ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಸೀಳುನಾಯಿಯ ಬೇಟೆಯ ಪರಿ ನೋಡಿದ್ದೀರಾ?

|
Google Oneindia Kannada News

ಗುಂಡ್ಲುಪೇಟೆ, ಜನವರಿ 23: ಬಂಡೀಪುರ ಅಭಯಾರಣ್ಯದಲ್ಲಿ ಹುಲಿ, ಕಾಡಾನೆ, ಕರಡಿ, ಜಿಂಕೆ, ಕಾಡುಕೋಣ, ಚಿರತೆಗಳ ನಡುವೆ ಇದೀಗ ಕಾಡು ನಾಯಿಗಳು ಕೂಡ ಆಗೊಮ್ಮೆ ಈಗೊಮ್ಮೆ ದರ್ಶನ ನೀಡಿ ಸಫಾರಿಗೆ ಆಗಮಿಸುವ ಪ್ರವಾಸಿಗರಿಗೆ ಪುಳಕ ನೀಡುತ್ತವೆ.

ಇತ್ತೀಚಿನ ದಿನಗಳಲ್ಲಿ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರಿಗೆ ವಿವಿಧ ಬಗೆಯ ವನ್ಯ ಪ್ರಾಣಿಗಳು ಕಾಣ ಸಿಗುತ್ತಿರುವುದರಿಂದಾಗಿ ಪ್ರಾಣಿ ಪ್ರಿಯರು ಹೆಚ್ಚು ಹೆಚ್ಚಾಗಿ ಇತ್ತ ಖುಷಿಯಿಂದ ಬರುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರು ಕೆಲವೊಮ್ಮೆ ಅಪರೂಪದ ಚಿತ್ರಗಳನ್ನೂ ಸೆರೆ ಹಿಡಿಯುತ್ತಾರೆ.

Dhole Found Hunting Deer In Bandipur

 ಬಂಡೀಪುರದ ಚೆಲುವಿಗೆ ಮನಸೋತ ಪ್ರವಾಸಿಗರು ಬಂಡೀಪುರದ ಚೆಲುವಿಗೆ ಮನಸೋತ ಪ್ರವಾಸಿಗರು

ಹಾಗೆ ನೋಡಿದರೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರೂ ಎಲ್ಲರಿಗೂ ಎಲ್ಲ ಸಂದರ್ಭಗಳಲ್ಲಿ ಅಪರೂಪದ ಚಿತ್ರಗಳು ಸಿಗುವುದಿಲ್ಲ. ಕೆಲವೊಮ್ಮೆ ವನ್ಯ ಪ್ರಾಣಿಗಳು ಕಾಣಸಿಗುವುದೇ ಕಷ್ಟ. ಹೀಗಿರುವಾಗ ಪ್ರಾಣಿಗಳ ಚಿತ್ರಗಳು ಸಿಗುವ ಮಾತೆಲ್ಲಿ? ಆದರೆ ಅದೃಷ್ಟವೋ ಏನೋ ಕೆಲವು ಪ್ರವಾಸಿಗರಿಗೆ ಒಂದೊಳ್ಳೆಯ ಚಿತ್ರಗಳು ಸಿಕ್ಕಿ ಬಿಡುತ್ತವೆ.

Dhole Found Hunting Deer In Bandipur

ವೈರಲ್ ಪೋಸ್ಟ್; ಕಾಡಿನ ರಾಜ ಸಿಂಹದ ದಯನೀಯ ಸ್ಥಿತಿ ವೈರಲ್ ಪೋಸ್ಟ್; ಕಾಡಿನ ರಾಜ ಸಿಂಹದ ದಯನೀಯ ಸ್ಥಿತಿ

ಇದೀಗ ಪ್ರವಾಸಿಗ ನಾಗರಾಜು ಎಂಬುವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸುತ್ತಿದ್ದಾಗ ಜಿಂಕೆ ಮರಿಯನ್ನು ಬೇಟೆಯಾಡಿ ಮಾಂಸವನ್ನು ಭಕ್ಷಣೆ ಮಾಡುತ್ತಿರುವ ಮತ್ತು ಮಾಂಸವನ್ನು ಹೊತ್ತೊಯ್ಯುತ್ತಿರುವ ಸೀಳು ನಾಯಿಯ ಚಿತ್ರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಚಿತ್ರ ಬಹುತೇಕ ಜನರ ಮನಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದೆ.

English summary
In Bandipur Wildlife Sanctuary, among the tiger, bear, deer, wild leopard, the dhole is also appearing to tourists who come by safari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X