ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಕರ್ತವ್ಯ ಲೋಪದಿಂದಾಗಿ ಸಿಪಿಐ, ಪಿಎಸ್ಐ ಅಮಾನತು

|
Google Oneindia Kannada News

ಚಾಮರಾಜನಗರ, ಜೂನ್ 12: ಅಪಘಾತ ಪ್ರಕರಣವೊಂದರಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇರೆಗೆ ಚಾಮರಾಜನಗರ ಗ್ರಾಮಾಂತರ ಸರ್ಕಲ್ ಇನ್ಸ್​ಪೆಕ್ಟರ್​​​​, ಪೂರ್ವ ಪೊಲೀಸ್ ಠಾಣೆಯ ಸಬ್​​ ಇನ್ಸ್ ​​ಪೆಕ್ಟರ್ ಹಾಗೂ ಹೆಡ್ ಕಾನ್ಸ್​ಟೆಬಲ್ ಅವರನ್ನು ಅಮಾನತು ಮಾಡಿ ದಕ್ಷಿಣ ವಲಯ ಐಜಿಪಿ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

Recommended Video

Indian stands 4th in the world in corona cases count | Oneindia Kannada

ಚಾಮರಾಜನಗರ ಗ್ರಾಮಾಂತರ ಸರ್ಕಲ್ ಇನ್ಸ್​ಪೆಕ್ಟರ್​​​​ ಕೆ.ಎಂ ಮಂಜು, ಪೂರ್ವ ಪೊಲೀಸ್ ಠಾಣೆ ಸಬ್​​ ಇನ್ಸ್​​ಪೆಕ್ಟರ್ ಎಸ್.ಪಿ ಸುನೀಲ್ ಹಾಗೂ ಹೆಡ್ ಕಾನ್ಸ್​ಟೆಬಲ್ ನಾಗ ನಾಯಕ ಎಂಬುವವರೇ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.

ಕೊರೊನಾ ಸೋಂಕಿತ ಚಾಮರಾಜನಗರ ಜಿಲ್ಲೆಯ ನಿವಾಸಿಯಲ್ಲ!ಕೊರೊನಾ ಸೋಂಕಿತ ಚಾಮರಾಜನಗರ ಜಿಲ್ಲೆಯ ನಿವಾಸಿಯಲ್ಲ!

ಕಳೆದ ಮೇ, 15 ರಂದು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್​ವೊಂದು ಚಾಮರಾಜನಗರ ತಾಲೂಕಿನ ಮಾದಾಪುರದ ಬಳಿ ನಿಂತಿತ್ತು. ವಿಷಯ ತಿಳಿದ ಸರ್ಕಲ್ ಇನ್ಸ್​ಪೆಕ್ಟರ್​​ ಮಂಜು ತಮ್ಮ ಜೀಪಿನಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸ್ ಜೀಪ್ ನೋಡಿದ ಚಾಲಕ ಟಿಪ್ಪರ್​​ನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದನು.

Chamarajanagar: CPI, PSI Suspended For Negligence In Duty

ಆದರೆ ಅಕ್ರಮ ಮರಳು ಸಾಗಾಣಿಕೆ ಪ್ರಕರಣವನ್ನು ಮುಚ್ಚಿಹಾಕಲು ಟಿಪ್ಪರ್​​ನಲ್ಲಿದ್ದ ಮರಳನ್ನು ರಸ್ತೆ ಬದಿ ಸುರಿದು ಎಂ ಸ್ಯಾಂಡ್ ಸಾಗಾಣಿಕೆಯಾಗುತ್ತಿತ್ತು ಎಂದು ಎಫ್‌ಐಆರ್ ದಾಖಲಿಸಲಾಗಿತ್ತು.

ಪೊಲೀಸರು ಯಾರಿಗೋ ಸಹಾಯ ಮಾಡಲು ತನಿಖೆಯನ್ನು ಸರಿಯಾಗಿ ಮಾಡದೆ ಕರ್ತವ್ಯ ಲೋಪ ಎಸಗಿದ್ದರು. ಈ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದಿದ್ದವು ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಿ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ವಿಫುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.]

English summary
The South Zone IGP has on Thursday issued an order suspending of Chamarajanagar Rural CPI, PSI of Eastern Police Station and Head Constable, on charges of breach of duty in an accident case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X