ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ; ಕೋವಿಡ್‌ಗೆ ಸ್ನೇಹಿತ ಬಲಿ, ವಿಧವೆ ಬಾಳಿಗೆ ಆಸರೆಯಾದ ಯುವಕ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಫೆಬ್ರವರಿ 08; ಕೊರೊನಾದಿಂದ ಪತಿಯನ್ನು ಕಳೆದುಕೊಂಡು ವಿಧವೆಯಾಗಿ ಬದುಕೇ ಮುಗಿದು ಹೋಯಿತೆಂಬ ನೋವಿನಲ್ಲಿ ಖಿನ್ನತೆಗೆ ಒಳಗಾಗಿದ್ದ ಗೆಳೆಯನ ಪತ್ನಿಯ ಸ್ಥಿತಿಯನ್ನು ನೋಡಿದ ಯುವಕ ಆಕೆಯನ್ನು ಪನರ್ ವಿವಾಹವಾಗುವುದರ ಮೂಲಕ ಬಾಳು ನೀಡಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್ (36) ಎಂಬಾತನೇ ವಿಧವೆಯಾಗಿದ್ದ ಗೆಳೆಯನ ಪತ್ನಿಯನ್ನು ಪುನರ್ ವಿವಾಹವಾಗಿ ಬಾಳು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾದ ಯುವಕ. ಇದೀಗ ಈ ಯುವಕನ ತೀರ್ಮಾನ ಎಲ್ಲರ ಗಮನಸೆಳೆದಿದೆ.

 ಚಾಮರಾಜನಗರ: ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು ಚಾಮರಾಜನಗರ: ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು

ಇಷ್ಟಕ್ಕೂ ಆಗಿದ್ದು ಏನು ಎಂಬುದನ್ನು ನೋಡಿದ್ದೇ ಆದರೆ ಕೊರೊನಾದಿಂದಾಗಿ ಹಲವು ಮನೆಗಳ ದೀಪ ಆರಿದೆ. ಹಲವು ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗಿದ್ದಾರೆ. ಗಂಡನೇ ಆಸರೆಯಾಗಿದ್ದ ಬಹಳಷ್ಟು ಹೆಣ್ಣು ಮಕ್ಕಳು ಇದೀಗ ಗಂಡನನ್ನು ಕಳೆದುಕೊಂಡು ತಮ್ಮ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ವಿಡಿಯೋ; ವಿವಾಹ ವಯಸ್ಸು 21ಕ್ಕೆ ಏರಿಕೆ, ಸ್ವರ್ಣವಲ್ಲಿ ಶ್ರೀ ವಿರೋಧ ವಿಡಿಯೋ; ವಿವಾಹ ವಯಸ್ಸು 21ಕ್ಕೆ ಏರಿಕೆ, ಸ್ವರ್ಣವಲ್ಲಿ ಶ್ರೀ ವಿರೋಧ

Chamarajanagar Man Married Friend Wife After His Death Due To Covid

ಇದೀಗ ಪುನರ್ ವಿವಾಹವಾದ ಅಂಬಿಕಾ (30) ಕೂಡ ತನ್ನ ಪತಿಯ ಅಕಾಲಿಕ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದರು. ಗಂಡನಿಲ್ಲದೆ ಮಗನನ್ನು ಹೇಗೆ ಸಾಕಿ ಸಲಹುವುದು? ಎಂಬ ಚಿಂತೆಗೆ ಒಳಗಾಗಿದ್ದರು. ಹಾಗೆ ನೋಡಿದರೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಚೇತನ್‌ಕುಮಾರ್ (41) ಹಾಗೂ ಹನೂರು ಪಟ್ಟಣದ ಅಂಬಿಕಾ (30) ಅವರು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಚೇತನ್‌ ಕುಮಾರ್ ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರಿಂದ ಪತ್ನಿಯೊಂದಿಗೆ ಬೆಂಗಳೂರಿನಲ್ಲೇ ನೆಲೆಸಿದ್ದರು. ಈ ದಂಪತಿಗೆ ಏಳು ವರ್ಷದ ಪುತ್ರನೂ ಇದ್ದಾನೆ.

 2020ರಲ್ಲಿ ಕರ್ನಾಟಕದಲ್ಲಿ ನಡೆದಿದೆ ಅತಿ ಹೆಚ್ಚು ಬಾಲ್ಯ ವಿವಾಹ 2020ರಲ್ಲಿ ಕರ್ನಾಟಕದಲ್ಲಿ ನಡೆದಿದೆ ಅತಿ ಹೆಚ್ಚು ಬಾಲ್ಯ ವಿವಾಹ

ಕೊರೊನಾ ಸಮಯದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ಕರಿನೆರಳು ಸುಖಮಯವಾಗಿದ್ದ ಅವರ ಕುಟುಂಬದ ಮೇಲೆ ಬಿದ್ದಿತು. ಪರಿಣಾಮ ಚೇತನ್‌ ಕುಮಾರ್‌ಗೆ ಕೋವಿಡ್ ಸೋಂಕು ತಗುಲಿತು. ಹೀಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳ ಕಾಲ ಚಿಕಿತ್ಸೆ ಪಡೆದರೂ, ಚಿಕಿತ್ಸೆ ಫಲಕಾರಿಯಾಗದ ಚೇತನ್ ಕುಮಾರ್ ಮೃತಪಟ್ಟಿದ್ದರು.

ಚೇತನ್ ಕುಮಾರ್ ಮೃತಪಡುತ್ತಿದ್ದಂತೆಯೇ ಪತ್ನಿ ಅಂಬಿಕಾ ಕಂಗಾಲಾಗಿ ಹೋದರು ಮುಂದಿನ ಜೀವನವೇ ಅವರಿಗೆ ಸಾಕೆನಿಸಿತ್ತು. ಹೀಗಾಗಿ ಗಂಡನ ನೆನಪಲ್ಲಿಯೇ ಕಾಲ ಕಳೆಯಲಾರಂಭಿಸಿದರಲ್ಲದೆ, ಖಿನ್ನತೆಗೆ ಒಳಗಾಗಿ ಬದುಕೇ ಮುಗಿದು ಹೋಯಿತು ಎಂಬ ಭಾವನೆಯಿಂದ ಆತ್ಮಹತ್ಯೆ ಆಲೋಚನೆ ಮಾಡಿದ್ದರು ಎನ್ನಲಾಗಿದೆ.

ಬಾಳಿಗೆ ಆಸರೆಯಾಗುವ ತೀರ್ಮಾನ; ಈ ನಡುವೆ ಮೃತ ಚೇತನ್ ಕುಮಾರ್ ಗೆಳೆಯ ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಎಂ. ಲೋಕೇಶ್‌ ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಕಳೆದ ಹದಿಮೂರು ವರ್ಷಗಳಿಂದ ಚೇತನ್ ಕುಮಾರ್‌ ಗೆಳೆತನ ಹೊಂದಿದ್ದರು. ಅಷ್ಟೇ ಅಲ್ಲದೆ, ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಹಾಸ್ಟೆಲ್‌ನಲ್ಲಿ ಜೊತೆಯಾಗಿ ವ್ಯಾಸಂಗ ಮಾಡಿದ್ದರು. ಹೀಗಾಗಿ ಚೇತನ್ ಕುಮಾರ್ ಮೃತನಾದ ನಂತರ ಅವರ ಕುಟುಂಬದ ಬಗ್ಗೆಯೂ ಹತ್ತಿರದಿಂದ ತಿಳಿದುಕೊಂಡಿದ್ದರು. ಜತೆಗೆ ಸಂಕಷ್ಟದಲ್ಲಿರುವ ಅಂಬಿಕಾಳ ಕುಟುಂಬಕ್ಕೆ ಆಸರೆಯಾಗುವ ತೀರ್ಮಾನ ಮಾಡಿ ಅದರಂತೆ ಅವರನ್ನು ವಿವಾಹವಾಗುವ ನಿರ್ಧಾರ ಮಾಡಿದ್ದಾರೆ.

ಈ ವಿಚಾರವನ್ನು ಅಂಬಿಕಾಳ ಪೋಷಕರ ಬಳಿ ಹಾಗೂ ಚೇತನ್‌ ಕುಮಾರ್ ತಂದೆ ತಾಯಿಯ ಬಳಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಎರಡೂ ಕುಟುಂಬಗಳು ಒಪ್ಪಿವೆ. ನಂತರ ಅಂಬಿಕಾ ಅವರಿಗೆ ತಿಳಿಸಿದ್ದಾರೆ. ಆದರೆ ಪತಿಯ ಸಾವಿನ ನೋವಿನಿಂದ ಹೊರಬಾರದ ಅಂಬಿಕಾ, ಆರಂಭದಲ್ಲಿ ಇದಕ್ಕೆ ಸಮ್ಮತಿಸಲಿಲ್ಲ. ಹಲವು ತಿಂಗಳ ಬಳಿಕ ತಂದೆ ತಾಯಿ, ಅತ್ತೆ ಮಾವ ಅವರ ಮನವೊಲಿಕೆಯ ಮೇರೆಗೆ ಅಂಬಿಕಾ ಮದುವೆಗೆ ಒಪ್ಪಿದ್ದಾರೆ.

ಸಪ್ತಪದಿ ತುಳಿದ ಅಂಬಿಕಾ-ಲೋಕೇಶ್; ಅದರಂತೆ ಜನವರಿ 27 ರಂದು ಬೆಂಗಳೂರಿನ ಕೆ. ಜಿ. ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಅಂಬಿಕಾರನ್ನು ಲೋಕೇಶ್ ಪುನರ್ ವಿವಾಹ ವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವುದರೊಂದಿಗೆ ವಿಧವೆಯ ಬದುಕಿನಲ್ಲಿ ಆಶಾಕಿರಣ ಮೂಡಿಸಿದ್ದಾರೆ.

ವಿವಾಹದ ವೇಳೆ ಸರ್ಪಭೂಷಣ ಶಿವಯೋಗಿ ಮಠದ ಮಲ್ಲಿಕಾರ್ಜುನಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಹಂಸಭಾವಿಯ ಸಿದ್ಧಲಿಂಗಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಶಿಕಾರಿಪುರದ ಬಸವಲಿಂಗಸ್ವಾಮೀಜಿ, ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಪರಮಶಿವಯ್ಯ ಮೊದಲಾದವರು ಉಪಸ್ಥಿತರಿದ್ದು, ನೂತನ ವಧು-ವರರಿಗೆ ಆಶೀರ್ವದಿಸಿದ್ದಾರೆ.

Recommended Video

ಪಾಕಿಸ್ತಾನ ಶಿಕ್ಷಣ ಹೋರಾಟಗಾರ್ತಿ Malala Yousafzai Hijab ಬಗ್ಗೆ ಪ್ರತಿಕ್ರಿಯೆ | Oneindia Kannada

English summary
Chamarajanagar taluk Lokesh married his friend Chetan Kumar wife Ambika. Chetan Kumar died due to Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X