• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಸಿಕೆ ಪಡೆದಿದ್ದ ಚಾಮರಾಜನಗರ ಡಿಸಿಗೆ ಕೋವಿಡ್

|

ಚಾಮರಾಜನಗರ, ಏಪ್ರಿಲ್ 5; ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಜಿಲ್ಲಾಧಿಕಾರಿಗಳು 2 ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದರು.

ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರಿಗೆ ಎರಡು ದಿನಗಳಿಂದ ನೆಗಡಿ, ಗಂಟಲು ನೋವು ಕಾಣಿಸಿಕೊಂಡಿತ್ತು. ಶನಿವಾರ ಅವರ ಗಂಟಲು ದ್ರಮ ಮಾದರಿ ಪರೀಕ್ಷೆಯನ್ನು ಮಾಡಲಾಗಿತ್ತು. ಭಾನುವಾರ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ.

ಕೋವಿಡ್ ಮಾರ್ಗಸೂಚಿಗೆ ಜಿಮ್ ಅಸೋಸಿಯೇಷನ್ ತೀವ್ರ ಆಕ್ಷೇಪಕೋವಿಡ್ ಮಾರ್ಗಸೂಚಿಗೆ ಜಿಮ್ ಅಸೋಸಿಯೇಷನ್ ತೀವ್ರ ಆಕ್ಷೇಪ

ಜಿಲ್ಲಾಧಿಕಾರಿಗಳು ಹೋಂ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಎರಡು ಡೋಸ್‌ನ ಕೋವಿಶೀಲ್ಡ್‌ ಲಸಿಕೆಯನ್ನು ಪಡೆದಿದ್ದರು.

ಆರೋಗ್ಯ, ಫ್ರಂಟ್ ಲೈನ್ ಕಾರ್ಯಕರ್ತರ ಲಸಿಕೆ ನೋಂದಣಿ ಸ್ಥಗಿತ ಆರೋಗ್ಯ, ಫ್ರಂಟ್ ಲೈನ್ ಕಾರ್ಯಕರ್ತರ ಲಸಿಕೆ ನೋಂದಣಿ ಸ್ಥಗಿತ

ಡಾ. ಎಂ. ಆರ್. ರವಿ ಫೆಬ್ರವರಿ 8ರಂದು ಮೊದಲ ಡೋಸ್, ಮಾರ್ಚ್ 8ರಂದು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದರು. ಎರಡನೇ ಡೋಸ್ ಲಸಿಕೆ ಪಡೆದ 27 ದಿನಗಳ ನಂತರ ಸೋಂಕು ತಗುಲಿದೆ.

ಬೆಂಗಳೂರು: ಹಣನೀಡಿ ಕೊರೊನಾ ಲಸಿಕೆ ಪಡೆಯುವ ಖಾಸಗಿ ಕೇಂದ್ರಗಳು ಬೆಂಗಳೂರು: ಹಣನೀಡಿ ಕೊರೊನಾ ಲಸಿಕೆ ಪಡೆಯುವ ಖಾಸಗಿ ಕೇಂದ್ರಗಳು

ಭಾನುವಾರ ಚಾಮರಾಜನಗರ ಜಿಲ್ಲೆಯಲ್ಲಿ 15 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 7141ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳು 75.

   ಜೈಲಿಗೆ ಹೋಗ್ಬೇಕು ಅಂತ ಹೆದರಿ ಹೊಸ ಡ್ರಾಮಾ ಶುರು ಮಾಡಿದ್ರಾ? | Jarkiholi High drama | Oneindia Kannada

   ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಕೋವಿಡ್ ಲಸಿಕಾ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.
   45 ವರ್ಷ ಮೇಲ್ಪಟ್ಟ ಎಲ್ಲರೂ ಸಹ ಕೋವಿಡ್ ಲಸಿಕೆಯನ್ನು ಹತ್ತಿರದ ಸರ್ಕಾರಿ/ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಉಚಿತವಾಗಿದೆ.

   English summary
   Deputy commissioner of Chamarajanagar Dr. M. R. Ravi tested positive for COVID 19. He taken COVID vaccine on February 8 and 2nd dose on March 8.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X