ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮೀನಿನಲ್ಲಿದ್ದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ

ಬಿಳಿಗಿರಿರಂಗನಬೆಟ್ಟದ ಅರಣ್ಯವು ಸಮೀಪದಲ್ಲಿರುವ ಕಾರಣದಿಂದ ಹೆಬ್ಬಾವುಗಳು ಜಮೀನಿಗೆ ಬರುವುದು ಮಾಮೂಲಿಯಾಗಿದೆ. ರವಿಬಾಬು ಎಂಬುವವರ ಜಮೀನಿನಲ್ಲಿ ಕಾಣಿಸಿಕೊಂಡ ಹೆಬ್ಬಾವು ಭಾರೀ ಗಾತ್ರದಲ್ಲಿದ್ದು, ಅದನ್ನೀಗ ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 15:ಸಾಮಾನ್ಯವಾಗಿ ಅಲ್ಲಲ್ಲಿ ಹೆಬ್ಬಾವು ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಇದೀಗ ಯಳಂದೂರು ತಾಲೂಕಿನ ಮುರುಟಿಪಾಳ್ಯ ಗ್ರಾಮದ ರವಿಬಾಬು ಎಂಬುವವರ ಜಮೀನಿನಲ್ಲಿ ಕಾಣಿಸಿಕೊಂಡ ಹೆಬ್ಬಾವು ಭಾರೀ ಗಾತ್ರದಲ್ಲಿದ್ದು, ಅದನ್ನೀಗ ರಕ್ಷಿಸಿ ಬಿಳಿಗಿರಿರಂಗನಬೆಟ್ಟದ ಅರಣ್ಯಕ್ಕೆ ಬಿಡಲಾಗಿದೆ.

ಬಿಳಿಗಿರಿರಂಗನಬೆಟ್ಟದ ಅರಣ್ಯವು ಸಮೀಪದಲ್ಲಿರುವ ಕಾರಣದಿಂದ ಹೆಬ್ಬಾವುಗಳು ರೈತರ ಜಮೀನಿಗೆ ಬರುವುದು ಮಾಮೂಲಿಯಾಗಿದೆ. ಹೀಗೆ ಬರುವ ಹೆಬ್ಬಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವುದು ಹಿಂದಿನಿಂದಲೂ ನಡೆದು ಬಂದಿದೆ. ಈ ನಡುವೆ ಎಂದಿನಂತೆ ತಮ್ಮ ಜಮೀನಿಗೆ ತೆರಳಿದ ರವಿಬಾಬು ಅವರಿಗೆ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿದೆ.

ಜಮೀನಿನಲ್ಲಿದ್ದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ

ತಕ್ಷಣ ಅವರು ಸಂತೇಮರಹಳ್ಳಿಯ ಉರಗತಜ್ಞ ಸ್ನೇಕ್ ಮಹೇಶ್ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಬಳಿಕ ಅರಣ್ಯ ಇಲಾಖಾಧಿಕಾರಿಗಳಾದ ಡಿಆರ್‌ಎಫ್ ರಘುರಾಂ ಅವರ ಸಮ್ಮುಖದಲ್ಲಿ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ.

English summary
It is common for the pythons to come to the farmers farm because the Biligirirangana hill forest is near by. The python, which appeared on the farm of Ravi Babu, is so large that it is now protected and left into the Biligirirangana forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X