರ ಜತೆಗೆ ಗುಂಡ್ಲುಪೇಟೆ ತಹಶೀಲ್ದಾರ್ ಎಂ.ನಂಜುಂಡಯ್ಯ ಅವರು ಪರಿಶೀಲಿಸಿ ಕಂದಾಯ ಇಲಾಖೆ ಮೂಲಕ ಇನ್ನೂ ನಾಲ್ಕು ಅನಧಿಕೃತ ಕಟ್ಟಡಗಳನ್ನು ಗುರುತಿಸಿದ್ದು, ಮಂಗಲದ ವಿನಯ್, ಮೃತ್ಯುಂಜಯ ಎಂಬುವರು ನಿರ್ಮಿಸಿರುವ 25/25 ಮತು 30/25 ಅಳತೆಯ ಎರಡು ಕೋಣೆಗಳು, ಯಲ್ಚೆಟ್ಟಿಯ ಅಜೀಜ್ ಅಹಮದ್ ಶರೀಫ್ ನಿರ್ಮಿಸಿರುವ 30/40 ಅಳತೆಯ ಎರಡು ಮನೆಗಳು, ಮಂಗಲದ ಸಾದ್ ಬಿನ್ ಜಂಗ್ 0.03 ಎಕರೆ ಜಮೀನಿನಲ್ಲಿ ಪೂರ್ತಿಯಾಗಿ 4 ಕೊಠಡಿಗಳ ಕಟ್ಟಡವನ್ನು ನಿರ್ಮಿಸಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

 ಡಿಸಿಗೆ ವರದಿ ನೀಡಿದ ತಹಸೀಲ್ದಾರ್

ಡಿಸಿಗೆ ವರದಿ ನೀಡಿದ ತಹಸೀಲ್ದಾರ್

ಈ ಕಟ್ಟಡಗಳು ವಾಸಕ್ಕೆಂದು ಕಟ್ಟಿದ ಮನೆಯಂತೆ ಕಂಡು ಬಂದರೂ ಐಷಾರಾಮಿ ಮನೆಗಳಂತಿದ್ದು, ಈ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳೀಯ ಗ್ರಾಮಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ಹೋಂಸ್ಟೇಗಳಾಗಿ ಬಳಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 96(1) ರೀತ್ಯಾ ಕ್ರಮಕೈಗೊಂಡು ಅಕ್ರಮ ನಿರ್ಮಾಣ ಕಟ್ಟಡಗಳ ತೆರವುಗೊಳಿಸಬೇಕು ಎಂದು ತಹಸೀಲ್ದಾರ್ ಶಿಫಾರಸ್ಸು ಮಾಡಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲವನ್ನು ಕೆರಳಿಸಿದೆ.

English summary
Some people are illegally constructing homestays and resorts in bandipura tiger reserve forests,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X