ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿ.ಆರ್. ಹಿಲ್ಸ್‌ನಲ್ಲಿ ಹುಲಿಗಳ ಗಾಂಭೀರ್ಯದ ನಡಿಗೆ

|
Google Oneindia Kannada News

ಚಾಮರಾಜನಗರ, ಜುಲೈ 28: ವರುಣನ ಕೃಪೆಯಿಂದ ಮಲೆ ಮಹದೇಶ್ವರ ಬೆಟ್ಟವು ಹಸಿರು ಹಚ್ಚಡವನ್ನು ಹೊದ್ದು ಮಲಗಿದ್ದು, ಹಸಿರ ವನದಲ್ಲಿ ವನ್ಯ ಮೃಗಗಳು ಸಂಭ್ರಮದಿಂದ ಓಡಾಡುತ್ತಿವೆ. ಇವುಗಳ ನಡುವೆ ಇದೀಗ ವನರಾಜ ರಾಜಗಾಂಭೀರ್ಯದಿಂದ ಸಂಚರಿಸುತ್ತಿದ್ದು, ಅಲ್ಲೊಮ್ಮೆ, ಇಲ್ಲೊಮ್ಮೆ ನೋಡುಗರ ಕಣ್ಣಿಗೆ ಸಿಕ್ಕಿ ಬೀಳುತ್ತಿದ್ದಾನೆ. ಈ ಅಪರೂಪದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿ ಗಮನ ಸೆಳೆಯುತ್ತಿವೆ.

ಸಾಮಾನ್ಯವಾಗಿ ಆಗೊಮ್ಮೆ, ಈಗೊಮ್ಮೆ ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿಗಳು ಕಾಣಿಸುವುದು ಹೊಸತೇನಲ್ಲ. ಆದರೆ ಇದೀಗ ಹಸಿರ ಹಚ್ಚಡದಿಂದ ಕಂಗೊಳಿಸುವ ದಟ್ಟ ಅರಣ್ಯದ ನಡುವೆ ಜತೆ ಜತೆಯಾಗಿ ಅದರಲ್ಲೂ ಒಂದೇ ಕಡೆಯಲ್ಲಿ ನಾಲ್ಕು ಹುಲಿಗಳು ನೋಡುಗರ ಕಣ್ಣಿಗೆ ಕಾಣಿಸಿರುವುದು ಖುಷಿಯ ವಿಚಾರವಾಗಿದೆ. ಕೊರೊನಾ ಲಾಕ್‌ಡೌನ್ ತೆರವು ನಂತರ ಪ್ರವಾಸಿಗರು ಬಿಳಿಗಿರಿರಂಗನ ಬೆಟ್ಟದತ್ತ ಮುಖ ಮಾಡಿದ್ದು, ಹೀಗೆ ಬರುವವರು ಇಲ್ಲಿನ ನಿಸರ್ಗವನ್ನು ಕಣ್ತುಂಬಿಸಿಕೊಂಡು ಸಂಭ್ರಮಿಸುತ್ತಾರೆ. ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಆ ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಾ ಸಾಗುತ್ತಾರೆ.

ಮಾದಪ್ಪನಿಗೆ 47 ದಿನಗಳಲ್ಲಿ 2.33 ಕೋಟಿ ರೂ. ಆದಾಯ ಮಾದಪ್ಪನಿಗೆ 47 ದಿನಗಳಲ್ಲಿ 2.33 ಕೋಟಿ ರೂ. ಆದಾಯ

ದೊಡ್ಡಸಂಪಿಗೆ ಬಳಿ ಹುಲಿಗಳು ಪ್ರತ್ಯಕ್ಷ

ದೊಡ್ಡಸಂಪಿಗೆ ಬಳಿ ಹುಲಿಗಳು ಪ್ರತ್ಯಕ್ಷ

ಈ ನಡುವೆ ಅರಣ್ಯದಂಚಿನಲ್ಲಿ ವಾಸವಿರುವ ಗಿರಿಜನರು ತೆರಳುತ್ತಿದ್ದ ವೇಳೆ ದೊಡ್ಡಸಂಪಿಗೆ ಬಳಿ ನಾಲ್ಕು ಹುಲಿಗಳು ಸಂಚಾರ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಅದನ್ನು ಅವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅದು ಈಗ ವೈರಲ್ ಆಗಿದೆ. ಈ ಪ್ರದೇಶಗಳು ನಿರ್ಬಂಧಿತ ಪ್ರದೇಶವಾಗಿದ್ದು, ಅದರಲ್ಲೂ ಐತಿಹಾಸಿಕ ದೊಡ್ಡಸಂಪಿಗೆ ಇರುವ ಪ್ರದೇಶಕ್ಕೆ ಪ್ರವಾಸಿಗರಿಗೆ ಅವಕಾಶವಿಲ್ಲ. ಈ ಪ್ರದೇಶದಲ್ಲಿಯೇ ಹುಲಿಗಳು ಕಂಡು ಬಂದಿದೆ. ಇದು ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿಗಳ ಸಂತತಿ ಗಣನೀಯವಾಗಿ ಹೆಚ್ಚುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಬಿಳಿಪಟ್ಟೆ ಹುಲಿಗಳ ಅವಾಸ ತಾಣ

ಬಿಳಿಪಟ್ಟೆ ಹುಲಿಗಳ ಅವಾಸ ತಾಣ

ಇನ್ನು ಬಿಳಿಗಿರಿರಂಗನಬೆಟ್ಟದ ಬಗ್ಗೆ ಹೇಳಬೇಕಾದರೆ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 1552 ಮೀಟರ್ ಎತ್ತರದಲ್ಲಿದ್ದು, ಸುಮಾರು 750 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಇಲ್ಲಿನ ಮುಖ್ಯ ವಿಶೇಷತೆ ಏನೆಂದರೆ ಬಿಳಿಪಟ್ಟೆಗಳ ಹುಲಿಗಳ ಹಾಗೂ ಏಷ್ಯಾದ ಆನೆಗಳ ವಾಸಕ್ಕೆ ಇದು ಯೋಗ್ಯ ತಾಣವಾಗಿದೆ.

420ಕ್ಕೂ ಅಧಿಕ ಪಕ್ಷಿ ಸಂಕುಲಗಳು

420ಕ್ಕೂ ಅಧಿಕ ಪಕ್ಷಿ ಸಂಕುಲಗಳು

ಅರಣ್ಯದಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೂರುಗ, ಬೀಟೆ, ಬನ್ನಿ ಮೊದಲಾದ ಅಮೂಲ್ಯ ಮರಗಳಲ್ಲದೆ ಐತಿಹಾಸಿಕ ದೊಡ್ಡ ಮತ್ತು ಚಿಕ್ಕ ಸಂಪಿಗೆ ಇಲ್ಲಿನ ಆಕರ್ಷಣೆಯಾಗಿದೆ. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳು ಹೀಗೆ ಸುಮಾರು 420ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ ಎಂದು ಹೇಳಲಾಗುತ್ತಿದೆ.

Recommended Video

ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಪೊಲೀಸರು | Oneindia Kannada
ಹುಲಿ ಸಂತತಿ ಕಾಪಾಡುವ ಕಾರ್ಯ

ಹುಲಿ ಸಂತತಿ ಕಾಪಾಡುವ ಕಾರ್ಯ

ಈಗಾಗಲೇ ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿರುವುದರಿಂದ, ಹುಲಿ ಸಂತತಿಯನ್ನು ಕಾಪಾಡುವ ಕಾರ್ಯ ನಡೆಯುತ್ತಿದೆ. ಇದೀಗ ಹುಲಿಗಳು ಅಲ್ಲಲ್ಲಿ ಕಾಣುತ್ತಿರುವುದು ನೋಡುಗರಿಗೆ ಖುಷಿ ತಂದರೂ, ಅರಣ್ಯದಂಚಿನ ಜನರಲ್ಲಿ ಭಯವೂ ಇಲ್ಲದಿಲ್ಲ. ಅದೇನೇ ಇರಲಿ ಒಟ್ಟಾರೆ ಬಿ.ಆರ್. ಹಿಲ್ಸ್ ಇದೀಗ ಹುಲಿಗಳಿಂದಾಗಿ ಗಮನ ಸೆಳೆಯುತ್ತಿರುವುದಂತು ಸತ್ಯ.

English summary
Four tigers have been sighted in Biligirirangana hill forest area of Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X