ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಮೊದಲ ಕೊರೊನಾ ಪ್ರಕರಣದ ಮಹಿಳೆ ಸಾವು, ಆದರೆ...

|
Google Oneindia Kannada News

ಚಾಮರಾಜನಗರ, ಜೂನ್ 22: ಚಾಮರಾಜನಗರ ಜಿಲ್ಲೆ ಇಂದಿಗೂ ಕೊರೊನಾ ವೈರಸ್ ಮುಕ್ತ ಜಿಲ್ಲೆಯಾಗಿಯೇ ಮುಂದುವರೆದಿದೆ. ಆದರೆ ಜಿಲ್ಲೆಯಲ್ಲಿ ಮೊದಲ ಬಾರಿ ಕೊರೊನಾ ವೈರಸ್ ಪ್ರಕರಣಕ್ಕೆ ಸಂಬಂಧಿಸಿದ ಮಹಿಳೆ ಸಾವನ್ನಪ್ಪಿದ್ದಾಳೆ.

Recommended Video

ರಾಜಕೀಯ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ದುರಂತ ನಾಯಕ | H Vishwanath | Oneindia Kannada

ಆದರೆ ಮಹಿಳೆಯ ಸಾವು ಕೊರೊನಾ ವೈರಸ್ ನಿಂದಲ್ಲ. ಆಕೆಯ ನಿಧನಕ್ಕೂ, ಕೊರೊನಾ ವೈರಸ್ ಗೂ ಯಾವುದೇ ಸಂಬಂಧವಿಲ್ಲ. ಮೃತ ಮಹಿಳೆಯ ಕೊರೊನಾ ವೈರಸ್ ಟೆಸ್ಟ್ ನೆಗೆಟಿವ್ ಬಂದಿದ್ದು, ಯಾವುದೇ ಗೊಂದಲ, ಆತಂಕ ಬೇಡ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸ್ಪಷ್ಟಪಡಿಸಿದ್ದಾರೆ.

ಉಸಿರಾಟ ಸಮಸ್ಯೆಯಿಂದ ಮಹಿಳೆ ಸಾವು; ಸ್ವಯಂಪ್ರೇರಿತವಾಗಿ ಚಾಮರಾಜನಗರ ಆಸ್ಪತ್ರೆ ಸೀಲ್ ಡೌನ್ಉಸಿರಾಟ ಸಮಸ್ಯೆಯಿಂದ ಮಹಿಳೆ ಸಾವು; ಸ್ವಯಂಪ್ರೇರಿತವಾಗಿ ಚಾಮರಾಜನಗರ ಆಸ್ಪತ್ರೆ ಸೀಲ್ ಡೌನ್

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ (29) ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯಲ್ಲಿ ಕೊರೊನಾ ವೈರಸ್ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

Coronavirus Case Relate Woman Dies In Chamarajanagara

ಸೋಮವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯು ಮೃತಳಾಗಿದ್ದಾಳೆ. ತಡರಾತ್ರಿಯೇ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಇದೀಗ ಲ್ಯಾಬ್ ವರದಿ ಬಂದಿದ್ದು, ಸಾರಿ ಪಾಸಿಟಿವ್ ಕಂಡು ಬಂದಿದೆ. ಇದು ಕೊರೊನಾ ವೈರಸ್ ಮಾದರಿಯ ರೋಗ ಲಕ್ಷಣಗಳನ್ನು ಹೊಂದಿರುತ್ತದೆ ಅಷ್ಟೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದ ಮಹಿಳೆಯು ಮಂಡ್ಯದಿಂದ ಬಂದಿದ್ದಳು. ನಾಲ್ಕು ದಿನಗಳ ಹಿಂದಷ್ಟೇ ತವರಿಗೆ ಬಂದಿದ್ದ ಮಹಿಳೆಯಲ್ಲಿ ಕೊರೊನಾ ವೈರಸ್ ಲಕ್ಷಣ ಕಂಡು ಬಂದಿತ್ತು, ಆದರೆ ಅದು ಕೊರೊನಾ ವೈರಸ್ ಅಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮಾಹಿತಿ ನೀಡಿದರು.

English summary
Chamarajanagar district continues to be a coronavirus free district. But for the first time in the district, a woman related to the coronavirus case has died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X