ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ಪ ಹೋದರು..ಅಮ್ಮನನ್ನಾದರೂ ಉಳಿಸಿಕೊಡಿ...ಮಕ್ಕಳ ಗೋಳು

|
Google Oneindia Kannada News

Recommended Video

Chamarajanagar Temple Tragedy : ಅಪ್ಪ ಹೋದರು..ಅಮ್ಮನನ್ನಾದರೂ ಉಳಿಸಿಕೊಡಿ...ಮಕ್ಕಳ ಗೋಳು | Oneindia Kannada

ಚಾಮರಾಜನಗರ, ಡಿಸೆಂಬರ್ 15: ಪತ್ನಿಯನ್ನು ಬದುಕಿಸಿಕೊಳ್ಳುವ ಆತುರದಲ್ಲಿ ತನ್ನ ಜೀವದ ಹಂಗನ್ನೂ ತೊರೆದು ರಕ್ಷಣೆ ಮುಂದಾಗಿದ್ದ ಪತಿ ಮಾರ್ಗಮಧ್ಯೆಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು! ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!

ಪ್ರಸಾದ ತಿಂದು ನರಳಾಡುತ್ತಿದ್ದ ಪತ್ನಿಯನ್ನು ಬದುಕಿಸಿಕೊಳ್ಳಲು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದ ಪತಿ ದಾರಿ ಮಧ್ಯೆ ತೀವ್ರವಾಗಿ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾರೆ.

ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು! ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!

ಘಟನೆ ಏನು? ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಕೃಷ್ಣನಾಯ್ಕ ದಂಪತಿ ಹೋಗಿದ್ದರು, ದೇವರ ಪೂಜೆ ಮುಗಿಸಿ ಸ್ವಲ್ಪ ಪ್ರಸಾದ ಸೇವಿಸಿ ಮನೆಗೆ ಬಂದಿದ್ದಾರೆ, ಮನೆಯಲ್ಲಿರುವ ಮಕ್ಕಳಿಗೂ ಪ್ರಸಾದ್ ನೀಡಿದ್ದಾರೆ ಆದರೆ ಮಕ್ಕಳು ತಕ್ಷಣಕ್ಕೆ ಪ್ರಸಾದವನ್ನು ತಿಂದಿರಲಿಲ್ಲ.

Husband died when he protect his wife

ಮಹಿಳೆ ಮೋನಿ ಬಾಯಿಗೆ ಸ್ವಲ್ಪ ಹೊತ್ತಲ್ಲೇ ವಾಂತಿ ಆರಂಭವಾಗಿದೆ.ಮೊದಲು ಕಾರಣವೇನು ಎಂದು ಗೊತ್ತಾಗಲಿಲ್ಲ. ಬಳಿಕ ಆಸ್ಪತ್ರೆಗೆ ತೆರಳಿದ ಮೇಲೆ ಕಾರಣ ತಿಳಿದಿತ್ತು. ಆದರೆ ಪತ್ನಿಯನ್ನು ಬದುಕಿಸಿಕೊಳ್ಳುವ ಆತುರದಲ್ಲಿ ತನಗಾಗುತ್ತಿದ್ದ ನೋವನ್ನು ಪತಿ ಹೇಳಿಕೊಳ್ಳಲೇ ಇಲ್ಲ. ಅಂಬ್ಯುಲೆನ್ಸ್‌ನಲ್ಲಿ ತೆರಳುವಾಗ ಮಾರ್ಗ ಮಧ್ಯೆಯೇ ವಾಂತಿ ಹೆಚ್ಚಾಗಿ ಅಲ್ಲಿಯೇ ಮೃತಪಟ್ಟಿದ್ದಾರೆ. ಮಕ್ಕಳ, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ದೇಗುಲದ ಪ್ರಸಾದವೇ ವಿಷವಾಗಿ! ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯ ಬಂದ್ದೇಗುಲದ ಪ್ರಸಾದವೇ ವಿಷವಾಗಿ! ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯ ಬಂದ್

ಕೊಳ್ಳೇಗಾಲದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದ್ದರೂ ಕೂಡ ಮೈಸೂರಿಗೆ ಕರೆತರುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ವಿಷ ಪ್ರಸಾದ ಪ್ರಕರಣ : ಮೈಸೂರಲ್ಲಿ 40 ಜನರಿಗೆ ಚಿಕಿತ್ಸೆ ವಿಷ ಪ್ರಸಾದ ಪ್ರಕರಣ : ಮೈಸೂರಲ್ಲಿ 40 ಜನರಿಗೆ ಚಿಕಿತ್ಸೆ

ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಅಮ್ಮನ ಸ್ಥಿತಿ ಗಂಭೀರವಾಗಿದೆ, ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಮಕ್ಕಳು ಕಣ್ಣೀರಿಡುತ್ತಿದ್ದಾರೆ.

English summary
Husband died when he protect his wife in suluvadi temple chamaarajanagar mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X