• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರದಲ್ಲಿ ಮತದಾನ ಜಾಗೃತಿಗೆ ಸ್ವೀಪ್ ಸಮಿತಿ ಮಾಡಿದ್ದೇನು?

|

ಚಾಮರಾಜನಗರ, ಏಪ್ರಿಲ್ 01:ದೇಶದಾದ್ಯಂತ ಮತದಾನದ ಜಾಗೃತಿ ಮೂಡಿಸಲಾಗುತ್ತಿದ್ದು, ಅದರಂತೆ ಚಾಮರಾಜನಗರದಲ್ಲಿಯೂ ವಿವಿಧ ಕಾರ್ಯಕ್ರಮಗಳ ಮೂಲಕ ಮತ ಜಾಗೃತಿಯನ್ನು ನಡೆಸಲಾಗುತ್ತಿದ್ದು, ಅದರಂತೆ ಜಿಲ್ಲಾ ಸ್ವೀಪ್ ಸಮಿತಿ ಸರ್ಕಾರಿ ಕಟ್ಟಡಗಳ ಕಾಂಪೌಂಡ್ ಮತ್ತು ಗೋಡೆಗಳ ಮೇಲೆ ಮತದಾನದ ಮಹತ್ವ ಕುರಿತ ಸಂದೇಶಗಳ ವರ್ಣಚಿತ್ರಗಳನ್ನು ಬಿಡಿಸಿ ಮತದಾರರ ಗಮನಸೆಳೆಯಲಾಗುತ್ತಿದೆ.

ಪ್ರತಿಯೊಬ್ಬ ಮತದಾರನಲ್ಲಿಯೂ ಚುನಾವಣೆ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಈ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದು, ಗೋಡೆಗಳ ಮೇಲೆ ಮತದಾನ ಕುರಿತ ಚಿತ್ರಗಳನ್ನು ಅಲ್ಲಲ್ಲಿ ಬಿಡಿಸಲಾಗುತ್ತಿದೆ.

1989ರ ಮತದಾನದ ದಾಖಲೆ ಮುರಿಯಲು ಮೈಸೂರು ಸ್ವೀಪ್ ಸಮಿತಿ ಕಸರತ್ತು

ಜಿಲ್ಲೆಯ ಜನತೆಗೆ ಇಷ್ಟವಾಗುವ ಮತ್ತು ಬಹುಬೇಗ ಆಕರ್ಷಿಸುವ ರೀತಿಯಲ್ಲಿ ಕಲೆ, ಸಂಸ್ಕೃತಿ ಕುರಿತ ಚಿತ್ರಗಳನ್ನು ಮೂಡಿಸುವುದರೊಂದಿಗೆ ಮತದಾನದ ಮಹತ್ವವನ್ನು ಅದರೊಂದಿಗೆ ಸಾರಲಾಗುತ್ತಿದೆ.

ಈಗಾಗಲೇ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಆ ಮೂಲಕ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವಂತೆಯೂ ಪ್ರೇರೇಪಿಸಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಹಳಷ್ಟು ಮಂದಿ ನಾವ್ಯಾಕೆ ಮತ ಹಾಕಬೇಕು? ನಮಗೇನು ಪ್ರಯೋಜನ ಎಂಬಂತಹ ಮಾತುಗಳನ್ನಾಡುತ್ತಿದ್ದು ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಮತದಾರರು ಮತವನ್ನೇಕೆ ಹಾಕಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಂದೆ ಓದಿ...

 ನುರಿತ ಕಲಾವಿದರಿಂದ ಚಿತ್ರಕಲೆ

ನುರಿತ ಕಲಾವಿದರಿಂದ ಚಿತ್ರಕಲೆ

ಚಾಮರಾಜನಗರದ ಭುವನೇಶ್ವರ ವೃತ್ತ, ಸಂತೇಮರಹಳ್ಳಿ ವೃತ್ತ, ಜಿಲ್ಲಾಡಳಿತ ಭವನ ಪಕ್ಕದಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಕಾಂಪೌಂಡ್, ಸತ್ಯಮಂಗಲ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಗಳ ಮೇಲೆ ಜಿಲ್ಲೆಯ ಕಲೆ, ಸಂಸ್ಕೃತಿ ಬಿಂಬಿಸುವ ಹಾಗೂ ಮತದಾನದ ಕುರಿತು ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಈ ಸ್ಥಳಗಳಲ್ಲಿ 12 ನುರಿತ ಚಿತ್ರಕಲಾವಿದರ ತಂಡ ಚಿತ್ರಕಲೆಗಳನ್ನು ಬಿಡಿಸುವ ಕಾರ್ಯದಲ್ಲಿ ನಿರತವಾಗಿವೆ.

 ಈ ಸ್ಥಳಗಳಲ್ಲಿ ಬಿಡಿಸಲಾಗುತ್ತಿದೆ

ಈ ಸ್ಥಳಗಳಲ್ಲಿ ಬಿಡಿಸಲಾಗುತ್ತಿದೆ

ಚಾಮರಾಜನಗರ ಜಿಲ್ಲೆಯ ಅರಣ್ಯ, ಪ್ರಮುಖ ದೇವಸ್ಥಾನಗಳು, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಈ ಸ್ಥಳಗಳಲ್ಲಿ ಬಿಡಿಸಲಾಗುತ್ತದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ನಗರಕ್ಕೆ ಬರುವ ಜನರಿಗೆ ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಚಿತ್ರಗಳ ಪಕ್ಕದಲ್ಲಿಯೇ ಮತದಾನದ ಕುರಿತು ಚಿತ್ರಗಳನ್ನು ಬಿಡಿಸಲಾಗುತ್ತಿದೆ.

ಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರು

 ಪ್ರವಾಸಿ ತಾಣಗಳಲ್ಲಿಯೂ ಜಾಗೃತಿ

ಪ್ರವಾಸಿ ತಾಣಗಳಲ್ಲಿಯೂ ಜಾಗೃತಿ

ಚಾಮರಾಜನಗರದ ಪ್ರಮುಖ ವೃತ್ತಗಳು, ಸರ್ಕಾರಿ ಕಟ್ಟಡಗಳ ಗೋಡೆಗಳಲ್ಲಿ ಜಿಲ್ಲೆಯ ಜಾನಪದ ಕಲೆಗಳಾದ ವೀರಗಾಸೆ, ಗೊರವರ ಕುಣಿತ, ಕಂಸಾಳೆ, ಗೊರುಕನ ಕುಣಿತ, ಅರಣ್ಯ ಪ್ರದೇಶಗಳು, ಪ್ರಾಣಿಗಳು, ಹೊಗೇನಕಲ್ ಜಲಪಾತ, ಗಗನ ಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳು, ಚಾಮರಾಜೇಶ್ವರ ದೇವಸ್ಥಾನ, ಮಲೆಮಹದೇಶ್ವರ ಬೆಟ್ಟದ ದೇವಸ್ಥಾನ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನ, ಬಂಡೀಪುರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿಯೂ ಚಿತ್ರಗಳನ್ನು ಬಿಡಿಸುವುದರೊಂದಿಗೆ ಮತದಾನದ ಜಾಗೃತಿಯನ್ನುಂಟು ಮಾಡಲಾಗುತ್ತಿದೆ.

 ಚಿಹ್ನೆಗಳ ಚಿತ್ರ ಬಿಡಿಸುವಂತಿಲ್ಲ

ಚಿಹ್ನೆಗಳ ಚಿತ್ರ ಬಿಡಿಸುವಂತಿಲ್ಲ

ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಗೋಡೆಗಳಲ್ಲಿ ಬಿಡಿಸುವ ಚಿತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಚಿಹ್ನೆಗಳಿಗೆ ಜಿಲ್ಲಾ ಸ್ವೀಪ್ ಸಮಿತಿ ಬ್ರೇಕ್ ಹಾಕಿದೆ. ವಿವಿಧ ಪಕ್ಷಗಳ ಚಿಹ್ನೆಗಳ ಚಿತ್ರಗಳನ್ನು ಹೊರತುಪಡಿಸಿ ವಿವಿಧ ಪ್ರಾಣಿ, ಪಕ್ಷಿ, ದೇವಸ್ಥಾನ, ಅರಣ್ಯಗಳ ಚಿತ್ರಗಳನ್ನು ಮಾತ್ರ ಬಿಡಿಸಲಾಗುತ್ತಿರುವುದು ಗಮನಾರ್ಹವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In Chamarajanagar, Voting awareness is being conducted through various programs.Now the District Election Sweeping Committee draws attention to voters by paintings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more