ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲು ನನಗೆ ಹೊಸತಲ್ಲ: ಸಿ.ಎಸ್.ನಿರಂಜನಕುಮಾರ್

ಸೋಲು ನನಗೆ ಹೊಸತಲ್ಲ, ನಾನು ಜನರ ತೀರ್ಪಿಗೆ ಗೌರವ ನೀಡುತ್ತೇನೆ ಎಂದು ಗುಂಡ್ಲೆಪೇಟೆ ಉಪಚುನಾವಣೆಯ ಪರಾಜಿತ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಹೇಳಿದ್ದಾರೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ಏಪ್ರಿಲ್ 14: "ನನಗೆ ಸೋಲು ಹೊಸದಲ್ಲ, ಆದರೆ ನನ್ನ ಸೋಲಿನ ನೋವಿಗಿಂತ ನನಗಾಗಿ ತಿಂಗಳುಗಟ್ಟಲೆ ದುಡಿದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರ, ಹಾಗೂ ಕಾರ್ಯಕರ್ತರ ಶ್ರಮ ವ್ಯರ್ಥವಾದ ಬಗ್ಗೆ ನೋವಾಗುತ್ತಿದೆ ಎಂದು ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಜನರ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಎರಡೂ ಚುನಾವಣೆಯಲ್ಲಿ ಸೋತಿದ್ದರೂ ಸಹ ಕ್ಷೇತ್ರದಲ್ಲಿನ ಜನತೆಯ ಜೊತೆ ಸಂಪರ್ಕದಲ್ಲಿದ್ದೆ. ಕ್ಷೇತ್ರದಲ್ಲಿ ಸುತ್ತಾಡಿ ಜನರಿಂದ ಬಂದ ಅಭಿಪ್ರಾಯದಂತೆ ಬಿಜೆಪಿಯ ಪರ ಸ್ಪಷ್ಟವಾದ ಒಲವು ಮತದಾರರಲ್ಲಿ ಇತ್ತು. ಆದರೆ ಈ ಫಲಿತಾಂಶ ಅಚ್ಚರಿತಂದಿದೆ.[ಗುಂಡ್ಲುಪೇಟೆ ಉಪಚುನಾವಣೆ: ಡಿಕೆಶಿ ರಾಜಕೀಯ ತಂತ್ರಗಳು ಸಕ್ಸಸ್]

Failure is not a new thing to me: Niranjan Kumar

ಕಳೆದ ಚುನಾವಣೆಯಲ್ಲಿ 66 ಸಾವಿರ ಮತಪಡೆದಿದ್ದ ನನಗೆ ಈ ಬಾರಿ 13 ಸಾವಿರ ಹೆಚ್ಚುವರಿ ಮತಗಳನ್ನು ನೀಡಿದ್ದು, ಮತದಾರರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಸೋಲಿನಿಂದ ಎದೆಗುಂದದೆ ಮುಂದಿನ ದಿನಗಳಲ್ಲೂ ಸಹ ಕ್ಷೇತ್ರದಲ್ಲಿನ ಜನತೆಯ ಸಂಪರ್ಕದಲ್ಲಿರುತ್ತೇನೆ. ಮುಂದಿನ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.[ಕಾಂಗ್ರೆಸ್ ಗೆಲುವಿಗೆ ಸೋಪಾನವಾದ 9 ಸಂಗತಿಗಳು]

ಏಪ್ರಿಲ್ 9 ರಂದು ನಡೆದ ಗುಂಡ್ಲೆಪೇಟೆ ವಿಧಾನ ಸಭಾ ಉಪಚುನಾವಣೆ ಏಪ್ರಿಲ್ 13 ರಂದು ಹೊರಬಿದ್ದಿದ್ದು, ಗುಂಡ್ಲೆಪೇಟೆಯಲ್ಲಿ ನಿರಂಜನ್ ಕುಮಾರ್ ಪ್ರತಿಸ್ಪರ್ಧಿ, ಕಾಂಗ್ರೆಸ್ ನ ಗೀತಾ ಮಹದೇವಪ್ರಸಾದ್ ಜಯಗಳಿಸಿದ್ದರು.

English summary
Failure is not a new thing to me Gundlupet by election BJP candidate Niranjan Kumar, who has defeated by Geeta Mahadevaprasad of Congress told. I respect the people's opinion he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X