ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಸಫಾರಿ ವಾಹನ ತಡೆದ ಕಾಡಾನೆ ಮರಿ

|
Google Oneindia Kannada News

ಚಾಮರಾಜನಗರ, ಆಗಸ್ಟ್ 1: ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿದ್ದ ಜಂಗಲ್ ಲಾಡ್ಜ್ ಸಫಾರಿ ವಾಹನದ ಮೇಲೆ ಕಾಡಾನೆ ಮರಿಯೊಂದು ಬುಧವಾರ ದಾಳಿ ನಡೆಸಿದೆ. ವಾಹನದ ಗಾಜನ್ನು ಮರಿಯಾನೆ ಪುಡಿ ಮಾಡಿದೆ.
ತಾಯಿ ಮತ್ತು ಮರಿಯಾನೆ ಒಟ್ಟಿಗೆ ಮೇಯುತ್ತಿದ್ದ ವೇಳೆ ಸಫಾರಿ ವಾಹನವನ್ನು ಕಂಡು ಆಕ್ರೋಶದಿಂದ ನುಗ್ಗಿದ ಕಾಡಾನೆ ಕೆಲಕಾಲ ಅಲ್ಲೇ ನಿಂತು ಗೀಳಿಟ್ಟಿದೆ. ಇದರಿಂದ ವಾಹನದೊಳಗಿದ್ದ ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ.

 ಕಾಡಾನೆ ದಾಳಿಯಲ್ಲಿ ಮೂಡಿಗೆರೆ ಮಹಿಳೆ ಸಾವು ಕಾಡಾನೆ ದಾಳಿಯಲ್ಲಿ ಮೂಡಿಗೆರೆ ಮಹಿಳೆ ಸಾವು

ತಕ್ಷಣ ವಾಹನ ಚಾಲಕ ವಾಹನವನ್ನು ಹಿಂದಕ್ಕೆ ತೆಗೆದುಕೊಂಡು ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಆನೆ ಸ್ವಲ್ಪ ಸಮಯ ಸಫಾರಿ ದಾರಿಯಲ್ಲಿಯೇ ನಿಂತು ತೆರಳಿದೆ.

Elephant Attack On Safari Vehicle In Bandipura

ಸಾಲೂರು ಮಠದ ಸ್ವಾಮೀಜಿ ವಾಹನವನ್ನು ತಡೆದ ಕಾಡಾನೆ: ಮಲೆ ಮಹದೇಶ್ವರ ಬೆಟ್ಟದ ರಸ್ತೆ ಮಧ್ಯೆ ಬಂದು ನಿಂತ ಕಾಡಾನೆಯೊಂದು ಸಾಲೂರು ಸ್ವಾಮೀಜಿಗಳ ಕಾರನ್ನು ತಡೆದು ಸುಮಾರು ಅರ್ಧ ಗಂಟೆ ಸತಾಯಿಸಿದೆ. ಸಾಲೂರು ಮಠದ ಗುರುಸ್ವಾಮಿ ಶ್ರೀಗಳು ಮಂಗಳವಾರ ಬೆಳಗ್ಗೆ ಕಾರಿನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಅಡ್ಡ ಬಂದ ಕಾಡಾನೆ ಕಾರು ಹೋಗಲು ದಾರಿ ಬಿಡದೆ ಆಕ್ರೋಶದಿಂದ ವರ್ತಿಸಿದೆ. ಆನೆ ಅಡ್ಡ ಬರುತ್ತಿರುವುದನ್ನು ನೋಡಿದ ಚಾಲಕ ಸ್ವಾಮೀಜಿಗಳಿದ್ದ ಕಾರನ್ನು ನಿಲ್ಲಿಸಿದ್ದಾನೆ, ಜೊತೆಗೆ ಆನೆ ವಾಪಸ್ ಹೋಗುವವರೆಗೂ ಕಾರಿನ ಎಂಜಿನ್ ಚಾಲನೆಯಲ್ಲಿಟ್ಟು ಕಾಯುತ್ತಿದ್ದರು. ಬಳಿಕ ಆನೆ ನಿಧಾನವಾಗಿ ಚಲಿಸಿದೆ.

English summary
Elephant attacked jungle lodge safari van on Wednesday at Bandipur National Park. The elephant crushed the vehicle glasses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X