ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಒನ್ಇಂಡಿಯಾ ಸಂದರ್ಶನ

ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ಹಿನ್ನೆಲೆಯಲ್ಲಿ ಒನ್ ಇಂಡಿಯಾ ವರದಿಗಾರ್ತಿ ಅನುಷಾ ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಿದ್ದು, ಅದರ ಪೂರ್ಣ ಪಾಠ ಇಲ್ಲಿದೆ

By ಅನುಷಾ ರವಿ
|
Google Oneindia Kannada News

ಗುಂಡ್ಲುಪೇಟೆ, ಏಪ್ರಿಲ್ 5: ಕಾಂಗ್ರೆಸ್ ನ ಪ್ರಮುಖ ಮುಖಂಡರು ಬಿಜೆಪಿಗೆ ವಲಸೆ ಹೋಗಿದ್ದಾರೆ. ಆದರೂ ಗುಂಡ್ಲುಪೇಟೆ ಹಾಗೂ ನಂಜನಗೂಡಿನಲ್ಲಿ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸವಿದೆ ಎನ್ನುತ್ತಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾಯಕರು ತಮ್ಮ ವಿಶ್ವಾಸ ಬದಲಿಸಿದರೇನು, ತಮ್ಮ ಸರಕಾರದಿಂದ ಮಾಡಿದ ಕೆಲಸಗಳು ಎಲ್ಲ ಓರೆ-ಕೋರೆಗಳನ್ನು ಸರಿಪಡಿಸುತ್ತದೆ ಎಂಬ ನಂಬಿಕೆ ಅವರದು.

ಒನ್ಇಂಡಿಯಾ ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಲಾಗಿದೆ. ಎಸ್ಸೆಂ ಕೃಷ್ಣ ಅವರ ಬಗ್ಗೆ, ಉಪ ಚುನಾವಣೆಗಳ ಪ್ರಾಮುಖ್ಯ ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರ ಚುನಾವಣಾ ರಾಜಕೀಯದ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡಲಾಗಿದೆ.[ಸಿದ್ದರಾಮಯ್ಯ ರಾಜಕೀಯ ನಿವೃತ್ತರಾಗಲ್ಲ: ಡಾ ಯತೀಂದ್ರ ಸಂದರ್ಶನ]

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗೆ ಕಾಂಗ್ರೆಸ್ ಅಜೆಂಡಾ ಏನು?
ಉತ್ತರ: ಅಭಿವೃದ್ಧಿಯೊಂದೇ ಅಜೆಂಡಾ. ನಮ್ಮ ಸರಕಾರದಿಂದ ಆದ ಅಭಿವೃದ್ಧಿ ಕಾರ್ಯಗಳೇ ಮಾತನಾಡುತ್ತವೆ. ಅಭಿವೃದ್ಧಿ ವಿಚಾರವನ್ನು ಮಾತ್ರ ನಾವೆತ್ತಿದ್ದೇವೆ. ನಾವು ಯಾರನ್ನೂ ವೈಯಕ್ತಿಕವಾಗಿ ಟೀಕೆ ಮಾಡ್ತಿಲ್ಲ. ಬಿಜೆಪಿಯ ಸಿದ್ಧಾಂತವನ್ನು ಟೀಕೆ ಮಾಡಬಹುದು ವಿನಾ ವೈಯಕ್ತಿಕ ಟೀಕೆ ಮಾಡಲ್ಲ. ಇದು ಕೋಮುವಾದಿ ಬಿಜೆಪಿ ಹಾಗೂ ಜಾತ್ಯತೀತ ಕಾಂಗ್ರೆಸ್ ಮಧ್ಯದ ಹೋರಾಟ. ಅದಕ್ಕಿಂತ ಹೆಚ್ಚೇನೂ ಇಲ್ಲ.

ನಮ್ಮ ಕೆಲಸದ ಆಧಾರದಲ್ಲಿ ಮತ ಕೇಳ್ತಿದ್ದೀವಿ. ನಮ್ಮ ಕೆಲಸ ಗುರುತಿಸಿ, ಮತ ಹಾಕಿ ಎಂದು ಜನರನ್ನು ಕೇಳಿಕೊಳ್ತಿದ್ದೀವಿ. ನಾವು ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದೀವಿ. ಆದ್ದರಿಂದ ಜನರ ಒಲವು ಪಡೆಯಲು ಅರ್ಹರಿದ್ದೀವಿ. 2018ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ. ಅದಕ್ಕಾಗಿ ಮತ ಹಾಕಿ ಎಂದು ಬಿಜೆಪಿಯವರು ಕೇಳ್ತಿದ್ದಾರೆ. ಇದು ಉಪಚುನಾವಣೆಯಲ್ಲಿನ ಪ್ರಮುಖ ವಿಚಾರವೆ?

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ಯಡಿಯೂರಪ್ಪನವರಿಗೆ ಅಧಿಕಾರದ ಹಪಹಪಿ ಇದೆ ಅನ್ನಿಸುತ್ತಾ ನಿಮಗೆ?
ಉತ್ತರ: ಎಲ್ಲ ಕಡೆ ಅವರ ಚುನಾವಣಾ ಪ್ರಚಾರ ಭಾಷಣದ ಪ್ರಮುಖ ಅಂಶವೇ ಮುಂದೆ ಮುಖ್ಯಮಂತ್ರಿ ಆಗ್ತೀನಿ ಅನ್ನೋದು. " ನಿಮ್ಮ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಅಂದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಮತ್ತು ಪಕ್ಷವನ್ನು ಗೆಲ್ಲಿಸಿ" ಎನ್ನುತ್ತಿದ್ದಾರೆ. ಇದು ಅವರು ಎಲ್ಲ ಭಾಷಣದಲ್ಲಿ ಹೇಳುತ್ತಿರೋದು. ಇದರರ್ಥ ಏನು?[ಅನುಕಂಪದ ಅಲೆಯಲ್ಲ, ಪತಿಯ ಜನಸೇವೆ ನನ್ನ ಗೆಲ್ಲಿಸುತ್ತೆ: ಗೀತಾ ಮಹಾದೇವಪ್ರಸಾದ್]

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ಎಸ್ಸೆಂ ಕೃಷ್ಣ ಅವರು ಪಕ್ಷ ತೊರೆದಿದ್ದನ್ನು ಕಾಂಗ್ರೆಸ್ ಗೆ ನಷ್ಟ ಅಂತ ನೋಡುತ್ತಾ? ಒಂದು ವೇಳೆ ನಷ್ಟ ಅಂತಾದರೆ ಅದನ್ನು ಸರಿದೂಗಿಸಲು ಏನು ಯೋಜನೆ ಮಾಡ್ತೀರಿ?
ಉತ್ತರ: ಕೃಷ್ಣ ಅವರ ನಡೆ ನಮ್ಮ ನಷ್ಟವೂ ಅಲ್ಲ, ಬಿಜೆಪಿಯ ಲಾಭವೂ ಅಲ್ಲ. ಬಿಜೆಪಿಯಲ್ಲಿ ಇರುವ ಅವರು ಏನಂದು ಕೊಳ್ತಾರೋ ಗೊತ್ತಿಲ್ಲ. ಆದರೆ ನಮಗಂತೂ ಖಂಡಿತಾ ನಷ್ಟವಲ್ಲ. ಫಲಿತಾಂಶವು ನನ್ನ ಮಾತಿನ ಅರ್ಥವೇನು ಅನ್ನೋದನ್ನು ತೋರಿಸುತ್ತೆ.

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ಎಸ್ಸೆಂ ಕೃಷ್ಣ ಅವರು ಬಿಜೆಪಿಗೆ ಸೇರಿದ ನಂತರದ ಮೊದಲ ಭಾಷಣದಲ್ಲೇ ಕಾಂಗ್ರೆಸ್ ಹಾಗೂ ನಿಮ್ಮ ಸರಕಾರವನ್ನು ಝಾಡಿಸಿದ್ದಾರೆ. ಆ ಬಗ್ಗೆ ಏನು ಹೇಳ್ತೀರಾ?
ಉತ್ತರ: ಸುಮ್ಮನೆ ಅಂದುಕೊಳ್ಳಿ, ಎಸ್ಸೆಂ ಕೃಷ್ಣ ಅವರು ಹೇಳಿದಂತೆ ನಮ್ಮ ಸರಕಾರಕ್ಕೆ ದೃಷ್ಟಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ, ಆದರೆ ಅವರು ಮುಖ್ಯಮಂತ್ರಿ ಆಗಿದ್ದಾಗ ಏನಾಯಿತು? ಸ್ವತಃ ಅವರೇ ಮದ್ದೂರು ಬಿಟ್ಟು, ಬೆಂಗಳೂರಿನ ಚಾಮರಾಜಪೇಟೆಯಿಂದ ಸ್ಪರ್ಧಿಸಿದರು. ಮದ್ದೂರು ಅವರ ಸ್ವಂತ ಕ್ಷೇತ್ರ. ಅದೂ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆದ ನಂತರ ಏಕೆ ಕ್ಷೇತ್ರ ಬದಲಾವಣೆ ಮಾಡಿದರು? ಅವರ ಸಂಪುಟದಲ್ಲಿದ್ದ ಮೂವತ್ತು ಸಚಿವರು ಏಕೆ ಚುನಾವಣೆ ಸೋತರು. 140 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ 60ಕ್ಕೆ ಏಕೆ ಕುಸಿಯಿತು? ಅದು ಅವರ ದೃಷ್ಟಿಕೋನದ ಫಲಿತಾಂಶವೇ? ಅಥವಾ ದೇಶದ ನಂಬರ್ ಒನ್ ಸರಕಾರ ಎಂದು ಆಗಿದ್ದರ ಕಾರಣವೆ?[ಮೋದಿಗೆ ನನ್ನ ವಯಸ್ಸು ಗೊತ್ತಿದೆ, ನಾನೇ ಮುಂದಿನ ಸಿಎಂ - ಯಡಿಯೂರಪ್ಪ]

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ಪಕ್ಷದ ಹಿನ್ನಡೆಗೆ ನೀವು ಕಾರಣ. ನರೇಂದ್ರ ಮೋದಿಯವರು ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡ್ತಾರೆ. ನಿಮ್ಮದು 11ರಿಂದ 7 ಗಂಟೆವರೆಗೆ ಕೆಲಸ ಮಾಡುವ ಸರಕಾರ ಎಂದು ಎಸ್ಸೆಂ ಕೃಷ್ಣ ಆರೋಪಿಸಿದ್ದಾರಲ್ಲಾ?
ಉತ್ತರ: ಈ ಹಿಂದೆ ಅದೇ ಎಸ್ಸೆಂ ಕೃಷ್ಣ ಅವರು ನರೇಂದ್ರ ಮೋದಿ ಬಗ್ಗೆ ಏನು ಹೇಳಿದ್ದರು ಅಂತ ನೆನಪಿಸಿಕೊಳ್ಳಬೇಕು. ಕೃಷ್ಣ ಅವರೇ ಅಧಿಕಾರದಲ್ಲಿದ್ದಾಗ ಮೋದಿ ಬಗ್ಗೆ ಏನು ಹೇಳಿದ್ದರು? ಈಗೇಕೆ ನಿಲುವು ಬದಲಿಸಿದ್ದಾರೆ? ಹಿರಿಯ ರಾಜಕಾರಣಿಯಾದ ಕೃಷ್ಣ ಅವರು ಭಾರತದಲ್ಲಿ ಮೋದಿಯಂಥ ನಾಯಕರನ್ನು ಕಂಡಿಲ್ಲ ಅಂತ ಹೇಳ್ತಾರೆ. ಮೋದಿಯವರನ್ನು ನೆಹರೂಗೆ ಹೋಲಿಸುವುದಕ್ಕೆ ಸಾಧ್ಯವಾ? ಪಕ್ಷ ಬಿಟ್ಟ ಕಾರಣಕ್ಕೆ ಯಾರೂ ಹೀಗೆಲ್ಲ ಮಾತನಾಡಬಾರದು.

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ಶ್ರೀನಿವಾಸ್ ಪ್ರಸಾದ್ ಅವರು ಪಕ್ಷ ಬಿಟ್ಟದ್ದು ಕೂಡ ನಷ್ಟವಲ್ಲ ಅಂತೀರಾ?
ಉತ್ತರ: ಕ್ಷೇತ್ರವೇ ಆ ಬಗ್ಗೆ ಮಾತನಾಡುತ್ತೆ. ಆ ಕ್ಷೇತ್ರಕ್ಕೆ ಭೇಟಿ ನೀಡಿ, ನೋಡಬೇಕು. ಅಲ್ಲಿ ನಿಜವಾಗಲೂ ನಷ್ಟವಾಗಿದೆಯಾ? ನಿಮಗೆ ಗೊತ್ತಾಗುತ್ತದೆ ನಮಗೇನು ನಷ್ಟವಾಯಿತು, ಏನು ಲಾಭವಾಯಿತು ಅಂತ ಗೊತ್ತಾಗುತ್ತದೆ.

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಕರೆತಂದು ಕಾಂಗ್ರೆಸ್ ಗೆ ಅಭ್ಯರ್ಥಿಯಾಗಿ ನಿಲ್ಲಿಸಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಯಿತು. ಶ್ರೀನಿವಾಸ್ ಪ್ರಸಾದ್ ಬಿಟ್ಟ ನಂತರ ಪಕ್ಷದೊಳಗೆ ನಿಮಗೆ ಅಭ್ಯರ್ಥಿ ಇರಲಿಲ್ಲವಾ?
ಉತ್ತರ: ನಮಗೆ ಯಾವಾಗಲೂ ಸ್ಪರ್ಧಿಗಳ ಕೊರತೆ ಆಗಿಲ್ಲ. ಮಹದೇಪ್ಪ ಅವರ ಮಗ ಸುನೀಲ್ ಬೋಸ್ ಸೇರಿದಂತೆ ಹಲವು ಅಭ್ಯರ್ಥಿಗಳಿದ್ದರು. ಸುನೀಲ್ ಬೋಸ್ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ನಾನೇ ಮಹದೇವಪ್ಪನಿಗೆ ಸಲಹೆ ಮಾಡಿದೆ. ಅದೇ ಸಮಯಕ್ಕೆ ಕೃಷ್ಣಮೂರ್ತಿ ಪಕ್ಷಕ್ಕೆ ಸೇರಿದರು. ಕಾರ್ಯಕರ್ತರು ಅವರೇ ಸ್ಪರ್ಧಿಸಲಿ ಎಂದರು. ಅವರಿಗೆ ಟಿಕೆಟ್ ಕೊಡಲಾಯಿತು. ಬಿಜೆಪಿ ಸ್ಥಿತಿ ಉತ್ತಮವಾಗಿದೆಯಾ? ಆರೆಸ್ಸೆಸ್ ಹಿನ್ನೆಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರಾ? ಈ ವಿಚಾರದಲ್ಲಿ ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ.[ಕೃಷ್ಣರ 'ದೂರಾಲೋಚನೆ' ಹೇಳಿಕೆಗೆ ಸಿದ್ದು ತಿರುಗೇಟು]

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ರಾಜಕೀಯ ಅನುಭವ ಇಲ್ಲದ ಗೀತಾ ಮಹದೇವಪ್ರಸಾದ್ ಅವರನ್ನು ಏಕೆ ಕಣಕ್ಕೆ ಇಳಿಸಿದಿರಿ? ನಿಮ್ಮ ನಿರ್ಧಾರಕ್ಕೆ ಪಕ್ಷದಲ್ಲಿ ಒಪ್ಪಿಗೆ ಇತ್ತಾ?
ಉತ್ತರ: ಇದು ನಾನು ಹಾಗೂ ಪಕ್ಷದ ಅಧ್ಯಕ್ಷರು ಇಬ್ಬರೂ ಸೇರಿ ತೆಗೆದುಕೊಂಡ ತೀರ್ಮಾನ. ಮಹದೇವಪ್ರಸಾದ್ ಸತತವಾಗಿ ಐದು ಚುನಾವಣೆಗಳಲ್ಲಿ ಜಯ ಗಳಿಸಿದ್ದರು. ಈ ಅವಧಿಯಲ್ಲಿ ನಾಲ್ಕು ವರ್ಷ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇನ್ನೊಂದು ವರ್ಷ ಬಾಕಿಯಿತ್ತು. ಆದ್ದರಿಂದ ಅವರ ಕುಟುಂಬದವರಿಗೇ ಅವಕಾಶ ನೀಡಬೇಕು ಅಂದುಕೊಂಡ್ವಿ. ಆಕೆ ವಿದ್ಯಾವಂತರು. ಅವರಿಗೆ ರಾಜಕೀಯ ಅನುಭವ ಇಲ್ಲದಿರಬಹುದು. ಆದರೆ ಡಾಕ್ಟರೇಟ್ ಮಾಡಿದವರು. ಗೀತಾ ಅವರ ಪತಿ ಮೂವತ್ತು ವರ್ಷದಿಂದ ರಾಜಕಾರಣದಲ್ಲಿ ಇದ್ದವರು.

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ನೀವು ಹೆದರಿದ್ದೀರಿ ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡ್ತಿದ್ದೀರಿ ಎನ್ನುತ್ತಾರಲ್ಲಾ ಯಡಿಯೂರಪ್ಪ?
ಉತ್ತರ: ಹಾಗಿದ್ದರೆ ಅವರ್ಯಾಕೆ ಕಳೆದ 22 ದಿನಗಳಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ. ಅದೇನು ಅವರಿಗೆ ನಂಬಿಕೆಯೋ ಅಥವಾ ಗಾಬರಿಯೋ? ನಾನಿಲ್ಲಿ ಕಳೆದ ನಾಲ್ಕು ದಿನದಿಂದ ಇದ್ದೀನಿ. ಅವರಿಲ್ಲಿ ಬಂದು ಇಪ್ಪತ್ತಕ್ಕೂ ಹೆಚ್ಚು ದಿನ ಆಯಿತು. ನಾವು ವಿಧಾನಸಭೆಯಲ್ಲಿ ಇದ್ದಿವಿ. ಅವರು ಪ್ರಚಾರದಲ್ಲಿದ್ದರು. ಅದು ಭಯವಲ್ಲವಾ? ಅವರು ನಿರಾಶೆಯಿಂದ ನಮ್ಮ ಪಕ್ಷ ಹಾಗೂ ನಾಯಕರ ಮೇಲೆ ಇಂಥ ಸುಳ್ಳು ಆರೋಪಗಳನ್ನು ಮಾಡ್ತಿದ್ದಾರೆ. ಈ ಚುನಾವಣೆಯಲ್ಲಿ ಅವರು ಸೋಲುವುದು ಗೊತ್ತಾಗಿಹೋಗಿದೆ.[ಸಿದ್ದರಾಮಯ್ಯ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ: ಕೃಷ್ಣ ಟೀಕೆ]

ಪ್ರಶ್ನೆ: ಈ ಉಪಚುನಾವಣೆಗೆ ಅಷ್ಟು ಪ್ರಾಮುಖ್ಯವೆ? ಬಿಜೆಪಿಯ ಎಲ್ಲ ನಾಯಕರು ಇಲ್ಲಿರುವಂತೆ ನಿಮ್ಮ ಸಂಪುಟದವರೆಲ್ಲ ಇಲ್ಲಿದ್ದೀರಲ್ಲಾ?
ಉತ್ತರ: ಕಾಂಗ್ರೆಸ್ ಅಧಿಕಾರದಲ್ಲಿದೆ. ಜನಕ್ಕೆ ನಮ್ಮ ಕೆಲಸ ಗೊತ್ತಿದೆ. ನಾವು ನಾಲ್ಕು ವರ್ಷ ಚೆನ್ನಾಗಿ ಕೆಲಸ ಮಾಡಿ, ನಾವು ನೀಡಿದ್ದ ಭರವಸೆಗಳ ಪೈಕಿ ಶೇ 90ರಷ್ಟು ಪೂರೈಸಿದ್ದೇವೆ. ನಾವು ಅಧಿಕಾರದಲ್ಲಿರುವಾಗ ಉಪಚುನಾವಣೆಯನ್ನು ಗಂಭೀರವಾಗಿ ಏಕೆ ತೆಗೆದುಕೊಳ್ಳಬಾರದು? ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೀವಿ. ಬಿಜೆಪಿ ಕೋಮುವಾದಿ ಪಕ್ಷ. ಆ ಪಕ್ಷ ಗೆಲ್ಲಬಾರದು.

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ಬಿಜೆಪಿಯ ಸಮಾಜ ಕಲ್ಯಾಣ ಯೋಜನೆಗಳನ್ನು ನೀವು ಹೈಜಾಕ್ ಮಾಡಿದ್ದೀರಿ ಅಂತ ಯಡಿಯೂರಪ್ಪ ಆರೋಪಿಸ್ತಾರೆ. ಅದಕ್ಕೆ ನೀವೇನು ಹೇಳ್ತೀರಾ?
ಉತ್ತರ: ಆಹಾರ ಭದ್ರತಾ ಕಾಯ್ದೆ ಪರಿಚಯಿಸಿದವರು ಯಾರು? ಅದು ಮನಮೋಹನ್ ಸಿಂಗ್ ಸರಕಾರ, ಮೋದಿ ಸರಕಾರವಲ್ಲ. ಹೌದು ನಾವು ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ನೀಡಿದ್ವಿ. ಆದರೆ ಅದನ್ನು ಪುಕ್ಕಟೆ ಕೊಡಲಿಲ್ಲವಲ್ಲಾ? ಅದನ್ನು ಯಡಿಯೂರಪ್ಪ ಮಾಡಿದರಾ? ನಾವು ಏಳು ಕೆಜಿ ಅಕ್ಕಿ ಹಾಗೂ ಒಂದು ಕೆಜಿ ಬೇಳೆ ಉಚಿತವಾಗಿ ಕೊಡ್ತಿದ್ದೀವಿ. ಇದನ್ನು ಯಡಿಯೂರಪ್ಪ ಮಾಡಿದ್ರಾ? ಇದನ್ನು ಹೇಗೆ ಅವರ ಯೋಜನೆ ಅಂತಾರೆ? ನಾವು ನಾಲ್ಕು ಸಾವಿರ ಕೋಟಿ ರುಪಾಯಿ ಸಬ್ಸಿಡಿ ಕೊಡ್ತಿಲ್ವಾ? ಬಡವರಿಗೆ ಉಚಿತವಾಗಿ ಧಾನ್ಯ ಕೊಡಿ ಅಂತ ಕೇಂದ್ರ ಸರಕಾರ ಹೇಳಿತ್ತಾ? ಅದು ನಮ್ಮ ನಿರ್ಧಾರ. ಬಿಪಿಎಲ್ ಕಾರ್ಡುದಾರರಿಗೆ ಕೇಂದ್ರ ಸರಕಾರ ಸಕ್ಕರೆಯನ್ನು ಯಾಕೆ ನಿಲ್ಲಿಸಿತು? ಯಡಿಯೂರಪ್ಪ ಯಾವತ್ತೂ ಸತ್ಯ ಹೇಳಲ್ಲ.

ಅವರು ರೈತರ ಸಾಲ ಮನ್ನಾಗಾಗಿ ಕೇಳ್ತಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನು ಹೇಳಿದ್ದರು ಗೊತ್ತಾ? ರೈತರ ಸಾಲ ಮನ್ನಾ ಮಾಡೋದಿಕ್ಕೆ ಕೇಂದ್ರ ಸರಕಾರ ನನಗೆ ನೋಟು ಪ್ರಿಂಟಿಂಗ್ ಮಷೀನ್ ಕೊಟ್ಟಿಲ್ಲ ಅಂದಿದ್ದರು. ಯಡಿಯೂರಪ್ಪ ಏನು ಹೇಳಿದ್ದರು ಅನ್ನೋದು ಮರೆತಿದ್ದಾರೆ. ಅವರಿಗೆ ಸತ್ಯಕ್ಕೂ ಸುಳ್ಳಿಗೂ ವ್ಯತ್ಯಾಸ ಗೊತ್ತಿಲ್ಲ. ಈ ಜಗತ್ತಿನಲ್ಲಿ ಬಿಜೆಪಿಯವರಷ್ಟು ಸುಳ್ಳು ಹೇಳೋರು ಯಾರೂ ಇಲ್ಲ.

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: 2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆಯಾ?
ಉತ್ತರ: ಕಾಂಗ್ರೆಸ್ ಅಗಲಿ ಜೆಡಿಎಸ್ ಆಗಲೀ ಚುನಾವಣೆ ಮೈತ್ರಿ ಬಗ್ಗೆ ಮಾತನಾಡಿಲ್ಲ. ನಾವು ಏಕಾಂಗಿಯಾಗಿ ಹೋರಾಡುತ್ತೇವೆ. ಯಾವುದೇ ಮಾತುಕತೆ ನಡೆದಿಲ್ಲ.

ಪ್ರಶ್ನೆ: ದಲಿತರು ಹಾಗೂ ಹಿಂದುಳಿದ ವರ್ಗಗಳ ಮತ ಪಡೆಯುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಈ ಬಗ್ಗೆ ಏನು ಹೇಳ್ತೀರಿ?
ಉತ್ತರ: ನಮಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದೆ. ಸಮಾಜದಲ್ಲಿ ಎಲ್ಲ ಜಾತಿಯ ಬಡವರಿಗಾಗಿ ನಾವು ಕೆಲಸ ಮಾಡಿದ್ದೀವಿ. ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸಿದ್ದೀವಿ. ಆದ್ದರಿಂದ ಬಡವರು, ರೈತರು, ಹಿಂದುಳಿದ ವರ್ಗದವರು ಹಾಗೂ ಮಹಿಳೆಯರು ನಮ್ಮನ್ನು ಬೆಂಬಲಿಸುತ್ತಾರೆ. ಆಪರೇಷನ್ ಕಮಲಕ್ಕೆ ಯಾರು ಜವಾಬ್ದಾರರು? ಚುನಾವಣೆ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ ಎಂಟು ಉಪಚುನಾವಣೆಯಲ್ಲಿ ಏನು ಮಾಡಿದರು ಅಂತ ಗೊತ್ತಿದೆ.

ಪ್ರಶ್ನೆ: ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದರೆ ಅದರ ಅರ್ಥ ಏನು?
ಉತ್ತರ: ಅದರ ಅರ್ಥ ಸರಕಾರದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ, ಒಪ್ಪಿಗೆಯಾಗಿದೆ ಮತ್ತು ಜನರು ಆಶೀರ್ವದಿಸಿದ್ದಾರೆ. ಒಂದು ವೇಳೆ ಇಲ್ಲ ಅಂದರೆ ಜನರು ನಾಯಕತ್ವವನ್ನು ಒಪ್ಪಿದ್ದಾರೆ ಅಂತ ಅಲ್ಲವೆ?

ಪ್ರಶ್ನೆ: 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸ್ತೀರಾ? ಚುನಾವಣೆಯಲ್ಲಿ ಸ್ಪರ್ಧಿಸ್ತೀರಾ?
ಉತ್ತರ: ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಆದರೆ ಚುನಾವಣಾ ಪ್ರಚಾರದ ನೇತೃತ್ವವನ್ನು ಮಾತ್ರ ಖಂಡಿತಾ ನಾನೇ ವಹಿಸ್ತೀನಿ. 2013ರಲ್ಲಿ ಇದು ನನ್ನ ಕೊನೆ ಚುನಾವಣೆ ಅಗಬಹುದು ಅಂದಿದ್ದೆ. ಆದರೆ ಕೋಮುವಾದಿ ಪಕ್ಷಗಳು ಬೆಳೆಯುತ್ತಿವೆ. ಆದ್ದರಿಂದ ಮತ್ತೆ ಚುನಾವಣೆ ಸ್ಪರ್ಧಿಸಬೇಕು ಮತ್ತು ಚುನಾವಣೆ ಪ್ರಚಾರದ ನೇತೃತ್ವ ವಹಿಸಬೇಕು ಎಂದುಕೊಳ್ತೀನಿ.

Exclusive: Will contest Karnataka polls to fight communal forces says Siddaramaiah

ಪ್ರಶ್ನೆ: ಯತೀಂದ್ರ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ?
ಉತ್ತರ: ಆ ಬಗ್ಗೆ ಖಾತ್ರಿ ಇಲ್ಲ. ಅದು ಹೈಕಮಾಂಡ್ ನಿರ್ಧಾರ. ಕ್ಷೇತ್ರದ ಕಾರ್ಯಕರ್ತರು ಯತೀಂದ್ರ ಸ್ಪರ್ಧಿಸಲಿ ಎಂದು ಬಯಸ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಹೈಕಮಾಂಡ್ ಏನು ಹೇಳುತ್ತದೆ ಮತ್ತು ಕಾರ್ಯಕರ್ತರು ಏನು ಬಯಸುತ್ತಾರೆ ಎಂಬುದರ ಮೇಲೆ ಅವಲಂಬಿಸಿದೆ. ಜನರು ಬಯಸಿದರೆ ಯತೀಂದ್ರ ಸ್ಪರ್ಧೆಗೆ ನನ್ನ ವಿರೋಧ ಇಲ್ಲ. ಆದರೆ ನಾನು ಮುಂದಕ್ಕೆ ತಳ್ಳಲ್ಲ. ನನ್ನ ಅಭಿಪ್ರಾಯವನ್ನು ಜನರ ಮೇಲಾಗಲಿ, ನನ್ನ ಮಗನ ಮೇಲಾಗಲಿ ಹೇರುವುದಿಲ್ಲ. ಟಿಕೆಟ್ ನೀಡಲು ಜನ ಬಯಸಿದರೆ, ಹೈಕಮಾಂಡ್ ನಿರ್ಧರಿಸಿದರೆ ಸರಿ. ಯಾವ ಕ್ಷೇತ್ರ ಅಂತ ನಿರ್ಧರಿಸಲಾಗುತ್ತದೆ.

English summary
Karnataka Chief Minister Siddaramaiah interviewed by Oneindia reporter at Gundlupet on the backdrop of Nanjangud and Gundlupet by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X