ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

|
Google Oneindia Kannada News

ಚಾಮರಾಜನಗರ, ಜೂನ್ 24: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ೮ ಕ್ಕೆ ಏರಿಕೆಯಾಗಿದ್ದು, ಎಚ್ಚರ ತಪ್ಪಿದರೆ ಗುಂಡ್ಲುಪೇಟೆಯು ಕೊರೊನಾ ಹಾಟ್ ಸ್ಪಾಟ್ ಆಗಲಿದೆ.

Recommended Video

ತಂದೆ, ಪತ್ನಿ, ಮಗುವಿಗೆ ಕೊರೊನ ತಗುಲಿರುವ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ | DR Sudhakar talksabout his family

ಗುಂಡ್ಲುಪೇಟೆಯ ಮಹಾದೇವ್ ಪ್ರಸಾದ್ ನಗರದಲ್ಲಿ ಐದು ಕೊರೊನಾ ವೈರಸ್ ಪ್ರಕರಣ ಕಾಣಿಸಿಕೊಂಡಿವೆ. ಸೋಂಕಿತನ ಸಂಪರ್ಕವಿಲ್ಲದ ಕಂಟೈನ್ಮೆಂಟ್ ವಲಯದ ಆಚೆಗಿನ ಇಬ್ಬರು ಮಹಿಳೆಯರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಸಮುದಾಯಕ್ಕೆ ಹರಡುವ ಆತಂಕ ಎದುರಾಗಿದೆ.

ಹಸಿರು ವಲಯದಲ್ಲಿದ್ದ ಚಾಮರಾಜನಗರದಲ್ಲಿ 2 ಕೊರೊನಾವೈರಸ್ ಪತ್ತೆಹಸಿರು ವಲಯದಲ್ಲಿದ್ದ ಚಾಮರಾಜನಗರದಲ್ಲಿ 2 ಕೊರೊನಾವೈರಸ್ ಪತ್ತೆ

ಜಿಲ್ಲೆಯ 8 ಪ್ರಕರಣಗಳಲ್ಲಿ 5 ಪ್ರಕರಣ ಗುಂಡ್ಲುಪೇಟೆಯದ್ದಾಗಿವೆ. 39 ಪ್ರಾಥಮಿಕ ಸಂಪರ್ಕಿತರಲ್ಲಿ 15 ಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ತಗುಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Coronavirus Infection Rised To 8 In Chamarajanagara

ಗುಂಡ್ಲುಪೇಟೆಯ ಕೊರೊನಾ ವೈರಸ್ ಸೋಂಕಿತ ಚಾಲಕನಿಗೆ 39 ಮಂದಿ ಪ್ರಾಥಮಿಕ‌ ಸಂಪರ್ಕಿತರುವುದು, 170 ಕ್ಕೂ ಹೆಚ್ಚು ಜನ ದ್ವಿತೀಯ ಸಂಪರ್ಕಿತರಿರುವುದು ಕಳವಳಕಾರಿಯಾದ ವಿಷಯವಾಗಿದೆ.

ಎರಡು ದಿನದ ಅಂತರದಲ್ಲಿ ಗುಂಡ್ಲುಪೇಟೆಯಲ್ಲಿ 4 ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಬೀಡಿ ಕಟ್ಟುವ ಮಹಿಳೆಯರು, ಓರ್ವ ಚಾಲಕ, ಮತ್ತೋರ್ವ ಕೂಲಿ ಕೆಲಸಗಾರನಾಗಿದ್ದಾನೆ.

ಇನ್ನು ಚಾಮರಾಜನಗರದ ಸರ್ವೇಯರ್ ಜ್ವರವಿದ್ದರೂ ಎರಡು ದಿನ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ಕ್ಷೇತ್ರ ಕಾರ್ಯವನ್ನು ಮಾಡಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ ಟೆಬಲ್ ಗೆ ಸೋಂಕು ಕಂಡುಬಂದಿದ್ದು, ಸಂಪರ್ಕಿತರನ್ನು ಗುರುತಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಚಾಮರಾಜನಗರಕ್ಕೂ ಕಾಲಿಟ್ಟ ಕೊರೊನಾ ವೈರಸ್ ಸೋಂಕು!ಚಾಮರಾಜನಗರಕ್ಕೂ ಕಾಲಿಟ್ಟ ಕೊರೊನಾ ವೈರಸ್ ಸೋಂಕು!

ಚಾಮರಾಜನಗರದ ಒಟ್ಟು 8 ಪ್ರಕರಣಗಳಲ್ಲಿ ಮೊದಲ ಪ್ರಕರಣದ ವೈದ್ಯಕೀಯ ವಿದ್ಯಾರ್ಥಿ ಗುಣಮುಖನಾಗಿ ಬಿಡುಗಡೆಯಾಗಿದ್ದಾನೆ. ಗುಂಡ್ಲುಪೇಟೆಯ ಮಹಾದೇವಪ್ರಸಾದ್ ನಗರದ P-8311 ಸೇರಿದಂತೆ ಮೂವರು ಪುರುಷರು, ಇಬ್ಬರು ಗೃಹಿಣಿಯರು ಚಾಮರಾಜನಗರ ತಾಲೂಕು ಕಚೇರಿಯ ಸರ್ವೇಯರ್ ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಕಾನ್ಸ್ ಟೆಬಲ್ ಸದ್ಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೆಕ್ ಪೋಸ್ಟ್ ಗಳನ್ನು ಬಿಗಿ ಮಾಡುವ ಜೊತೆಗೆ ಅಂತರರಾಜ್ಯ ಸಂಚಾರದ ಮೇಲೆ ನಿಗಾ ಇಡಬೇಕಿದೆ. ಇದರೊಂದಿಗೆ ಜನರಲ್ಲಿ ಮರೆಯಾಗಿರುವ ಕೊರೊನಾ ವೈರಸ್ ಮುನ್ನೆಚ್ಚರಿಕೆಯನ್ನು ನೆನಪಿಸಿ ಜಾಗೃತಿ ಮೂಡಿಸಬೇಕಿದೆ.

English summary
Coronavirus has increased to 8 in the border district of Chamarajanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X