ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಅವರ ಈ ಪ್ರಕರಣ ಸಾಬೀತಾದರೆ 1 ವರ್ಷ ಜೈಲು ಸಾಧ್ಯತೆ

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ | Oneindia Kannada

ಚಾಮರಾಜನಗರ, ನವೆಂಬರ್ 16: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧದ ತೀರ್ಪು ಒಂದನ್ನು ನ್ಯಾಯಾಲಯ ಕಾಯ್ದಿರಿಸಿದೆ ಹಾಗಾದರೆ ಆ ತೀರ್ಪು ಏನೆಂದು ಎಲ್ಲರಿಗೂ ಕುತೂಹಲ ಇರಬಹುದು ಮುಂದೆ ಓದಿ..

ಬಿಎಸ್ ಯಡಿಯೂರಪ್ಪ ಅವರು ಗುಂಡ್ಲು ಪೇಟೆ ಉಪ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು ಎಂದು ಹೇಳಲಾಗಿದ್ದು, ಈ ಕುರಿತು ವಿಚಾರಣೆಯನ್ನು ಪೂರ್ಣಗೊಳಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ.29ಕ್ಕೆ ತೀರ್ಪು ಕಾಯ್ದಿರಿಸಿದೆ.

ಯಡಿಯೂರಪ್ಪ ಬದಲಾವಣೆಗೆ ಭಾರಿ ವಿರೋಧ, ಅಮಿತ್ ರಿಂದ ತಾಳ್ಮೆ ಪಾಠ ಯಡಿಯೂರಪ್ಪ ಬದಲಾವಣೆಗೆ ಭಾರಿ ವಿರೋಧ, ಅಮಿತ್ ರಿಂದ ತಾಳ್ಮೆ ಪಾಠ

ಪ್ರಚಾರ ಸಂದರ್ಭ ಭೀಮನಬೀಡು ಗ್ರಾಮಕ್ಕೆ ಹೋಗಿದ್ದ ಯಡಿಯೂರಪ್ಪ ಕಮಲದ ಗುರುತಿಗೆ ಮತ ನೀಡುವವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಕೈ ಎತ್ತಿ ಎಂದಿದ್ದರು.

ಅಧಿಕಾರಕ್ಕೆ ಬಂದರೆ ಗ್ರಾಮ ದತ್ತು ಸ್ವೀಕಾರ

ಅಧಿಕಾರಕ್ಕೆ ಬಂದರೆ ಗ್ರಾಮ ದತ್ತು ಸ್ವೀಕಾರ

ಅಧಿಕಾರಕ್ಕೆ ಬಂದರೆ ಗುಂಡ್ಲು ಪೇಟೆ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು, ಈ ಕುರಿತು ದಾಖಲಾದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಯಡಿಯೂರಪ್ಪ ಬದಲಿಸಿದರೆ ಮುಂದೆ ಯಾರು? ಬಿಜೆಪಿ ಹೈಕಮಾಂಡ್ ಜಿಜ್ಞಾಸೆ ಯಡಿಯೂರಪ್ಪ ಬದಲಿಸಿದರೆ ಮುಂದೆ ಯಾರು? ಬಿಜೆಪಿ ಹೈಕಮಾಂಡ್ ಜಿಜ್ಞಾಸೆ

ಪ್ರಕರಣದ ಸಾಕ್ಷಿ ಹೇಳಿಕೆ ದಾಖಲು

ಪ್ರಕರಣದ ಸಾಕ್ಷಿ ಹೇಳಿಕೆ ದಾಖಲು

ಯಡಿಯೂರಪ್ಪ ಗುಂಡ್ಲು ಪೇಟೆ ಉಪ ಚುನಾವಣೆ ವೇಳೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಾಗಿದ್ದು, ಆರೋಪಿಯಾಗಿರುವ ಯಡಿಯೂರಪ್ಪ ಹೇಳಿಕೆ ದಾಖಲಿಸಲು ನ್ಯಾಯಾಲಯ ಸಮನ್ಸ್ ನೀಡಿತ್ತು ಅದರಂತೆ ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಯಡಿಯೂರಪ್ಪ ಅವರು ತಮ್ಮ ವಿರುದ್ಧ ಮಾಡಿರುವ ಆರೋಪ ಆಧಾರ ರಹಿತ ಎಂದು ಹೇಳಿಕೆ ನೀಡಿದ್ದಾರೆ.

ಗಾಲಿ ರೆಡ್ಡಿ ಬಿಜೆಪಿಯಲ್ಲಿಲ್ಲ, ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ: ಬಿಎಸ್ವೈ ಗಾಲಿ ರೆಡ್ಡಿ ಬಿಜೆಪಿಯಲ್ಲಿಲ್ಲ, ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ: ಬಿಎಸ್ವೈ

ಗರಿಷ್ಠ ಒಂದು ವರ್ಷ ಜೈಲು, ದಂಡ:

ಗರಿಷ್ಠ ಒಂದು ವರ್ಷ ಜೈಲು, ದಂಡ:

ಯಡಿಯೂರಪ್ಪ ವಿರುದ್ಧ ಪ್ರಕರಣ ಸಾಬೀತಾದರೆ ಐಪಿಸಿ ಕಲಂ 171 ಎಫ್ ಅಡಿ ಗರಿಷ್ಠ 1 ವರ್ಷ ಜೈಲು ಅಥವಾ ದಂಡ, ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಹಾಗೆಯೇ ಕಲಂ 171 ಜಿ ಅಡಿ ದಂಡ ವಿಧಿಸಬಹುದು.

ಮತ್ತೊಂದು ಪ್ರಕರಣದಲ್ಲೂ ತೀರ್ಪು

ಮತ್ತೊಂದು ಪ್ರಕರಣದಲ್ಲೂ ತೀರ್ಪು

ಇದೇ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಸಾಲಬಾಧೆಯಿಂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ ನೀಡಿದ ಆರೋಪದ ಪ್ರಕರಣದಲ್ಲೂ ಯಡಿಯೂರಪ್ಪ ವಿರುದ್ಧ ವಿಚಾರಣೆ ಪೂರ್ಣಗೊಳಿಸಿ ವಿಶೇಷ ನ್ಯಾಯಾಲಯ ನವೆಂಬರ್ 29ಕ್ಕೆ ತೀರ್ಪು ಕಾಯ್ದಿರಿಸಿದೆ.

English summary
Special court has been reserved it's order pertaining to election code of conduct violation from BJP State president BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X