ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಬಾಲಮಂದಿರದ ಅವ್ಯವಸ್ಥೆ ವಿರುದ್ಧ ದಂಗೆಯೆದ್ದ ಮಕ್ಕಳು

|
Google Oneindia Kannada News

ಚಾಮರಾಜನಗರ, ಫೆಬ್ರವರಿ 22:ಮೂಲಭೂತ ಸೌಲಭ್ಯಗಳಿಲ್ಲದೆ ನಗರದ ಬಾಲಮಂದಿರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಇದರಿಂದ ನೊಂದ ಮಕ್ಕಳು ಬೀದಿಗಿಳಿದು ಪ್ರತಿಭಟನೆ ಮಾಡಿ ಜಿಲ್ಲಾಡಳಿತದ ಗಮನ ಸೆಳೆದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ನ್ಯಾಯಾಲಯದ ಆಸುಪಾಸಿನಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ನಡೆಯುತ್ತಿರುವ ಬಾಲ ಮಂದಿರದಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಇವತ್ತು ಸರಿ ಹೋಗಬಹುದು, ನಾಳೆ ಸರಿಹೋಗಬಹುದು ಎಂದ ಕಾದ ಮಕ್ಕಳು ವ್ಯವಸ್ಥೆ ಸರಿ ಹೋಗದ್ದರಿಂದ ಕೊನೆಗೆ ಅವ್ಯವಸ್ಥೆಯನ್ನು ವಿರೋಧಿಸಿ ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ.

ಚಾಮರಾಜನಗರದಲ್ಲಿ ವಕೀಲರು-ಪೊಲೀಸರ ನಡುವಿನ ತಿಕ್ಕಾಟದಲ್ಲಿ ಬಡವಾದ ಕಕ್ಷಿದಾರರುಚಾಮರಾಜನಗರದಲ್ಲಿ ವಕೀಲರು-ಪೊಲೀಸರ ನಡುವಿನ ತಿಕ್ಕಾಟದಲ್ಲಿ ಬಡವಾದ ಕಕ್ಷಿದಾರರು

ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಬಾಲ ಮಂದಿರದ ಮುಂಭಾಗ ಸುಮಾರು 20 ಮಕ್ಕಳು ಸುಡು ಬಿಸಿಲಿನಲ್ಲಿ ಕುಳಿತು ಬಾಲ ಮಂದಿರದ ಸೂಪರಿಡೆಂಟೆಂಟ್ ಮತ್ತು ಅಡುಗೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಅವ್ಯವಸ್ಥೆ ಏನಿದೆ ಎಂಬುದನ್ನು ಹೊರ ಹಾಕಿದರು.

ಆದರೆ ಮಕ್ಕಳು ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಈ ಕಡೆ ಸೂಪರಿಡೆಂಟೆಂಟ್ ಮತ್ತು ಇನ್ನಿತರ ಸಿಬ್ಬಂದಿ ಬಾರದೆ ತಮಗೂ ಮಕ್ಕಳ ಪ್ರತಿಭಟನೆಗೂ ಯಾವುದೇ ಸಂಬಂಧ ಇಲ್ಲದಂತೆ ಇದ್ದು ಬಿಟ್ಟಿದ್ದರು. ಇದರಿಂದ ಬೇಸತ್ತ ಮಕ್ಕಳು ಜಿಲ್ಲಾಡಳಿತ ಭವನಕ್ಕೆ ಕಾಲ್ನಡಿಗೆಯಲ್ಲೇ ತೆರಳಿ ಪ್ರತಿಭಟನೆ ನಡೆಸಿದರು.ಮುಂದೆ ಓದಿ..

 ಅವ್ಯವಸ್ಥೆ ತಾಂಡವಾಡುತ್ತಿದೆ

ಅವ್ಯವಸ್ಥೆ ತಾಂಡವಾಡುತ್ತಿದೆ

ಜಿಲ್ಲಾ ಕೇಂದ್ರದಲ್ಲಿರುವ ಬಾಲ ಮಂದಿರಕ್ಕೆ ಯಾರೂ ಭೇಟಿ ಕೊಡಲ್ಲ, ಈ ಹಿನ್ನಲೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ, ಸೂಪರಿಡೆಂಟೆಂಟ್ ಮನಸ್ಸೋ ಇಚ್ಚೆಯಂತೆ ಬರುತ್ತಾರೆ ಹೋಗುತ್ತಾರೆ. ಇನ್ನೂ ಅಡಿಗೆಯವರು ಉತ್ತಮ ಗುಣಮಟ್ಟದ ಆಹಾರ ಸಿದ್ದಪಡಿಸೊಲ್ಲ, ಕೇಳಿದರೆ ಮಕ್ಕಳಿಗೆ ಹೆದರಿಸುತ್ತಾರೆ ಅಂತ ಬಾಲ ಮಂದಿರದ ಮಕ್ಕಳು ನಿರ್ಭಯವಾಗಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.

 ಮಕ್ಕಳಿಗೆ ಯಾರೋ ಹೇಳಿ ಕೊಟ್ಟಿದ್ದಾರೆ

ಮಕ್ಕಳಿಗೆ ಯಾರೋ ಹೇಳಿ ಕೊಟ್ಟಿದ್ದಾರೆ

ಚಾಮರಾಜನಗರ ಜಿಲ್ಲಾಡಳಿತ ಮುಂದೆ ಬಾಲ ಮಂದಿರದ ಮಕ್ಕಳು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಹಾಜರಿದ್ದ ಅಡುಗೆಯವರಾದ ಪ್ರೇಮಾ ಮಾತನಾಡಿ, ಬಾಲಮಂದಿರಲ್ಲಿ ಉತ್ತಮವಾದ ವಾತಾವರಣ ಇದೆ, ಅಡುಗೆ ಚೆನ್ನಾಗಿ ಮಾಡಿ ಹಾಕುತ್ತೇವೆ, ಮಕ್ಕಳಿಗೆ ಯಾರೋ ಏನೋ ಹೇಳಿ ಕೊಟ್ಟಿದ್ದಾರೆ. ಅದಕ್ಕೆ ಅವರು ಈ ರೀತಿಯಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ ಅಂದು ಸಮಜಾಯಿಷಿ ನೀಡಿದರು.

ಚಾಮರಾಜನಗರದ ಹೊನ್ನೇಗೌಡನಹುಂಡಿ ಶಾಲೆಗೆ ಇಬ್ಬರೇ ವಿದ್ಯಾರ್ಥಿಗಳು..!ಚಾಮರಾಜನಗರದ ಹೊನ್ನೇಗೌಡನಹುಂಡಿ ಶಾಲೆಗೆ ಇಬ್ಬರೇ ವಿದ್ಯಾರ್ಥಿಗಳು..!

 ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು

ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು

ಬಾಲ ಮಂದಿರದ ಮಕ್ಕಳು ದಿಢೀರ್ ಅಂತ ಜಿಲ್ಲಾಡಳಿತ ಭವನದ ಮುಂದೆ ಬಿಸಿಲನ್ನು ಲೆಕ್ಕಿಸದೆ ಧರಣಿ ಕುಳಿತಿದ್ದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಭೇಟಿ ನೀಡಿ ಮಕ್ಕಳಿಂದ ಬಾಲಮಂದಿರದ ಸಮಸ್ಯೆಗಳನ್ನು ಆಲಿಸಿದರು.

 ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ

ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ ಟಿ.ಎಂ.ಜಯಶೀಲ, ಮಕ್ಕಳ ಅಹವಾಲು ಆಲಿಸಿ, ಬಾಲಮಂದಿರದ ಸಿಬ್ಬಂದಿಗಳ ಕರ್ತವ್ಯ ಲೋಪವಾಗಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು. ಇನ್ನು ಮುಂದೆ ಅಧಿಕಾರಿಗಳು ಬಾಲಮಂದಿರದಲ್ಲಿ ಅವ್ಯವಸ್ಥೆ ಸುವ್ಯವಸ್ಥೆಗೊಳಿಸುವತ್ತ ಗಮನಹರಿಸಬೇಕಾಗಿದೆ.

ಮಹದೇಶ್ವರಬೆಟ್ಟದ ಹಾಡಿ ನಿವಾಸಿಗಳ ಬದುಕು ಅರಣ್ಯ ರೋಧನಮಹದೇಶ್ವರಬೆಟ್ಟದ ಹಾಡಿ ನಿವಾಸಿಗಳ ಬದುಕು ಅರಣ್ಯ ರೋಧನ

English summary
Chaos has increased in Chamrajnagar Bala mandira. On this reason 20 children protested in front of the Bala mandira.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X