ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಸಾದದಲ್ಲಿ ವಿಷ: ತಮಿಳುನಾಡಿನ ಕಾಳಪ್ಪನ ಮೇಲೆ ಅನುಮಾನ

|
Google Oneindia Kannada News

Recommended Video

Chamarajanagar temple tragedy : ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!

ಚಾಮರಾಜನಗರ, ಡಿಸೆಂಬರ್ 15: ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿರುವ ಅನುಮಾನ ವ್ಯಕ್ತವಾಗಿದ್ದು, ಬಹುತೇಕರು ಈ ಕೃತ್ಯಕ್ಕೆ ತಮಿಳುನಾಡಿನ ಕಾಳಪ್ಪನೇ ಕಾರಣ ಎಂಬ ಅನುಮಾನಿಸುತ್ತಿದ್ದಾರೆ.

ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!

ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಾಲಯದ ವಿಷಪೂರಿತ ಪ್ರಸಾದ ಸೇವಿಸಿ 11 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯಲು ದ್ವೇಷವೇ ಕಾರಣ ಎನ್ನಲಾಗುತ್ತಿದೆ.

ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!

ತಮಿಳುನಾಡು ಮೂಲದ ಕಾಳಪ್ಪ ಎಂಬುವರು ಮಾರಮ್ಮ ದೇವಾಲಯವನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಕೆಲವು ದಿನಗಳ ಹಿಂದಷ್ಟೆ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರ ಬಳಿ ಗಲಾಟೆ ಮಾಡಿದ್ದರು. ಈತ ಬ್ರಹ್ಮೇಶ್ವರಿ ದೇವಾಲಯಕ್ಕೆ ಸಂಬಂಧಪಟ್ಟವನಾಗಿದ್ದಾನೆ.

Chamarajanagar temple food poison all eyes in Tamilnadus Kalappa

ಅದೇ ವ್ಯಕ್ತಿಯೇ ಈಗ ಪ್ರಸಾದದಲ್ಲಿ ವಿಷ ಬೆರೆಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾರಮ್ಮ ದೇವಾಲಯದ ವಿವಾದ ನ್ಯಾಯಾದಲ್ಲಿದ್ದು ಇತ್ತೀಚೆಗಷ್ಟೆ ತೀರ್ಪು ಕಾಳಪ್ಪನ ವಿರುದ್ಧವಾಗಿ ಬಂದಿತ್ತು.

ದೇಗುಲದ ಪ್ರಸಾದವೇ ವಿಷವಾಗಿ... ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯ ಬಂದ್ ದೇಗುಲದ ಪ್ರಸಾದವೇ ವಿಷವಾಗಿ... ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯ ಬಂದ್

ಮಾರಮ್ಮ ದೇವಾಲಯದಲ್ಲಿ ನಾಲ್ಕು ಸಿಸಿಟಿವಿಗಳಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ದೇವಾಲಯಕ್ಕೆ ಇಂದು ಗುಪ್ತಚರ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಬೆಳಿಗ್ಗಿನಿಂದಲೂ ದೇವಾಲಯದ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಪಡೆಯುತ್ತಿದ್ದಾರೆ.

English summary
Chamarajanagar's Sulavadi Maramma temple food poison took 11 peoples life. Local people poiting fingure to Tamilnadu based Kalappa who was in dispute with Maramma Temple adminstration. people saying that Kalappa may poisoned the food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X