ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

18 ವರ್ಷವಾದ್ರೂ ಮುಗಿಯದ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ

|
Google Oneindia Kannada News

ಚಾಮರಾಜನಗರ, ಮಾರ್ಚ್ 5: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ದಲಿತ ಹೋರಾಟಗಾರರು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ತಡ ಆಗಿರುವುದು ಅವರ ಬೇಸರಕ್ಕೆ ಕಾರಣವಾಗಿದೆ.

2002ರಲ್ಲಿ ಕೊಳ್ಳೇಗಾಲದಲ್ಲಿ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಶುರು ಆಗಿತ್ತು. ಆಗ ಕೇಂದ್ರ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಕಾಮಗಾರಿಗೆ ಹಣ ಮಂಜೂರು ಮಾಡಿದ್ದರು. ಆದರೆ, ಈ ಕಾಮಗಾರಿ ಪ್ರಾರಂಭವಾಗಿ 18 ವರ್ಷ ಕಳೆದರೂ, ಕಟ್ಟಡ ನಿರ್ಮಾಣ ಪೂರ್ಣ ಆಗಿಲ್ಲ.

ವರ್ಷದಿಂದ ವರ್ಷಕ್ಕೆ ಶ್ರೀಮಂತನಾಗುತ್ತಿದ್ದಾನೆ ಮಲೆ ಮಹದೇಶ್ವರವರ್ಷದಿಂದ ವರ್ಷಕ್ಕೆ ಶ್ರೀಮಂತನಾಗುತ್ತಿದ್ದಾನೆ ಮಲೆ ಮಹದೇಶ್ವರ

ಸದ್ಯದವರೆಗೆ, 3 ಕೋಟಿ 50 ಲಕ್ಷ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಮಂಜುರಾಗಿದೆ. ಆದರೆ, ಕಟ್ಟಡ ಪೂರ್ಣ ಆಗಲು ಇನ್ನೂ 2 ಕೋಟಿ 43 ಲಕ್ಷ ಹಣ ಬೇಕಾಗಿದೆ. 75 ರಷ್ಟು ಕೆಲಸಗಳು ನಡೆಸಿದ್ದು, 25 ಭಾಗ ಇನ್ನೂ ಆಗಬೇಕಿದೆ.

Dalit Leaders Annoyed For Incompletion Of Ambedkar Samudaya Bhavana

ಸರ್ಕಾರಗಳು ಹಣ ಬಿಡುಗಡೆ ಮಾಡದೆ ಇದ್ದ ಕಾರಣ ಈ ಕಾಮಗಾರಿ ಹಾಗೇಯೇ ನಿಂತಿದೆ. ಕಟ್ಟಡ ಕೆಲಸಗಳನ್ನು ಪೂರ್ಣ ಮಾಡಲು ಶಾಸಕ ಮಹೇಶ್ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್‌ರಿಗೆ ಜನರು ಮನವಿ ಮಾಡಿದ್ದಾರೆ.

ಚಾಮರಾಜನಗರದಲ್ಲಿ ಅಕ್ರಮ ವಿದ್ಯುತ್‌ ಬೇಲಿಗೆ ಎರಡು ಕಾಡಾನೆಗಳು ಬಲಿಚಾಮರಾಜನಗರದಲ್ಲಿ ಅಕ್ರಮ ವಿದ್ಯುತ್‌ ಬೇಲಿಗೆ ಎರಡು ಕಾಡಾನೆಗಳು ಬಲಿ

''ಕಾಮಗಾರಿ ತಡ ಆಗಲು ಜನ ಕಾರಣ ಅಲ್ಲ. ಇಲ್ಲಿಂದ ಆಯ್ಕೆ ಆದ ಎಲ್ಲ ಪಕ್ಷದ ನಾಯಕರು, ಚುನಾವಣಾ ಪ್ರತಿನಿಧಿಗಳು ನಿರ್ಲಕ್ಷಾತೆಯನ್ನು ತೋರಿಸುತ್ತಿದೆ.'' ಎಂದು ದಲಿತಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Dalit leaders annoyed for incompletion of ambedkar samudaya bhavana sense 18 years in Kollegala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X