ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಸಿವೆಹಳ್ಳದ ಬಳಿ ಕೊನೆಗೂ ಬೋನಿಗೆ ಬಿದ್ದ ಹೆಣ್ಣು ಚಿರತೆ, ನಿಟ್ಟುಸಿರುಬಿಟ್ಟ ಜನ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜನವರಿ 18: ಆಗಾಗ್ಗೆ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಾ ಜಾನುವಾರು, ಸಾಕು ನಾಯಿಗಳ ಮೇಲೆ ದಾಳಿ ಮಾಡುತ್ತಾ ಗ್ರಾಮಗಳಲ್ಲಿ ಆತಂಕ ಹುಟ್ಟಿಸಿದ್ದ ಹೆಣ್ಣು ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು ಇದರಿಂದ ರೈತರು ಸೇರಿದಂತೆ ಗ್ರಾಮದ ಜನ ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಈ ಹೆಣ್ಣು ಚಿರತೆಯು ಚಾಮರಾಜನಗರ ತಾಲೂಕಿನ ಅರಕಲವಾಡಿ, ಲಿಂಗಣಪುರ ಸುತ್ತಮುತ್ತಲಿನ ಜಮೀನುಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತಲ್ಲದೆ ಜಾನುವಾರು ಮತ್ತು ಸಾಕು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ತಿಂದು ಹಾಕುತ್ತಿತ್ತು. ಇದರ ಹಾವಳಿಯಿಂದಾಗಿ ಬೇಸತ್ತಿದ್ದ ಜನ ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿತ್ತು. ಸಂಜೆಯಾದರೆ ಜಮೀನಿಗೆ ತೆರಳಲು ರೈತರು ಭಯಪಡುತ್ತಿದ್ದರು.

ಚಿರತೆ ಮರಿಯನ್ನು 'ದತ್ತು' ತೆಗೆದುಕೊಂಡು ಹಾಲುಣಿಸಿದ ಸಿಂಹಿಣಿಚಿರತೆ ಮರಿಯನ್ನು 'ದತ್ತು' ತೆಗೆದುಕೊಂಡು ಹಾಲುಣಿಸಿದ ಸಿಂಹಿಣಿ

ಚಿರತೆಯಿಂದ ಭಯಗೊಂಡಿದ್ದ ಗ್ರಾಮಸ್ಥರು ಬೋನಿಟ್ಟು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಲಿಂಗಣಪುರ ಬಳಿಯ ಸಾಸಿವೆಹಳ್ಳದ ಕರಿಕಲ್ಲು ಕ್ವಾರಿ ಬಳಿ ಚಿರತೆಯನ್ನು ಸೆರೆ ಹಿಡಿಯುವ ಸಲುವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಇರಿಸಿ ಕಾರ್ಯಾಚರಣೆ ಆರಂಭಿಸಿದ್ದರು.

Forest department staff finally captured leopard

ಇರ್ಜಿಕೊಡ್ಲು ಬಳಿ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆಇರ್ಜಿಕೊಡ್ಲು ಬಳಿ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆ

ಚಿರತೆಯ ಹಾವಳಿಯಿಂದ ತತ್ತರಿಸಿದ್ದ ಅರಕಲವಾಡಿ, ಲಿಂಗಣಪುರ ಸುತ್ತಮುತ್ತಲಿನ ಜಮೀನುಗಳ ಜನ ಯಾವಾಗ ಚಿರತೆ ಬೋನಿಗೆ ಬೀಳುತ್ತದೆಯೋ ಎಂದು ಕಾಯುತ್ತಿದ್ದರು. ಬೋನಿನಲ್ಲಿ ನಾಯಿಯನ್ನು ಕಟ್ಟಲಾಗಿತ್ತು. ಕಳೆದ ಒಂದು ವಾರದಿಂದ ಕಾಯುತ್ತಲೇ ಬರಲಾಗಿತ್ತು. ಕೊನೆಗೂ ಬೋನಿಗೆ ಚಿರತೆ ಬಿದ್ದಿದೆ.

Forest department staff finally captured leopard

ವಿಷಯ ತಿಳಿಯುತ್ತಿದ್ದಂತೆಯೇ ಚಾಮರಾಜನಗರ ಪ್ರಭಾರ ವಲಯ ಅರಣ್ಯಾಧಿಕಾರಿ ಮಹದೇವಯ್ಯ, ವನಪಾಲಕ ದೊರೆನಾಯಕ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿರತೆಯನ್ನು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ.

English summary
Forest department staff finally captured leopard near Sasivahalla karikal quarry. This leopard given trouble to people for a long time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X