ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಂಗಳ್ಳಿ ಬೆಟ್ಟದಲ್ಲಿ ಅರಣ್ಯ ಸಿಬ್ಬಂದಿ ವಿರುದ್ಧ ಪ್ರತಿಭಟನೆ

|
Google Oneindia Kannada News

ಚಾಮರಾಜನಗರ, ಜುಲೈ 2: ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವ ಕೊಂಗಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ವಾಹನಗಳಿಗೆ ಶುಲ್ಕ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.

 ಶ್ರೀರಂಗಪಟ್ಟಣದಲ್ಲಿ ದುಪ್ಪಟ್ಟು ವಾಹನ ಶುಲ್ಕ ವಸೂಲಿ:ಆರೋಪ ಶ್ರೀರಂಗಪಟ್ಟಣದಲ್ಲಿ ದುಪ್ಪಟ್ಟು ವಾಹನ ಶುಲ್ಕ ವಸೂಲಿ:ಆರೋಪ

ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಕೊಂಗಹಳ್ಳಿ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ದೇಗುಲಕ್ಕೆ ಭಕ್ತರು ತೆರಳುತ್ತಿದ್ದು, ಇಲ್ಲಿ ಭಕ್ತರ ವಾಹನಗಳಿಗೆ ಶುಲ್ಕ ಕಟ್ಟುವಂತೆ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟಪ್ಪಣೆ ಮಾಡುತ್ತಿದೆ. ಈ ಕ್ರಮದಿಂದ ಬೇಸತ್ತ ಭಕ್ತಾದಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

devotees protest against tamilnadu forest officials in kongalli

ತಮಿಳುನಾಡಿನಲ್ಲಿರುವ ಕೊಂಗಹಳ್ಳಿ ಬೆಟ್ಟಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುವ ಹಿನ್ನೆಲೆಯಲ್ಲಿ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕೊಂಗಹಳ್ಳಿ ಬೆಟ್ಟದಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿರುವ ಭಕ್ತರು ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಮಂಗಳವಾರ ಅಮಾವಾಸ್ಯೆಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದನ್ನು ಕಂಡ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

English summary
Devotees who came to visit temple in Mallikarjuna Hill protested against the tamilnadu forest officials in kongalli of chamarajanagar. Tamilnadu Forest officials are demanding to pay vehicle fee from devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X