ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಸಿರಾಟ ಸಮಸ್ಯೆಯಿಂದ ಮಹಿಳೆ ಸಾವು; ಸ್ವಯಂಪ್ರೇರಿತವಾಗಿ ಚಾಮರಾಜನಗರ ಆಸ್ಪತ್ರೆ ಸೀಲ್ ಡೌನ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂನ್ 22: ಉಸಿರಾಟದ ಸಮಸ್ಯೆಯಿಂದ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಲ್ಲಿನ ಭ್ರಮರಾಂಬ ಬಡಾವಣೆಯಲ್ಲಿರುವ ಬಸವರಾಜೇಂದ್ರ ಆಸ್ಪತ್ರೆ ಸ್ವಯಂ ಪ್ರೇರಿತವಾಗಿ ಸೀಲ್ ಡೌನ್ ಆಗಿದೆ.

Recommended Video

Karnataka Lockdown? ಲಾಕ್ ಡೌನ್ ಎದುರಿಸಲು ಕರ್ನಾಟಕ ರಾಜ್ಯ ಎಲ್ಲಾ ರೀತಿಯಲ್ಲೂ ರೆಡಿ | Oneindia Kannada

ಚಾಮರಾಜನಗರದ ಭ್ರಮರಾಂಬ ಬಡಾವಣೆಯಲ್ಲಿನ ಬಸವರಾಜೇಂದ್ರ ಆಸ್ಪತ್ರೆಗೆ ನಿನ್ನೆ ಸಂಜೆ ವೇಳೆಗೆ ಕೊರೊನಾ ವೈರಸ್ ಲಕ್ಷಣಗಳಿದ್ದ ಬ್ಯಾಡಮೂಡ್ಲು ಗ್ರಾಮದ 23 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗೆಂದು ಬಂದಿದ್ದರು.

ಸರ್ಕಾರಿ ಜಾಹೀರಾತಿನಿಂದ ಗೊಂದಲಕ್ಕೀಡಾದ ಚಾಮರಾಜನಗರ ಜನಸರ್ಕಾರಿ ಜಾಹೀರಾತಿನಿಂದ ಗೊಂದಲಕ್ಕೀಡಾದ ಚಾಮರಾಜನಗರ ಜನ

ಈ ಮಹಿಳೆಯನ್ನು ತಪಾಸಣೆ ಮಾಡಿದ ಆಸ್ಪತ್ರೆಯ ವೈದ್ಯರು ಈಕೆಗೆ ಕೊರೊನಾ ಸೋಂಕು ಇರಬಹುದು ಎಂದು ಶಂಕಿಸಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ನಿನ್ನೆ ರಾತ್ರಿಯೇ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿದ್ದಾರೆ.

Chamarajanagar Private Hospital Sealdown By Fear Of Woman Death

ಮೃತಪಟ್ಟ ನಂತರ ಆ ಮಹಿಳೆಯ ಗಂಟಲು ದ್ರವ ಮಾದರಿಯನ್ನು ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆದರೂ ಈ ಮಹಿಳೆಯನ್ನು ಪ್ರಾಥಮಿಕವಾಗಿ ತಪಾಸಣೆ ಮಾಡಿದ್ದ ಬಸವರಾಜೇಂದ್ರ ಆಸ್ಪತ್ರೆ ಸ್ವಯಂಪ್ರೇರಿತವಾಗಿ ಸೀಲ್ ಡೌನ್ ಆಗಿದೆ. ಇಬ್ಬರು ವೈದ್ಯರು ಹಾಗೂ ಐದು ಮಂದಿ ವೈದ್ಯಕೀಯ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಆಸ್ಪತ್ರೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿದೆ.

English summary
Woman who took treatment for breathing problem in basavarajendra hospital dies in covid hospital today. So hospital administration decided to sealdown hospital,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X