ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರ ಸೋಗಿನಲ್ಲಿ ಕಾರು ಚಾಲಕನನ್ನು ದೋಚಿದ ದುಷ್ಕರ್ಮಿಗಳು

By ಮೈಸೂರು ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜನವರಿ 15: ಪ್ರವಾಸಿಗರ ಸೋಗಿನಲ್ಲಿ ಕಾರು ಬಾಡಿಗೆ ಮಾಡಿಕೊಂಡು ಬಂದ ದುಷ್ಕರ್ಮಿಗಳು ಮಾರ್ಗ ಮಧ್ಯೆ ಚಾಲಕನ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜನಗರ ಸಮೀಪದ ಹನೂರು ಬಳಿ ನಡೆದಿದೆ.

ಕಾರು ಚಾಲಕನನ್ನು ಮೈಸೂರಿನ ಲಲಿತಾದ್ರಿಪುರದ ನಂದೀಶ್ ಎಂದು ಗುರುತಿಸಲಾಗಿದೆ. ಗುರುವಾರ ನಾಲ್ವರು ಯುವಕರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ಎಂದು ಹೇಳಿ ಕಾರನ್ನು ಬಾಡಿಗೆಗೆ ಪಡೆದಿದ್ದರು.

ಬೆಂಗಳೂರು ನೈಸ್ ರಸ್ತೆಯಲ್ಲಿ ದರೋಡೆ ವದಂತಿ:ದೂರು ನೀಡಿದ ಅಶೋಕ್ ಖೇಣಿಬೆಂಗಳೂರು ನೈಸ್ ರಸ್ತೆಯಲ್ಲಿ ದರೋಡೆ ವದಂತಿ:ದೂರು ನೀಡಿದ ಅಶೋಕ್ ಖೇಣಿ

ಹನೂರು ಸಮೀಪ ಬರುತ್ತಿದ್ದಂತೆ ಒಬ್ಬ ಯುವಕ ವಾಂತಿ ಬರುತ್ತಿದೆ ಕಾರು ನಿಲ್ಲಿಸಿ ಎಂದಿದ್ದಾನೆ. ಕಾರು ನಿಲ್ಲುತ್ತಿದ್ದಂತೆ ಚಾಲಕನಿಗೆ ಚಾಕು ತೋರಿಸಿ ಹಣವಿದ್ದರೆ ಕೊಟ್ಟುಬಿಡು, ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ.

ವ್ಯಾಪಾರಿಯಿಂದ 37 ಲಕ್ಷ ದರೋಡೆ : ಪ್ರಮುಖ ಆರೋಪಿ ಸೆರೆ ವ್ಯಾಪಾರಿಯಿಂದ 37 ಲಕ್ಷ ದರೋಡೆ : ಪ್ರಮುಖ ಆರೋಪಿ ಸೆರೆ

Four People Attacked Cab Driver In Hanur

ದುಷ್ಕರ್ಮಿಗಳ‌ ಪೈಕಿ ಒಬ್ಬಾತ ಬಾಯಿ ಬಿಗಿಹಿಡಿದುಕೊಂಡು ಪ್ಯಾಂಟ್, ಶರ್ಟ್‌ ಬಿಚ್ಚಿ ಕೈ ಹಾಗೂ ಬಾಯಿಗೆ ಕಟ್ಟಿದ್ದಾರೆ. ಬಲತೊಳಿಗೆ ಹಾಗೂ ಇತರೆಡೆ ಚಾಕುವಿನಿಂದ ಇರಿದು ಚಾಲಕನ ಬಳಿ ಇದ್ದ 14 ಸಾವಿರ ರೂ. ಬೆಲೆ ಬಾಳುವ ಮೊಬೈಲ್, ಹಣವನ್ನು ಕಸಿದುಕೊಂಡಿದ್ದಾನೆ.

ಹೆದ್ದಾರಿಯಲ್ಲಿ 'ದರೋಡೆ' ಮಾಡಿದ ಆನೆ: ವೈರಲ್ ವಿಡಿಯೋಹೆದ್ದಾರಿಯಲ್ಲಿ 'ದರೋಡೆ' ಮಾಡಿದ ಆನೆ: ವೈರಲ್ ವಿಡಿಯೋ

Recommended Video

BJP ಸರ್ಕಾರದ ಬಗ್ಗೆ Munirathna ಗೆ ನಂಬಿಕೆ ಇಲ್ವಾ ?? | Oneindia Kannada

ಎಲ್ಲರೂ ಸೇರಿ ಕಾರನ್ನು ಹಳ್ಳವೊಂದಕ್ಕೆ ತಳ್ಳಿ ಪರಾರಿಯಾಗಿದ್ದಾರೆ. ಆ ಮಾರ್ಗವಾಗಿ ಬರುತಿದ್ದ ಪೊಲೀಸ್ ಜೀಪ್‌ನಲ್ಲಿದ್ದ ಅಧಿಕಾರಿಗಳು ಚಾಲಕನನ್ನು ಗುರುತಿಸಿ, ರಕ್ಷಿಸಿದ್ದಾರೆ. ಗಾಯಗೊಂಡಿರುವ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಳ್ಳೇಗಾಲ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

English summary
Four people attacked cab driver and escape with money, mobile phone in Hanur, Chamarajnagar. People come from Bengaluru international airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X