• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂಡೀಪುರದಲ್ಲಿ ನೈಸರ್ಗಿಕ ಡ್ಯಾಂನಿಂದ ಅಂತರ್ಜಲ ವೃದ್ಧಿ!

|

ಚಾಮರಾಜನಗರ, ಅಕ್ಟೋಬರ್ 29: ಕಳೆದ ಮೂರು ವರ್ಷಗಳಿಂದ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೆರೆಕಟ್ಟೆಗಳು ತುಂಬಿ ಎಲ್ಲೆಡೆಯೂ ಹಸಿರು ನಳನಳಿಸುತ್ತಿದೆ. ಜತೆಗೆ ವನ್ಯಪ್ರಾಣಿಗಳಿಗೂ ಆಹಾರ ದೊರೆಯುತ್ತಿದ್ದು ಎಲ್ಲವೂ ಖುಷಿಯಾಗಿವೆ.

ಮೂರು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಮಳೆ ಸಮರ್ಪಕವಾಗಿ ಸುರಿಯದ ಕಾರಣ ಕೆರೆಕಟ್ಟೆಗಳು ತುಂಬದೆ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿನ ಸಮಸ್ಯೆಯುಂಟಾಗಿತ್ತು. ಈ ವೇಳೆ ಪ್ರಾಣಿಗಳಿಗೆ ನೀರು ಒದಗಿಸುವುದೇ ಅಧಿಕಾರಿಗಳಿಗೆ ಸವಾಲು ಆಗಿತ್ತು. ಹೀಗಾಗಿ ಬೋರ್ ವೆಲ್ ಕೊರೆದು ಸೋಲಾರ್ ಮೋಟಾರ್ ಮೂಲಕ ಕೆರೆಗೆ ನೀರನ್ನು ತುಂಬಿಸುವ ಕೆಲಸ ಮಾಡಲಾಗಿತ್ತು. ಅವತ್ತಿನ ಮಟ್ಟಿಗೆ ಇದೊಂದು ಸಾಧನೆಯಾಗಿತ್ತು ಎಂದರೆ ತಪ್ಪಾಗಲಾರದು. ಅವತ್ತಿನ ಬರಕ್ಕೆ ನಲುಗಿದ ಬಹುತೇಕ ಪ್ರಾಣಿಗಳು ನೀರನ್ನು ಅರಸಿಕೊಂಡು ದೂರ ಹೋಗಿದ್ದವು. 2017ರಲ್ಲಿ ಸುರಿದ ಹಿಂಗಾರು ಮಳೆ ನಂತರದ ವರ್ಷಗಳಲ್ಲಿ ಸುರಿದ ಮುಂಗಾರು ಮಳೆಯಿಂದಾಗಿ ಬಂಡೀಪುರದ ಕೆರೆಕಟ್ಟೆಗಳು ಭರ್ತಿಯಾಗುವುದರೊಂದಿಗೆ ಹಸಿರು ಸಮೃದ್ಧಿಯಾಗಿದೆ.

ಅವತ್ತು ಬರಕ್ಕೆ ನಲುಗಿದ್ದ ವನ್ಯಪ್ರಾಣಿಗಳು

ಅವತ್ತು ಬರಕ್ಕೆ ನಲುಗಿದ್ದ ವನ್ಯಪ್ರಾಣಿಗಳು

ಈಗ ಯಾವುದೇ ಸಮಸ್ಯೆಯಿಲ್ಲದೆ ವನ್ಯಪ್ರಾಣಿಗಳು ಖುಷಿಯಿಂದ ನಲಿದಾಡುತ್ತಿವೆ. ಈ ಹಿಂದೆ ನೀರಿಲ್ಲದೆ, ಅಂತರ್ಜಲದ ಸಮಸ್ಯೆ ಕಾಣಿಸಿಕೊಂಡಿದ್ದನ್ನು ನೋಡಿದ ಅರಣ್ಯಾಧಿಕಾರಿಗಳು ಮುಂದೆ ಇದೇ ರೀತಿಯಾಗಬಾರದು, ಮಳೆಗಾಲದಲ್ಲಿ ಹರಿದು ಹೋಗಿ ಪೋಲಾಗುವ ನೀರನ್ನು ತಡೆ ಹಿಡಿದು ಆ ಮೂಲಕ ಮಣ್ಣು ಸವಕಳಿ ತಪ್ಪಿಸಿ ನೀರನ್ನು ಅರಣ್ಯದಲ್ಲಿಯೇ ಇಂಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚೆಕ್ ಡ್ಯಾಂಗಳಲ್ಲಿ ಮಳೆ ಹರಿದು ಪೋಲಾಗದೆ ಸಂಗ್ರಹವಾಗುತ್ತಿರುವುದರಿಂದ ನೀರು ಉಪಯೋಗಕ್ಕೆ ಬರುತ್ತಿದೆಯಲ್ಲದೆ ಸುತ್ತಮುತ್ತ ಅಂತರ್ಜಲ ಮಟ್ಟ ಕುಸಿಯದಂತೆ ತಡೆಯಲು ಸಹಕಾರಿಯಾಗುತ್ತಿದೆ.

ನಿಷೇಧದ ನಡುವೆಯೂ ಕಾವೇರಿ ನದಿಯಲ್ಲಿ ತೆಪ್ಪದ ಸವಾರಿ

ಬದುಗಳಿಗೆ ಅಡ್ಡಲಾಗಿ ಕಟ್ಟೆ ನಿರ್ಮಾಣ

ಬದುಗಳಿಗೆ ಅಡ್ಡಲಾಗಿ ಕಟ್ಟೆ ನಿರ್ಮಾಣ

ಅರಣ್ಯ ಇಲಾಖೆ ಸಿಬ್ಬಂದಿಗಳೇ ಅರಣ್ಯದಲ್ಲಿ ಇರುವ ಸಂಪನ್ಮೂಲಗಳನ್ನು ಬದುಗಳ ನಡುವೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ನೀರನ್ನು ನಿಲ್ಲುವಂತೆ ಮಾಡಿದ್ದು, ಇದರಿಂದ ಪ್ರಾಣಿಗಳಿಗೆ ಕುಡಿಯಲು ನೀರು ಸಿಗುವುದರೊಂದಿಗೆ ನೀರು ಅಲ್ಲಿಯೇ ಇಂಗುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಲು ಸಾಧ್ಯವಾಗಿದೆ. ಅರಣ್ಯಾಧಿಕಾರಿಗಳ ಈ ಕಾರ್ಯದಿಂದಾಗಿ ಹಲವಷ್ಟು ಉಪಯೋಗಗಳಾಗುತ್ತಿರುವುದಂತು ನಿಜ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಅಭಯಾರಣ್ಯ ವ್ಯಾಪ್ತಿಯ ಹೆಡಿಯಾಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ಅರಣ್ಯದಲ್ಲಿಯೇ ಮಳೆ ನೀರು ಸಂಗ್ರಹಿಸಲು ಹಾಗೂ ಮಣ್ಣು ಸವಕಳಿ ತಪ್ಪಿಸುವ ಕೆಲಸವನ್ನು ಮಾಡಲಾಗಿದ್ದು, ಯಾವುದೇ ವೆಚ್ಚ ಭರಿಸದೇ ಅರಣ್ಯ ಸಿಬ್ಬಂದಿ ಮತ್ತು ಸಾಕಾನೆಗಳ ಮೂಲಕ ಬದುಗಳ ನಡುವೆ ಚೆಕ್ ಡ್ಯಾಂ ನಿರ್ಮಿಸಲಾಗಿದೆ.

ಚೆಕ್ ಡ್ಯಾಂ ಮಾದರಿಯ ಕಟ್ಟೆ ನಿರ್ಮಾಣ

ಚೆಕ್ ಡ್ಯಾಂ ಮಾದರಿಯ ಕಟ್ಟೆ ನಿರ್ಮಾಣ

ಬಹಳಷ್ಟು ಸಲ ಮಳೆ ಸುರಿದಾಗ ನೀರು ಹರಿಯುವ ರಭಸಕ್ಕೆ ಮಣ್ಣು ಸವಕಳಿಯಾಗುತ್ತಿತ್ತು. ಇದರಿಂದ ಹೊಂಡಗಳು ಏರ್ಪಟ್ಟು ಸಮಸ್ಯೆಯಾಗುತ್ತಿತ್ತು. ಅದಕ್ಕೂ ಈಗ ಪರಿಹಾರ ದೊರೆತಂತಾಗಿದೆ. ಅರಣ್ಯದಲ್ಲಿ ಸಿಗುವಂತಹ ಮುರಿದು ಬಿದ್ದ ಮರಗಳು, ಕಲ್ಲುಮಣ್ಣು ಎಲ್ಲವನ್ನು ಬಳಸಿಕೊಂಡು ನೀರು ಮತ್ತು ಮಣ್ಣಿನ ಸವಕಳಿ ತಪ್ಪಿಸುವ ಕೆಲಸವನ್ನು ಮಾಡಲಾಗಿದೆ. ಈಗಾಗಲೇ ಹೆಡಿಯಾಲ ಉಪವಿಭಾಗದ ಎನ್.ಬೇಗೂರು, ಗುಂಡ್ರೆ, ಎ.ಎಂ.ಗುಡಿ, ಹೆಡಿಯಾಲ, ನುಗು ವಲಯಗಳಲ್ಲಿ 100ಕ್ಕೂ ಹೆಚ್ಚು ಚೆಕ್ ಡ್ಯಾಂ ಗಳು ರೀತಿಯಲ್ಲಿ ಕಟ್ಟೆಯನ್ನು ಕಟ್ಟಲಾಗಿದೆ. ಯಾವುದೇ ರೀತಿಯಲ್ಲೂ ಹಣ ಬಳಕೆ ಮಾಡದೆ ಅರಣ್ಯ ಸಿಬ್ಬಂದಿ, ಸಾಕಾನೆಗಳ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತಿರುವುದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಕಾರಣವಾಗುತ್ತಿದೆ.

ಅಂತರ್ಜಲ ವೃದ್ಧಿಗೆ ಸಹಕಾರಿ

ಅಂತರ್ಜಲ ವೃದ್ಧಿಗೆ ಸಹಕಾರಿ

ಅಷ್ಟೇ ಅಲ್ಲದೆ ಪರಿಸರ ಪ್ರೇಮಿಗಳು ಕೂಡ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ದುಂದುವೆಚ್ಚದ ಹಲವು ಯೋಜನೆಗಳು ಹಳ್ಳ ಹಿಡಿದಿರುವಾಗ, ಶೂನ್ಯ ಬಂಡವಾಳದ ಮತ್ತು ಪರಿಸರ ಸ್ನೇಹಿ ಕೆಲಸ ಕಾರ್ಯಗಳು ಅರಣ್ಯದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇಂತಹ ಕೆಲಸವನ್ನು ಅರಣ್ಯಗಳಲ್ಲಿ ಮಾಡುತ್ತಾ ಬಂದರೆ ಅಂತರ್ಜಲದ ಸಮಸ್ಯೆ ತಡೆಯಲು ಸಾಧ್ಯವಿದೆ. ಜತೆಗೆ ಮಳೆಗಾಲದಲ್ಲಿ ಹರಿದು ಹೋಗಿ ನೀರು ಪೋಲಾಗುವುದನ್ನು ತಡೆಗಟ್ಟಿದಂತಾಗುತ್ತದೆ.

ಅರಣ್ಯದ ಬಹುತೇಕ ಕಡೆ ನಿಸರ್ಗ ನಿರ್ಮಿತ ಬದುಗಳಿದ್ದು, ಅವುಗಳಿಗೆ ಅಡ್ಡಲಾಗಿ ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಟ್ಟೆ ಕಟ್ಟುವುದರಿಂದ, ನೀರು ಅದರಲ್ಲಿ ಸಂಗ್ರಹವಾಗಿ ಒಂದಷ್ಟು ಸಮಯ ಇರುವುದರಿಂದ ಸುತ್ತಮುತ್ತ ಇರುವ ಗಿಡಮರಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ.

English summary
heavy rainfall over the last three years in the Bandipur sanctuary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X