ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆ ಮಹದೇಶ್ವರ ದೇವಾಲಯದ ಭಕ್ತರಿಗೆ ವಿಶೇಷ ಸೂಚನೆಗಳು

|
Google Oneindia Kannada News

ಚಾಮರಾಜನಗರ, ನವೆಂಬರ್ 01: ಚಾಮರಾಜನಗರದ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಭಕ್ತರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಸೇವೆಗಳು ಆರಂಭವಾಗಿವೆ.

ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಹಲವು ಸೂಚನೆಗಳನ್ನು ನೀಡಿದೆ.
ಅಕ್ಟೋಬರ್ 31ರಿಂದಲೇ ಅನ್ವಯವಾಗುವಂತೆ ಭಕ್ತಾದಿಗಳಿಗೆ ರಾತ್ರಿ ದೇವಾಲಯದ ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಲೆ ಮಾದೇಶ್ವರ ದೇವಾಲಯದ ಭಕ್ತರ ಗಮನಕ್ಕೆ ಮಲೆ ಮಾದೇಶ್ವರ ದೇವಾಲಯದ ಭಕ್ತರ ಗಮನಕ್ಕೆ

ನವೆಂಬರ್ 1ರಿಂದಲೇ ದೇವಾಲಯದ‌ ಎಲ್ಲಾ ಸೇವೆಗಳೂ ಈ ಹಿಂದೆ ಲಾಕ್‌ ಡೌನ್‌ ಅವಧಿಗಿಂತ ಮುಂಚೆ ಇದ್ದಂತೆ ಆರಂಭವಾಗಿವೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಹೇಳಿದ್ದಾರೆ.

ಭಾನುವಾರವೂ ಮಲೆ ಮಾದೇಶ್ವರನ ದರ್ಶನ ಪಡೆಯಿರಿಭಾನುವಾರವೂ ಮಲೆ ಮಾದೇಶ್ವರನ ದರ್ಶನ ಪಡೆಯಿರಿ

 Directions To Male Mahadeshwara Temple Devotees

ಬೆಳಗ್ಗೆ 4ರ ಅಭಿಷೇಕ, ಸಂಜೆ 7ರ ಅಭಿಷೇಕ ಮತ್ತು ಎಲ್ಲಾ ಪೂಜಾ ಕೈಂಕರ್ಯಗಳು, ಉತ್ಸವಾದಿ ಸೇವೆಗಳು ಎಲ್ಲವೂ ನಡೆಯಲಿವೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ.

ಮಲೆ ಮಹದೇಶ್ವರನ ದೇಗುಲ ಓಪನ್ಮಲೆ ಮಹದೇಶ್ವರನ ದೇಗುಲ ಓಪನ್

ಭಕ್ತರಿಗೆ ಸೂಚನೆಗಳು

* ವಸತಿ ಗೃಹದ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಯಾವುದೇ ಕೊಠಡಿ, ಕಾಟೇಜು ಅಥವಾ ಡಾರ್ಮಿಟರಿ ಖಾಲಿ ಆದಾಗ ಅವುಗಳನ್ನು‌ ತಕ್ಷಣ ಶುದ್ಧೀಕರಿಸಿ, ಸ್ಯಾನಿಟೈಸ್ ಮಾಡಿಸಿ ಎಲ್ಲ ವಸ್ತ್ರಗಳನ್ನು ಬದಲಿಸಲಾಗುವುದು. ಇದಕ್ಕಾಗಿ 100 ರೂ. ಹೆಚ್ಚುವರಿ ಶುಲ್ಕವನ್ನು ಪ್ರತಿ ಕೊಠಡಿಗೆ ಸಂಗ್ರಹ ಮಾಡಲಾಗುತ್ತಿದೆ.

* ಭಕ್ತಾದಿಗಳು ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್‌ ತಮ್ಮ ಬಳಿ‌ ಯಾವಾಗಲೂ ಇಟ್ಟುಕೊಂಡು ಆಗಾಗ ಉಪಯೋಗಿಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಧ್ವನಿವರ್ಧಕ ಹಾಗೂ ಸೂಚನಾ ಫಲಕಗಳ ಮೂಲಕ, ದೇವಾಲಯದಿಂದ ನೀಡುವ‌ ಸೂಚನೆ ತಪ್ಪದೇ ಪಾಲಿಸಬೇಕು.

* ರಾತ್ರಿ ವಸತಿ ಗೃಹಗಳು ಹಾಗೂ ಕಾಟೇಜು/ಡಾರ್ಮಿಟರಿ ಹೊರತುಪಡಿಸಿ, ರಂಗಮಂದಿರ, ದೇವಾಲಯದ ಮುಂದೆ ಅಥವಾ ಇನ್ನಾವುದೇ ಜಾಗದಲ್ಲಿ ರಾತ್ರಿ ಭಕ್ತಾದಿಗಳು ವಾಸ್ತವ್ಯ ಹೂಡುವುದು ನಿಷೇಧಿಸಿದೆ.

* ನವೆಂಬರ್ 1ರಿಂದ ಆರಂಭವಾಗುವಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮುಡಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಆನ್‌ಲೈನ್ ಮೂಲಕ ಇದ್ದ ಎಲ್ಲಾ ಸೇವೆಗಳನ್ನು ಈ ತಕ್ಷಣದಿಂದ ಬುಕಿಂಗ್ ಮಾಡಲು ಅವಕಾಶ ಕೊಡಲಾಗಿದೆ.

* ಇನ್ನು ಮೂರು ದಿನದಲ್ಲಿ ವಿಶೇಷ ಸಹಾಯವಾಣಿ ಸಂಖ್ಯೆ ಆರಂಭವಾಗಲಿದೆ. 24 x 7 ಸೇವೆ ಇದ್ದಾಗಿದ್ದು, ಭಕ್ತಾದಿಗಳಿಗೆ ಅಗತ್ಯ ಸಹಾಯವಾಗಲಿದೆ. ಅಲ್ಲಿಯ ತನಕ 08225-272121 ಸಂಖ್ಯೆಗೆ ಕರೆ ಮಾಡಬಹುದು. ದಾಸೋಹದಲ್ಲಿ ಹಾಲಿ‌ ಇರುವ ತಿಂಡಿ, ಪ್ರಸಾದ ಸೇವೆ ಮಾತ್ರ ಇರಲಿದೆ. ಊಟದ ವ್ಯವಸ್ಥೆ ಇರುವುದಿಲ್ಲ.

* ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಇದ್ದ ದರ್ಶನ ಹಾಗೂ ಎಲ್ಲಾ ಸೇವೆಗಳನ್ನು ಬೆಳಗ್ಗೆ 4 ರಿಂದ ರಾತ್ರಿ 10ರವರೆಗೆ‌ ವಿಸ್ತರಿಸಲಾಗಿದೆ.

English summary
Directions to devotees of Male Mahadeshwara temple. Male Mahadeshwara is a famous temple in Chamarajanagar district of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X