ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೈಟೆಕ್ ಕಣ್ಗಾವಲು

|
Google Oneindia Kannada News

ಚಾಮರಾಜನಗರ, ಆಗಸ್ಟ್ 21: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುವ ಬೇಟೆ ಸೇರಿದಂತೆ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾವಹಿಸುವ ಸಲುವಾಗಿ ಟ್ರಾಫಿಕ್ ಕ್ಯಾಮರಾದ ಹೈಟೆಕ್ ಕಣ್ಗಾವಲನ್ನು ಅರಣ್ಯ ಇಲಾಖೆ ಮಾಡಿದ್ದು, ಇದು ರಾಜ್ಯದಲ್ಲೇ ಪ್ರಥಮ ಎನ್ನಲಾಗುತ್ತಿದೆ.

ಬಂಡೀಪುರ ವ್ಯಾಪ್ತಿಯ ಅರಣ್ಯದಲ್ಲಿ ಏನಾದರೊಂದು ಅಕ್ರಮ ಚಟುವಟಿಕೆಯ ವರದಿಗಳು ಬರುತ್ತಲೇ ಇದ್ದು, ಇದರ ತಡೆಗೆ ಮತ್ತು ಸಿಬ್ಬಂದಿಗಳ ಚಲನವಲನದ ಬಗ್ಗೆ ನಿಗಾ ವಹಿಸುವ ಸಲುವಾಗಿ ಹುಲಿ ಗಣತಿಗಾಗಿ ಬಳಕೆ ಮಾಡಲಾಗುತ್ತಿದ್ದ ಟ್ರಾಫಿಕ್ ಕ್ಯಾಮರಾವನ್ನು ಕಣ್ಗಾವಲಿಗೆ ಹಾಕಲಾಗಿದ್ದು ಇದರಿಂದ ಹಲವು ರೀತಿಯ ಉಪಯೋಗಗಳಾಗಲಿದೆ.

 ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ಖಾಯಂ ಆಗುತ್ತಾ? ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ಖಾಯಂ ಆಗುತ್ತಾ?

ಹಾಗೆ ನೋಡಿದರೆ ರಾಜ್ಯದಲ್ಲೇ ಅತೀ ಹೆಚ್ಚು ಹುಲಿಗಳಿರುವುದು ಬಂಡೀಪುರ ಅರಣ್ಯದಲ್ಲಿ. ಚಾಮರಾಜನಗರ ಜಿಲ್ಲೆಯ ಎರಡು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಡೀಪುರ ಒಂದಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವುದು ಕೂಡ ಸವಾಲಾಗಿದೆ. ಜತೆಗೆ ಸಿಬ್ಬಂದಿಗಳ ಸೇವೆಗೆ ವೇಗ ನೀಡುವ ಸಲುವಾಗಿ ಡಿಜಿಟಲ್ ಹಾಜರಾತಿಯನ್ನು ಜಾರಿಗೆ ತರಲಾಗುತ್ತಿದೆ.

Hightech Surveillance For Tiger Protected Area Of ​​Bandipur

ಈ ಅಭಯಾರಣ್ಯದಲ್ಲಿ ಸರಿ ಸುಮಾರು 140ಕ್ಕೂ ಹೆಚ್ಚು ಹುಲಿಗಳಿದ್ದು, ಪ್ರತಿ ವರ್ಷವೂ ಹುಲಿಗಳ ಗಣತಿ ಕಾರ್ಯದ ವೇಳೆ ಅರಣ್ಯದಲ್ಲಿ 800ಕ್ಕೂ ಹೆಚ್ಚು ಕ್ಯಾಮರಾಗಳನ್ನು ಹುಲಿಗಳು ಸಂಚಾರ ಮಾಡುವ ಹಾಗೂ ಇನ್ನಿತರ ಕಡೆಗಳಲ್ಲಿ ಅಳವಡಿಸಿ ಎಲ್ಲ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತದೆ. ಗಣತಿಯಾದ ಬಳಿಕ ಕ್ಯಾಮರಾಗಳನ್ನು ಅರಣ್ಯದಿಂದ ತೆರವುಗೊಳಿಸಿ ಗೋದಾಮಿನಲ್ಲಿ ಇಡಲಾಗುತ್ತದೆ.

Infographics: ಹುಲಿಗಳ ಲೆಕ್ಕದಲ್ಲಿ ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2 Infographics: ಹುಲಿಗಳ ಲೆಕ್ಕದಲ್ಲಿ ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2

ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿರುವ ಬಾಲಚಂದ್ರರವರು ಗೋದಾಮಿನಲ್ಲಿರುವ ಕ್ಯಾಮರಾಗಳನ್ನು ಸದ್ಬಳಕೆ ಮಾಡಿಕೊಳ್ಳಲು ಬಂಡೀಪುರ ವ್ಯಾಪ್ತಿಯಲ್ಲಿರುವ 50 ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಅವುಗಳನ್ನು ಅಳವಡಿಸಿ ಅಲ್ಲಿನ ಸಿಬ್ಬಂದಿ ಹಾಜರಾತಿ ಆಧಾರದ ಮೇಲೆ ವೇತನ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕ್ರಮ ಸಿಬ್ಬಂದಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರೊಂದಿಗೆ ಕಳ್ಳಬೇಟೆ ಮೇಲೂ ಕಣ್ಣಿಡಲು ಸಾಧ್ಯವಾಗಲಿದೆ.

Hightech Surveillance For Tiger Protected Area Of ​​Bandipur

ಇನ್ನು ಸಿಬ್ಬಂದಿಗೆ ಎಂ ಸ್ವೈಫ್ ಆಪ್ ಸಾಫ್ಟ್‌ವೇರ್ ಇರುವ ಮೊಬೈಲ್ ಕೊಡಲಾಗಿದ್ದು, ಇದರಿಂದ ಸಿಬ್ಬಂದಿ ಯಾವ ಸಮಯದಲ್ಲಿ ಎಲ್ಲಿ ಸಂಚಾರ ಮಾಡಿದ್ದರು ಎಂಬುದನ್ನು ತಿಳಿಯಬಹುದು. ಆಪ್ ಸಾಫ್ಟ್ ವೇರ್ ಮೂಲಕ ಡಾಟಾ ಸಂಗ್ರಹಿಸಿ ಕಾಡು ಸಂರಕ್ಷಣೆ ಮಾಡುವ ಉದ್ದೇಶವೂ ಇದರಲ್ಲಿದೆ.

ಇದೀಗ ಬಂಡೀಪುರದಲ್ಲಿ ಅಳವಡಿಸಲಾಗಿರುವ ಕ್ಯಾಮರಾಗಳ ಮೂಲಕ ಸಂಗ್ರಹವಾಗುವ ಮಾಹಿತಿಯಿಂದ ಕಾಡಿನಲ್ಲಿ ನಡೆಯುವ ಮಾನವ ಮತ್ತು ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಜತೆಗೆ ಅರಣ್ಯದಲ್ಲಿ ಅಪರಿಚಿತರ ಪ್ರವೇಶ ಮತ್ತು ಕಳ್ಳಬೇಟೆಗಾರರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಈ ಹೈಟೆಕ್ ಮಾದರಿಯ ಕ್ರಮ ಮುಂದಿನ ದಿನಗಳಲ್ಲಿ ಯಾವ ರೀತಿ ಉಪಯೋಗವಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.

English summary
The forest department has adopted high-tech surveillance of a traffic camera to track illegal activities, including hunting in the Tiger protected area of ​​Bandipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X