ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪವಾಡ ಪುರುಷ ಮಲೆ ಮಹದೇಶ್ವರನೀಗ ಕೋಟ್ಯಧಿಪತಿ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

Recommended Video

ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಈಗ ಕೋಟ್ಯಾಧಿಪತಿ | Oneindia Kannada

ಚಾಮರಾಜನಗರ, ಜುಲೈ 27: ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಹುಂಡಿಗೆ ಬೀಳುತ್ತಿರುವ ಕಾಣಿಕೆ ಕೋಟಿಯನ್ನು ತಲುಪುತ್ತಿದೆ! ಇತ್ತೀಚೆಗೆ ಪ್ರತಿ ತಿಂಗಳು ಎಣಿಕೆ ನಡೆಸಿದಾಗಲೂ ಕೋಟಿಯನ್ನು ದಾಟುತ್ತಿದ್ದು, ಇದು ಭಕ್ತರು ಮಹದೇಶ್ವರನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಏರಿಕೆಯಾಗುತ್ತಿರುವ ಭಕ್ತರ ಸಂಖ್ಯೆಗೆ ಸಾಕ್ಷಿಯಾಗಿದೆ.

ಇದೀಗ ಎಣಿಕೆ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ ಒಂದು ಕೋಟಿ ಮೂವತ್ತೈದು ಸಾವಿರದ ನಾನೂರ ತೊಂಬತೊಂಬತ್ತು(1,00,35,449/-) ರೂಪಾಯಿಗಳು ಕಾಣಿಕೆ ರೂಪದಲ್ಲಿ ಹುಂಡಿಗೆ ಬಿದ್ದಿರುವುದು ಕಂಡು ಬಂದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಜುಲೈ ತಿಂಗಳಲ್ಲಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸಿ ಮಹದೇಶ್ವರ ದರ್ಶನ ಪಡೆದಿದ್ದರು.

ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಒಂದೇ ತಿಂಗಳಲ್ಲಿ 1.08 ಕೋಟಿ ಸಂಗ್ರಹಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಒಂದೇ ತಿಂಗಳಲ್ಲಿ 1.08 ಕೋಟಿ ಸಂಗ್ರಹ

ಈ ಹಣದೊಂದಿಗೆ 36 ಗ್ರಾಂ ಚಿನ್ನ ಹಾಗೂ 680 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ.

Chamarajanagar: Male Mahadeswara is Crorepati now!

ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ಸುಮಾರು 10 ಗಂಟೆಗಳ ಕಾಲ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಏಣಿಕೆ ಮಾಡಲಾಗಿದೆ. ಇದರ ನೇತೃತ್ವವನ್ನು ಮಲೆ ಮಹದೇಶ್ವರ ದೇವಸ್ಥಾನಗಳ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪ ವಹಿಸಿದ್ದರು.

ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿ, ಪ್ರಾಧಿಕಾರದ ಸದಸ್ಯರಾದ ಕೊಪ್ಪಳಿ ಮಹದೇವನಾಯಕ, ಡಿ. ದೇವರಾಜು, ಬಿ. ಮಹದೇವಪ್ಪ, ಜವರೇಗೌಡರು ಪ್ರಾಧಿಕಾರದ ಉಪ ಕಾರ್ಯದರ್ಶಿಗಳಾದ ಎಂ.ಬಸವರಾಜು, ರಾಜಶೇಖರಮೂರ್ತಿ, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಕಚೇರಿಯ ಅಧೀಕ್ಷಕ ಬಿ.ಮದರಾಜು, ಆರೋಗ್ಯ ನಿರೀಕ್ಷಕರಾದ ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ನೌಕರರು, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ ಆರಕ್ಷಕ ಸಿಬ್ಬಂದಿ, ಎಸ್ಬಿಐ ವ್ಯವಸ್ಥಾಪಕರಾದ ಸೆಂದಿಲ್ ನಾಥನ್ ಮತ್ತು ಸಿಬ್ಬಂದಿ ಇದ್ದರು.

English summary
Money offered by devotees in Male mahadeshwara betta in Chamarajanagar district crossed crore rupees these day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X