ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದ ಗ್ರಾಮ ಸ್ಮಾರ್ಟ್‌, ಡಿಜಿಟಲ್ ಗ್ರಂಥಾಲಯ ಸ್ಥಾಪನೆ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂ 24: ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಗ್ರಾಮಾಂತರ ಪ್ರದೇಶದಲ್ಲಿ ಡಿಜಿಟಲ್ ಗ್ರಂಥಾಲಯವೊಂದು ನಿರ್ಮಾಣವಾಗಿದ್ದು ಕೆಲವೇ ದಿನಗಳಲ್ಲಿ ಹಳ್ಳಿಯ ಜನರ ಬಳಕೆಗೆ ಮುಕ್ತವಾಗಲಿದೆ. ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವ ರೂಪುಗೊಂಡಿದೆ.

15ನೇ ಹಣಕಾಸಿನಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಹಳೇ ಕಟ್ಟಡವನ್ನು ದುರಸ್ಥಿ ಪಡಿಸಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ನಿರ್ಮಿಸಿದ್ದು ನೂತನ ಗ್ರಂಥಾಲಯದಲ್ಲಿ 12 ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ ಅಳವಡಿಸಿದ್ದು 6600 ಪುಸ್ತಕವನ್ನು ಖರೀದಿಸಿ ತರಲಾಗಿದೆ.‌

ಚಾಮರಾಜನಗರದಲ್ಲಿ ಡಯಾಲಿಸಿಟ್ ಸಿಬ್ಬಂದಿ ಮುಷ್ಕರ: ರೋಗಿಗಳ ಪರದಾಟ! ಚಾಮರಾಜನಗರದಲ್ಲಿ ಡಯಾಲಿಸಿಟ್ ಸಿಬ್ಬಂದಿ ಮುಷ್ಕರ: ರೋಗಿಗಳ ಪರದಾಟ!

ಗ್ರಾಮೀಣ ಮಟ್ಟದಲ್ಲಿ ಸುಸಜ್ಜಿತವಾದ ಡಿಜಿಟಿಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಜಿಲ್ಲೆಯಲ್ಲಿ ಇದೇ ಮೊದಲಾಗಿದ್ದು ಇಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ದತ್ತಾಂಶ, ಯೋಜನೆ, ನೌಕರಿ ಸಂಬಂಧ, ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಮಾಹಿತಿಯನ್ನು ಆನ್‍ಲೈನ್ ಮೂಲಕ ದೊರೆಯಲಿದೆ.

Digital Library to Open for Public at Gundlupet Soon

ವೈಫೈ ಸೇವೆ; ಗ್ರಂಥಾಲಯದಲ್ಲಿ ವೈಫೈ ಇರುವ ಕಾರಣ ಸಾರ್ವಜನಿಕರು ಉಚಿತವಾಗಿ ಇಂಟರ್ನೆಟ್ ಬಳಸಬಹುದಾಗಿದೆ. ಈ ಸಂಬಂಧ ಹುಂಡೀಪುರ ಗ್ರಾಮ ಪಂಚಾಯಿತಿ ಪಿಡಿಒ ಕುಮಾರಸ್ವಾಮಿ ಮಾತನಾಡಿ, "ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರ ಆಸಕ್ತಿಯ ಫಲವಾಗಿ ತುರ್ತಾಗಿ ಕೆಲಸ ಮುಗಿಸಲಾಗಿದೆ. ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಬೇಕಾದ ಕಂಪ್ಯೂಟರ್,ಪುಸ್ತಕ ಖರೀದಿಸಲಾಗಿದೆ ಹಾಗೂ ಟಿವಿಯನ್ನು ಅಳವಡಿಸುವ ಕೆಲಸ ಮಾತ್ರ ಬಾಕಿಯಿದೆ" ಎಂದರು.

ಮೇಕೆದಾಟು ಪ್ರದೇಶ ವೀಕ್ಷಿಸಿದ ಚಾಮರಾಜನಗರ ಡಿಸಿ ಮೇಕೆದಾಟು ಪ್ರದೇಶ ವೀಕ್ಷಿಸಿದ ಚಾಮರಾಜನಗರ ಡಿಸಿ

75ನೇ ಸ್ವಾತಂತ್ರೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದ ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಹುಂಡೀಪುರ ಸೇರಿರುವುದು ವಿಶೇಷ.

Digital Library to Open for Public at Gundlupet Soon

ಡಿಜಿಟಲ್ ಗ್ರಂಥಾಲಯ; ಗ್ರಾಮೀಣ ಭಾಗದ ಗ್ರಂಥಾಲಯ ಎಂದರೆ ಹಳೇ ಕಟ್ಟಡ, ಧೂಳು ತಿಂದ ಪುಸ್ತಕಗಳು ಇರುತ್ತವೆ ಎನ್ನೋ ಭಾವನೆ ಎಲ್ಲರಲ್ಲೂ ಇರುತ್ತೆ. ಆದರೆ, ಅಧಿಕಾರಿಗಳ ಆಸಕ್ತಿಯಿಂದ ಅಂತಹ ಭಾವನೆ ದೂರವಾಗಿದೆ. ಹುಂಡಿಪುರ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಏಕಕಾಲದಲ್ಲಿ ಆನ್‌ಲೈನಲ್ಲೇ 40 ಜನ ಕುಳಿತುಕೊಂಡು ಪ್ರಪಂಚದಲ್ಲಿರುವ ಎಲ್ಲಾ ಪುಸ್ತಕದ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ.

Digital Library to Open for Public at Gundlupet Soon

ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ, ಜನರಿಗೆ, ಬೇರೆ ಬೇರೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ -ಮಕ್ಕಳಿಗೆ ಬೇರೆ ಆಸನದ ವ್ಯವಸ್ಥೆ ಮಾಡಿರುವುದು ಇಲ್ಲಿನ ವಿಶೇಷತೆ. ಇನ್ನೂ ಗಾಳಿ ಬೆಳಕು, ನೀರಿನ ವ್ಯವಸ್ಥೆ ಸೇರಿದಂತೆ ಸೌಲಭ್ಯ ನೋಡಬಹುದು.

English summary
Digital library to open for public at Hundipura in Gundlupet taluk of Chamarajanagar soon. This is 1st digital library of district rural area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X