ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ; ಕುಡಿದ ಮತ್ತಿನಲ್ಲಿ ಸೌದೆಯಿಂದ ಹೊಡೆದು ಹೆಂಡತಿ ಕೊಂದ ಪತಿ

|
Google Oneindia Kannada News

ಚಾಮರಾಜನಗರ, ಜನವರಿ 26: ಕುಡುಕನೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಸೌದೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂಕಹಳ್ಳಿ ಗ್ರಾಮದ ನಿವಾಸಿ ಶಶಿಕಲಾ (38) ಎಂಬಾಕೆಯೇ ಪತಿ ಸುರೇಶನಿಂದ ಹತ್ಯೆಗೀಡಾದವರು. ಸುರೇಶ ಕುಡುಕನಾಗಿದ್ದು, ಪ್ರತಿದಿನವೂ ಕುಡಿದು ಬಂದು ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದನು.

 ಕಾಸರಗೋಡಿನಲ್ಲಿ ಸಹೋದ್ಯೋಗಿಯಿಂದಲೇ ಶಿಕ್ಷಕಿ ಕೊಲೆ; ಗುಟ್ಟು ಬಿಟ್ಟುಕೊಟ್ಟಿತು ಒಂದೆಳೆ ಕೂದಲು ಕಾಸರಗೋಡಿನಲ್ಲಿ ಸಹೋದ್ಯೋಗಿಯಿಂದಲೇ ಶಿಕ್ಷಕಿ ಕೊಲೆ; ಗುಟ್ಟು ಬಿಟ್ಟುಕೊಟ್ಟಿತು ಒಂದೆಳೆ ಕೂದಲು

Husband Killed His Wife With Rod In Gundlupete

ನಿನ್ನೆ ಬೆಳಿಗ್ಗೆ ಕೂಡ ಹೆಂಡ ಕುಡಿದು ಮನೆಗೆ ಬಂದ ಈತ ಹೆಂಡತಿಯೊಂದಿಗೆ ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋಗಿದ್ದು, ಸುರೇಶ ಪತ್ನಿಯ ತಲೆಗೆ ಸೌದೆಯಿಂದ ಹೊಡೆದಿದ್ದಾನೆ. ಕುಸಿದು ಬಿದ್ದ ಶಶಿಕಲಾ ರಕ್ತಸ್ರಾವದಿಂದ ಒದ್ದಾಡಲು ಆರಂಭಿಸಿದ್ದಾರೆ. ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪತಿ ಸುರೇಶನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

English summary
A drunker killed his wife with wooden rod in Ankhalli village of Gundlupet taluk,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X