ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಆರಂಭ

By Mahesh
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 18:ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಅ. 18ರಿಂದ ಮೂರು ದಿನ ದೀಪಾವಳಿ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.

ಆದರೆ, ಸೋಮವಾರದಿಂದಲೇ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಆಗಮಿಸಿದ್ದು,ಬರಿಗಾಲಿನಲ್ಲಿ ಬೆಟ್ಟವನ್ನೇರುತ್ತಿರುವ ದೃಶ್ಯ ಕಂಡು ಬಂದಿದೆ.

ಅಕ್ಟೋಬರ್ 18ರಂದು ನರಕ ಚತುರ್ದಶಿ ಅಂಗವಾಗಿ ಮಹದೇಶ್ವರ ಸ್ವಾಮಿಗೆ ವಿಶೇಷ ಎಣ್ಣೆಮಜ್ಜನ, ಅಮಾವಾಸ್ಯೆ ಪೂಜೆ, ಹಾಲರವಿ ಉತ್ಸವಗಳು ನಡೆಯಲಿವೆ. ಶುಕ್ರವಾರ ರಥೋತ್ಸವ ಮತ್ತು ತೆಪ್ಪೋತ್ಸವ ಜರುಗಲಿದೆ.

Deepavali Jatra begins at MM Hills Kollegala, Chamarajanagara

ಮಲೈ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೆಗಳಾದ ಮಹಾಲಯ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರ ವಾರ್ಷಿಕ ಜಾತ್ರೆಗಳು ವಿಜೃಂಭಣೆಯಿಂದ ಜರುಗುವುದನ್ನು ಇಲ್ಲಿ ಸ್ಮರಿಸಬಹುದು.

ಅಕ್ಟೋಬರ್ 22 ರಿಂದ 23 ರವರೆಗೆ 1ನೇ ಕಾರ್ತಿಕ ಸೋಮವಾರ, ಅಕ್ಟೋಬರ್ 29 ರಿಂದ 30 ರವರೆಗೆ 2ನೇ ಕಾರ್ತಿಕ ಸೋಮವಾರ, ನವೆಂಬರ್ 5 ರಿಂದ 6 ರವರೆಗೆ 3ನೇ ಕಾರ್ತಿಕ ಸೋಮವಾರ, ನವೆಂಬರ್ 12 ರಿಂದ 13 ರವರೆಗೆ 4ನೇ ಕಾರ್ತಿಕ ಸೋಮವಾರ ಹಾಗೂ ನವೆಂಬರ್ 16 ರಿಂದ 18 ರವರೆಗೆ ಎಣ್ಣೆ ಮಜ್ಜನ ಮತ್ತು ಅಮಾವಾಸ್ಯೆ ಜಾತ್ರೆಗಳು ನಡೆಯಲಿದೆ ಎಂದು ಶ್ರೀ ಮಲೈ ಮಹೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

English summary
Deepavali Jatra begins today(Oct 18) at Malai Mahadeshwara HIlls Temple, Kollegala, Chamarajanagara district in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X