ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನೂರಿನಲ್ಲಿ ಕಬ್ಬಿನ ಲಾರಿ ಅಡ್ಡ ಹಾಕಿದ ಒಂಟಿ ಸಲಗ

|
Google Oneindia Kannada News

ಚಾಮರಾಜನಗರ, ಜೂನ್ 25: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಗಜರಾಜ, ಆನಂದವಾಗಿ ಕಬ್ಬಿನ ಸಿಹಿ ಸವಿಯುತ್ತಾ ರಸ್ತೆ ಮಧ್ಯದಲ್ಲಿಯೇ ನಿಂತ ಪರಿಣಾಮ ಕೆಲಕಾಲ ವಾಹನ ಸಂಚಾರ ಬಂದ್ ಆದ ಪ್ರಸಂಗ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿರುವ ತಮಿಳುನಾಡಿನ ಹಾಸನೂರಿನಲ್ಲಿ ನಡೆದಿದೆ.

ಆನೆಗಳ ಹಾವಳಿಗೆ ತಡೆಯಿಲ್ಲ : ನಾಗರಹೊಳೆ ಕಾಡಂಚಿನಲ್ಲಿ ಬೆಳೆ ರಕ್ಷಣೆಗಾಗಿ ರೈತರ ಸರ್ಕಸ್!ಆನೆಗಳ ಹಾವಳಿಗೆ ತಡೆಯಿಲ್ಲ : ನಾಗರಹೊಳೆ ಕಾಡಂಚಿನಲ್ಲಿ ಬೆಳೆ ರಕ್ಷಣೆಗಾಗಿ ರೈತರ ಸರ್ಕಸ್!

ಕಬ್ಬು ತುಂಬಿಕೊಂಡು ಸತ್ಯಮಂಗಲದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಲಾರಿಗೆ ಅಡ್ಡಲಾಗಿ ಬಂದ ಗಜರಾಜ, ಕಬ್ಬು ತಿನ್ನುತ್ತ ಅಲ್ಲೇ ನಿಂತಿದ್ದ. ರಸ್ತೆಯಲ್ಲಿ ನಿಂತ ಒಂಟಿ ಸಲಗನ ಕಂಡು ಭಯಭೀತರಾದ ಪ್ರಯಾಣಿಕರು ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದು ನಿಂತಿದ್ದರು.

 elephant stopped the cane truck in chamarajanagar

ಒಂಟಿ ಸಲಗನ ತುಂಟಾಟ ನೋಡಿ, ಪ್ರಯಾಣಿಕರು ಭಯದ ನಡುವೆಯೂ ಸಂತಸಗೊಂಡರು. ಕೆಲವರು ಆನೆ ಕಬ್ಬು ತಿನ್ನುತ್ತಿದ್ದುದನ್ನು ವೀಡಿಯೋ ಮಾಡಿದರು. ಸುಮಾರು ಅರ್ಧ ಗಂಟೆ ಕಾಲ ರಸ್ತೆಯಿಂದ ಕದಲದ ಗಜರಾಜನಿಂದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಲಕಾಲ ಸಂಚಾರ ಬಂದ್‌ಆಗಿತ್ತು. ಇಷ್ಟಾದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

English summary
Elephant stopped the cane truck and ate canes on road. Incident happened near tamilnadu hasanuru which is near chamarajanagar, Because of this, the road jammed about half an hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X