• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಕೊರೊನಾ ಅಟ್ಟಹಾಸ; ಇನ್ನೂ ಇಲ್ಲಿ ಗಡಿ ಬಂದ್‌ ಮಾಡಿಲ್ಲ ಯಾಕೆ?

|

ಚಾಮರಾಜನಗರ, ಮಾರ್ಚ್ 30: ಕೊರೊನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳು ಕೇರಳದೊಂದಿಗಿನ ಸಂಪರ್ಕವನ್ನು ಗಡಿ ಬಂದ್ ಮಾಡುವ ಮೂಲಕ ಕಡಿದುಕೊಂಡು ಕೊರೊನಾ ತಡೆಗೆ ಮುಂಜಾಗ್ರತೆ ವಹಿಸಿವೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಕೇರಳಕ್ಕೆ ವಾಹನಗಳು ತೆರಳುತ್ತಿದ್ದು ಅಲ್ಲಿಂದಲೂ ವಾಹನಗಳು ಬರುತ್ತಿವೆ.

ಗಡಿ ಮುಚ್ಚಲು ಮೀನಾ ಮೇಷ ಎಣಿಸಲಾಗುತ್ತಿದೆ. ಕೇರಳದಿಂದ ಒಳಗೆ ಬರುವ ವಾಹನಗಳಿಗೆ ಚೆಕ್ ಪೋಸ್ಟ್‌ನಲ್ಲಿ ರಾಸಾಯನಿಕ ಔಷಧಿ ಸಿಂಪಡಿಸಿ ಕೈ ತೊಳೆದುಕೊಳ್ಳಲಾಗುತ್ತಿದೆ. ಆದರೆ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರ ಪರಿಣಾಮ ಜಿಲ್ಲೆಯ ಮೇಲಾಗುತ್ತಿದೆ ಎಂದು ಗೊತ್ತಿದ್ದರೂ ಇನ್ನೂ ಏಕೆ ಗಡಿ ಬಂದ್ ಮಾಡಿಲ್ಲ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಕೊರೊನಾ ತಡೆಗೆ ಚಾಮರಾಜನಗರದ 11 ಚೆಕ್‌ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣು

 ತರಕಾರಿ ತುಂಬಿಕೊಂಡು ಬರುವ ವಾಹನಗಳು

ತರಕಾರಿ ತುಂಬಿಕೊಂಡು ಬರುವ ವಾಹನಗಳು

ಇದೀಗ ಜನ ಸಾಮಾನ್ಯರೇ ಎಚ್ಚೆತ್ತುಕೊಂಡಿದ್ದು, ಕೇರಳಕ್ಕೆ ಪ್ರತಿನಿತ್ಯ ನೂರಾರು ವಾಹನಗಳು ತರಕಾರಿ ತುಂಬಿಕೊಂಡು ಹೋಗುವಂತಹ ವಾಹನಗಳನ್ನು ತಡೆದು ನಿಲ್ಲಿಸಿ ಮೂಲೆಹೊಳೆ ಗಡಿ ಚೆಕ್ ಪೋಸ್ಟ್ ಬಂದ್ ಮಾಡುವಂತೆ ಒತ್ತಾಯಿಸುವ ಮೂಲಕ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿದ್ದು ಇಲ್ಲೇಕೆ ಆಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

 ಕೊರೊನಾ ಮುಂಜಾಗ್ರತೆಗೆ ಜನರ ಆಗ್ರಹ

ಕೊರೊನಾ ಮುಂಜಾಗ್ರತೆಗೆ ಜನರ ಆಗ್ರಹ

ಪ್ರತಿನಿತ್ಯ ಗುಂಡ್ಲುಪೇಟೆಯಿಂದ ತರಕಾರಿ ತುಂಬಿಕೊಂಡು ನೂರಾರು ವಾಹನಗಳ ಕೇರಳಕ್ಕೆ ಹೋಗಿಬರುತ್ತಿವೆ. ಈಗಾಗಲೇ ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ನಿಂದ ನಮಗೂ ಹರಡಿದರೆ ಗತಿ ಏನು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಈ ಬಗ್ಗೆ ಗುಂಡ್ಲುಪೇಟೆ ತಾಲೂಕಿನ ಜನರು ಸಾಮಾಜಿಕ ಜಾಲತಾಣದ ಮೂಲಕ ಅಧಿಕಾರಿ, ಜನಪ್ರತಿನಿಧಿಗಳು ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಗುಂಡ್ಲುಪೇಟೆಯಿಂದ ಕೇರಳಕ್ಕೆ ತರಕಾರಿ, ಕೇರಳದಿಂದ ಗುಂಡ್ಲುಪೇಟೆಗೆ ಕೊರೊನಾ... ತಾಲೂಕಿನ ಜನರನ್ನು ರಕ್ಷಣೆ ಮಾಡಿ.. ಎಂಬಿತ್ಯಾದಿ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿವೆ.

 60ಕ್ಕೂ ಹೆಚ್ಚು ವಾಹನಗಳಿಗೆ ಪಾಸ್

60ಕ್ಕೂ ಹೆಚ್ಚು ವಾಹನಗಳಿಗೆ ಪಾಸ್

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮೂಲೆಹೊಳೆ ಕೆಕ್ಕನಹಳ್ಳ ಗಡಿ ಚೆಕ್ ಪೋಸ್ಟ್ ಮೂಲಕ ಕೇರಳ ತಮಿಳುನಾಡಿಗೆ ಈಗಾಗಲೇ ತಾಲೂಕು ಆಡಳಿತ 60ಕ್ಕೂ ಹೆಚ್ಚು ವಾಹನಗಳಿಗೆ ಪಾಸ್ ವಿತರಣೆ ಮಾಡಿದೆ. ಇದರಿಂದ ಜಿಲ್ಲೆಗೆ ಕೊರೊನಾ ವೈರಸ್ ಬಂದರೇನು ಗತಿ? ಎಂದು ಪ್ರಶ್ನಿಸಿರುವ ಗಡಿಭಾಗ ಗ್ರಾಮಗಳಾದ ಕಗ್ಗಳಹುಂಡಿ, ಚೆನ್ನಮಲ್ಲಿಪುರ ಬೇರಂಬಾಡಿ, ಮಂಗಲ, ಮದ್ದೂರು, ಗ್ರಾಮಸ್ದರು ಕೂಡಲೇ ಸಂಚಾರ ನಿಲ್ಲಿಸಿ ಗಡಿ ಬಂದ್ ಮಾಡಿ ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮೂಲೆಹೊಳೆ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಹೋಗಿದ್ದಾರೆ. ಆದರೆ ಚೆಕ್ ಪೋಸ್ಟ್ ಬಂದ್ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ.

 ಹೀಗೇ ಆದರೆ ಅಪಾಯ ತಪ್ಪಿದ್ದಲ್ಲ

ಹೀಗೇ ಆದರೆ ಅಪಾಯ ತಪ್ಪಿದ್ದಲ್ಲ

ಈ ಬಗ್ಗೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಮಾತನಾಡಿ, ಮೂಲೆಹೊಳೆ ಚೆಕ್ ಪೋಸ್ಟ್ ಬಂದ್ ಮಾಡುವ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಸಚಿವರು ತಕ್ಷಣವೇ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಗಡಿ ಬಂದ್ ಮಾಡುವ ಕುರಿತು ಚರ್ಚ ನಡೆಸಲಾಗುವುದು. ಎರಡು ರಾಜ್ಯಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆಯನ್ನು ಬಂದ್ ಮಾಡುವ ಅಧಿಕಾರ ನಮ್ಮ ಕೈಯಲ್ಲಿರುವುದಿಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚೆ ನಡೆಸಬೇಕೆಂದಿದ್ದಾರೆ. ಹೀಗಾಗಿ ಕಾಯೋಣ ಎಂದಿದ್ದಾರೆ.

ಒಂದು ವೇಳೆ ಗಡಿಯನ್ನು ಮುಚ್ಚಿ ವಾಹನ ಸಂಚಾರ ತಡೆಯದೆ ಹೋದರೆ ಮುಂದಿನ ದಿನಗಳಲ್ಲಿ ಅಪಾಯ ತಪ್ಪಿದಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

English summary
There is an increasing cases of coronavirus in kerala. Despite of this also, the border area of chamarajanagar which connects to kerala is not closed,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X