ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ಗೂಡ್ಸ್ ವಾಹನಗಳ ಮಾಲೀಕರ ಪ್ರತಿಭಟನೆ

|
Google Oneindia Kannada News

ಚಾಮರಾಜನಗರ, ಜುಲೈ 4: ಗೂಡ್ಸ್ ವಾಹನಗಳ ಚಾಲಕರು ಹಾಗೂ ಮಾಲೀಕರು ಚಾಮರಾಜನಗರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕೋವಿಡ್ 19ರ ಸಂಕಷ್ಟದಲ್ಲೂ ಸರಕು ಸಾಗಣೆ ವಾಹನ ಸಂಚಾರ ತಾರತಮ್ಯ ಮಾಡಲಾಗುತ್ತಿದೆ ಎಂದು ಸರಕು ವಾಹನಗಳ ಚಾಲಕರು, ಮಾಲೀಕರು ಮೌನ ಪ್ರತಿಭಟನೆ ಮಾಡುತ್ತಿದ್ದಾರೆ.

Recommended Video

ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

ತಮಿಳುನಾಡು ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ತಾರತಮ್ಯ ಆಗುತ್ತಿದೆ ಎಂದು ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗ ಮೌನ ಪ್ರತಿಭಟನೆ ನಡೆಸಲಾಗಿದೆ. ಹೊರ ರಾಜ್ಯದ, ಹೊರ ಜಿಲ್ಲೆಯ ಸರಕು ಸಾಗಣೆ ವಾಹನಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯ ವಾಹನಗಳಿಗೆ ಮಾತ್ರ ನಿರ್ಬಂಧ ಹೇರಲಾಗಿದೆ ಎಂದು ಆರೋಪ ಮಾಡಲಾಗಿದೆ.

ಕೋಲಾರದಲ್ಲಿ ಕೊರೊನಾ ನಡುವೆಯೂ ಜಮಾಯಿಸಿದ ನೂರಾರು ವರ್ತಕರುಕೋಲಾರದಲ್ಲಿ ಕೊರೊನಾ ನಡುವೆಯೂ ಜಮಾಯಿಸಿದ ನೂರಾರು ವರ್ತಕರು

ಚೆಕ್ ಪೋಸ್ಟ್ ಸಿಬ್ಬಂದಿಗಳ ವಿರುದ್ದ ಸರಕು ವಾಹನ ಚಾಲಕ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಆರ್ಭಟ ಹಿನ್ನೆಲೆ ಅಲ್ಲಿನ ವಾಹನಗಳ ಸಂಚಾರಕ್ಕೆ ನಿಷೇಧಕ್ಕೆ ಪ್ರತಿಭಟನಾಕಾರರು ಒತ್ತಾಯ ಹೇರಿದ್ದಾರೆ. ತಮಿಳುನಾಡಿಗೆ ಹೋಗಿ ಬಂದವರು ಕ್ವಾರಂಟೈನ್ ಆಗಲು ಸಿದ್ದವಾಗಿದ್ದೇವೆ ಎಂದು ತಿಳಿಸಿದ್ದಾರೆ.

Drivers And Owners Of Goods Vehicles Protested In Chamarajanagar

ಎಲ್ಲರಿಗೂ ಒಂದೇ ನೀತಿ ನಿಯಮ ಜಾರಿ ಮಾಡಿ. ತಾರತಮ್ಯ ಬೇಡ, ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

English summary
Covid-19 Crisis : Drivers and owners of goods vehicles protested in Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X