ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ಸ್ಥಗಿತಗೊಂಡಿದ್ದ ರಥೋತ್ಸವ ಮತ್ತೆ ನಡೆಯುತ್ತಾ?

|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್ 18: ಹಿಂದಿನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದ್ದ ಜಿಲ್ಲೆಯ ಚಾಮರಾಜೇಶ್ವರ ಸ್ವಾಮಿ ಹಾಗೂ ಬಿಳಿಗಿರಿ ರಂಗನಾಥಸ್ವಾಮಿಯ ಎರಡು ರಥೋತ್ಸವಗಳು ರಥಗಳಿಲ್ಲದೆ ಸ್ಥಗಿತಗೊಂಡಿವೆ. ಇದೀಗ ರಥಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿರುವುದರಿಂದ ಮುಂದಿನ ವರ್ಷ ಮತ್ತೆ ರಥೋತ್ಸವ ನಡೆಯಬಹುದೆಂಬ ನಿರೀಕ್ಷೆ ಜನರದ್ದಾಗಿದೆ.

ಜಿಲ್ಲೆಯ ಭಕ್ತರು ಮಾತ್ರವಲ್ಲದೆ ಹೊರಗಿನ ಸಹಸ್ರಾರು ಭಕ್ತರು ಇದೆರಡು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದರು. ರಥೋತ್ಸವದಲ್ಲಿ ಭಾಗವಹಿಸುವುದೇ ಭಕ್ತರಿಗೆ ಸಂಭ್ರಮದ ಕ್ಷಣವಾಗಿತ್ತು. ಈಗ ರಥೋತ್ಸವ ನಿಂತಿದ್ದು, ಯಾವಾಗ ಆ ಕ್ಷಣ ಬರುವುದು ಎಂಬ ನಿರೀಕ್ಷೆಯಲ್ಲಿದ್ದಾರೆ ಜನ.

 ಜಿಲ್ಲೆಯಲ್ಲಿ ಎರಡೂ ರಥೋತ್ಸವ ನಡೆದಿಲ್ಲ

ಜಿಲ್ಲೆಯಲ್ಲಿ ಎರಡೂ ರಥೋತ್ಸವ ನಡೆದಿಲ್ಲ

ಚಾಮರಾಜೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಪ್ರತಿ ವರ್ಷದ ಆಷಾಢದಲ್ಲಿ ನಡೆಯುತ್ತಿತ್ತು. ಆದರೆ ರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹೋದ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿಲ್ಲ. ಇನ್ನು ರಥ ಶಿಥಿಲಗೊಂಡ ಕಾರಣದಿಂದ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತಿದ್ದ ರಥೋತ್ಸವ ಸ್ಥಗಿತಗೊಂಡಿದೆ.

ಚಾಮರಾಜೇಶ್ವರ ರಥಕ್ಕೆ ಬೆಂಕಿ, ಫೆ.20ರಂದು ಚಾಮರಾಜನಗರ ಬಂದ್ಚಾಮರಾಜೇಶ್ವರ ರಥಕ್ಕೆ ಬೆಂಕಿ, ಫೆ.20ರಂದು ಚಾಮರಾಜನಗರ ಬಂದ್

ಇವೆಡೂರಡು ರಥಗಳು ಮತ್ತೆ ಸಿದ್ಧಗೊಂಡು ಯಾವಾಗ ರಥೋತ್ಸವ ಆರಂಭವಾಗುತ್ತದೆಯೋ ಎಂದು ಭಕ್ತರು ಕಾಯುತ್ತಿದ್ದಾರೆ. ಪ್ರತಿವರ್ಷ ನಡೆಯುತ್ತಿದ್ದ ರಥೋತ್ಸವದ ಸವಿ ಕ್ಷಣಗಳನ್ನು ಮೆಲುಕು ಹಾಕುತ್ತಿರುವ ಜನ ಆದಷ್ಟು ಬೇಗ ರಥಗಳು ಸಿದ್ಧಗೊಂಡು ರಥೋತ್ಸವಗಳು ನಡೆಯಲಿ ಎಂದು ಆಶಿಸುತ್ತಿದ್ದಾರೆ. ಆದರೆ ಎಲ್ಲವೂ ಸರಿ ಹೋದರೆ ಮುಂದಿನ ವರ್ಷ ಎರಡು ರಥೋತ್ಸವಗಳು ನಡೆಯುವ ಆಶಯ ಜನರಲ್ಲಿದೆ.

 ಪಿಡಬ್ಲ್ಯೂಡಿ ಇಲಾಖೆಗೆ ನಿರ್ಮಾಣದ ಹೊಣೆ

ಪಿಡಬ್ಲ್ಯೂಡಿ ಇಲಾಖೆಗೆ ನಿರ್ಮಾಣದ ಹೊಣೆ

ರಥದ ನಿರ್ಮಾಣ ಮಾಡಿ ರಥೋತ್ಸವಕ್ಕೆ ಅವಕಾಶ ಮಾಡಿಕೊಡಬೇಕೆಂಬ ಒತ್ತಾಯಗಳು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕೇಳಿ ಬರುತ್ತಲೇ ಇದೆ. ಈ ಒತ್ತಡಗಳಿಗೆ ಮಣಿದ ಜಿಲ್ಲಾಡಳಿತ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥ ನಿರ್ಮಾಣಕ್ಕೆ ಮುಂದಾಗಿ ಲೋಕೋಪಯೋಗಿ ಇಲಾಖೆಗೆ ನಿರ್ಮಾಣ ಕಾಮಗಾರಿ ಹೊಣೆಯನ್ನು ವಹಿಸಿದೆ.

ಈ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥವನ್ನು 96 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥವನ್ನು 99 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಟೆಂಡರ್ ಕರೆಯಲಾಗಿತ್ತು. ಬೆಂಗಳೂರಿನ ರಥಶಿಲ್ಪಿ ಬಿ.ಎಸ್.ಬಡಿಗೇರ ಅಂಡ್ ಸನ್ಸ್ ಅವರಿಗೆ ಬ್ರಹ್ಮರಥ ನಿರ್ಮಾಣ ಕಾಮಗಾರಿಯನ್ನು ನಿರ್ಮಿಸಿಕೊಡುವಂತೆ ಕಾರ್ಯಾದೇಶ ನೀಡಿರುವುದು ಹೊಸ ಬೆಳವಣಿಗೆಯಾಗಿದೆ.

 ಹದಿನಾರು ಅಡಿ ಎತ್ತರದ ರಥ ನಿರ್ಮಾಣ

ಹದಿನಾರು ಅಡಿ ಎತ್ತರದ ರಥ ನಿರ್ಮಾಣ

ಪ್ರಧಾನ ಶಿಲ್ಪಿ ಬಿ.ಎಸ್.ಬಡಿಗೇರ ಹಾಗೂ ಇತರೆ ಮುಖ್ಯ ಶಿಲ್ಪಿ ಶಿವಕುಮಾರ ಬಡಿಗೇರ, ಎಚರೇಶ ಬಡಿಗೇರ ಅವರ ನೇತೃತ್ವದಲ್ಲಿ 10 ರಿಂದ 13 ಶಿಲ್ಪಿಗಳು ರಥದ ನಿರ್ಮಾಣ, ಕೆತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ರಥಗಳ ಪೈಕಿ ಬಿಳಿಗಿರಿರಂಗನಾಥಸ್ವಾಮಿ ರಥವು 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 29 ಫ್ರೇಮ್ ಗಳು ಇರಲಿವೆ. ಈ 29 ಫ್ರೇಮ್ ಗಳ ಕೆಲಸವೂ ಪೂರ್ಣಗೊಂಡಿದೆ. ಇದಲ್ಲದೆ ಚಾಮರಾಜೇಶ್ವರ ಬ್ರಹ್ಮರಥವು 16 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದ್ದು, 26 ಫ್ರೇಮ್ ಗಳು ಇರಲಿವೆ. ಈ ಪೈಕಿ 20 ಫ್ರೇಮ್ ಗಳು ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಫ್ರೇಮ್ ‌ಗಳ ಕೆಲಸ ನಡೆಯುತ್ತಿದೆ.

ಚಾಮರಾಜನಗರದ ಆಷಾಢದ ಏಕೈಕ ರಥೋತ್ಸವ ಇಲ್ಲ

ಇನ್ನು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥ ಹಾಗೂ ಚಾಮರಾಜೇಶ್ವರ ಬ್ರಹ್ಮ ರಥಕ್ಕಾಗಿ ಟೀಕ್ ಮರವನ್ನು ಕಾರವಾರ ಜಿಲ್ಲೆಯ ಕಿರವತ್ತು ಸರ್ಕಾರಿ ಮರಮುಟ್ಟು ಸಂಗ್ರಹಾಲಯದಿಂದ ಖರೀದಿಸಲಾಗಿದೆ. ಬಿ.ಎಸ್.ಬಡಿಗೇರ ಅವರ ಬೆಂಗಳೂರಿನಲ್ಲಿರುವ ಕಾರ್ಯಾಗಾರಕ್ಕೆ ಇವನ್ನು ಸಾಗಿಸಲಾಗಿದ್ದು, ಅಲ್ಲಿಯೇ ರಥದ ನಿರ್ಮಾಣ ಕೆಲಸ ನಡೆಸಲಾಗುತ್ತಿದೆ.

Recommended Video

ಶಾಲೆಗಳಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ | Oneindia Kannada
 ದೇವತೆಗಳ ವಿಗ್ರಹ, ಕುಸರಿ ಕೆತ್ತನೆ

ದೇವತೆಗಳ ವಿಗ್ರಹ, ಕುಸರಿ ಕೆತ್ತನೆ

ಪುರಾಣದಲ್ಲಿ ಬರುವ ದೇವಾನುದೇವತೆಗಳ ವಿಗ್ರಹ ಇತರೆ ಕುಸರಿ ಕೆತ್ತನೆಗಳನ್ನು ರಥದಲ್ಲಿ ಮಾಡಲಾಗುತ್ತದೆ. ಇದಕ್ಕೂ ಮೊದಲು ದೇವಾಲಯದ ಆಗಮಿಕರ ಸೂಕ್ತ ಸಲಹೆ ಪಡೆಯುವಂತೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಏಪ್ರಿಲ್ ಅಥವಾ ಮೇನಲ್ಲಿ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಆಷಾಢ ಮಾಸದಲ್ಲಿ ಚಾಮರಾಜೇಶ್ವರ ರಥೋತ್ಸವಕ್ಕೆ ರಥಗಳು ಸಿದ್ಧವಾಗಲಿವೆ. ಮತ್ತೆ ಜಿಲ್ಲೆಯಲ್ಲಿ ರಥೋತ್ಸವದ ಸಡಗರ ಸಂಭ್ರಮ ಮರುಕಳಿಸುವ ಸಾಧ್ಯತೆಯಿದೆ.

English summary
Chamarajeshwara Swamy and Bili ranganathaswamy ratotsava have been stopped without chariots. Now the chariot work is going through, people are expecting a chariot festival again next year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X