ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಟನಾಕಾರರನ್ನು ನಿಯಂತ್ರಿಸಲು 'ಜನಗಣಮನ...' ಹಾಡಿದ ಡಿವೈಎಸ್ಪಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ನವೆಂಬರ್ 23: ಪ್ರತಿಭಟನಾಕಾರರನ್ನು ನಿಯಂತ್ರಿಸಲು ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ರಾಷ್ಟ್ರಗೀತೆ "ಜನಗಣಮನ...' ಹಾಡಿದ ಘಟನೆ ಚಾಮರಾಜನಗರ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದಿದೆ.

ಮತಾಂತರ ವಿರೋಧಿಸಿ ಮತಾಂತರ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಹಿಂದೂಪರ ಸಂಘಟನೆಗಳ 500ಕ್ಕೂ ಹೆಚ್ಚು ಜನರಿಂದ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ಪೋಷಕರಿಗೆ ಆತಂಕ ತಂದ ಚಾಮರಾಜನಗರ ವೈದ್ಯಕೀಯ ಕಾಲೇಜುಪೋಷಕರಿಗೆ ಆತಂಕ ತಂದ ಚಾಮರಾಜನಗರ ವೈದ್ಯಕೀಯ ಕಾಲೇಜು

ಚಾಮರಾಜನಗರ ಜಿಲ್ಲಾಡಳಿತ ಭವನದ ಆವರಣಕ್ಕೆ ಪ್ರತಿಭಟನಾಕಾರರ ಪ್ರವೇಶ ಮಾಡಿದಾಗ, ಮೈಕ್ ಇರುವ ವಾಹನವನ್ನು ಜಿಲ್ಲಾಡಳಿತ ಭವನದ ಆವರಣಕ್ಕೆ ಪೊಲೀಸರು ಬಿಡಲಿಲ್ಲ.

 Chamarajanagara: DYSP Sung National Anthem To Control The Protesters

ಪೊಲೀಸರು ಹಾಗು ಪ್ರತಿಭಟನಾಕಾರ ನಡುವೆ ಕೆಲ ಸಮಯ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ರಾಷ್ಟ್ರಗೀತೆಯನ್ನು ಹಾಡಲು ಶುರು ಮಾಡಿದರು.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮಾಸ್ಟರ್ ಪ್ಲಾನ್ ಮಾಡಿದ ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ, ಪಕ್ಕದಲ್ಲೇ ಇದ್ದ ಮೈಕ್ ಹಿಡಿದು ಜನಗಣಮನ.. ಹಾಡಿದರು. ಈ ವೇಳೆ ರಾಷ್ಟ್ರಗೀತೆ ಕೇಳುತ್ತಿದ್ದಂತೆ ತಾವು ರಾಷ್ಟ್ರಗೀತೆ ಹಾಡುತ್ತಾ ಪ್ರತಿಭಟನಾಕಾರರು ವಾಗ್ವಾದ ನಿಲ್ಲಿಸಿದರು.

English summary
DYSP Priyadarshini Sanekoppa Sung the National Anthem in Chamarajanagar to control protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X