ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಆಮ್ಲಜನಕ ಕೊರತೆಯಿಂದ 22 ಕೊರೊನಾ ಸೋಂಕಿತರು ಮೃತ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಮೇ 3: ಗಡಿ ಜಿಲ್ಲೆ ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಆಮ್ಲಜನಕ ಸಿಲಿಂಡರ್ ಖಾಲಿಯಾಗಿ 22 ಜನ ಕೊರೊನಾ ರೋಗಿಗಳು ಮೃತಪಟ್ಟ ಘಟನೆ ವರದಿಯಾಗಿದೆ.

ಭಾನುವಾರ ಮಧ್ಯರಾತ್ರಿ ಆಮ್ಲಜನಕ ಸಿಲಿಂಡರ ಖಾಲಿಯಾಯಿತು. ರಾತ್ರಿ 9 ಗಂಟೆಗೆ ಮೈಸೂರಿನಿಂದ ಸಿಲಿಂಡರ್‌ಗಳು ಬರಬೇಕಿತ್ತು. ಆದರೆ ಮೈಸೂರಿಂದ ಆಕ್ಷಿಜನ್ ಬರಲೇ ಇಲ್ಲ. ಆದ್ದರಿಂದ ವೆಂಟಿಲೇಟರ್‌ ಚಿಕಿತ್ಸೆ ಪಡೆಯುತಿದ್ದ 22 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 Chamarajanagar: 12 Covid-19 Patients Died Due To Oxygen Shortage

ನಂತರ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರಿಗೆ ಈ ವಿಷಯ ತಿಳಿದು ಮೈಸೂರು ಜಿಲ್ಲಾಸ್ಪತ್ರೆಯಿಂದ ಕೂಡಲೇ 50 ಆಕ್ಷಿಜನ್ ಸಿಲಿಂಡರ್‌ ಗಳನ್ನು ಕಳಿಸಿಕೊಟ್ಟಿದ್ದಾರೆ.

Recommended Video

#Covid19Updates, Karnataka: ರಾಜ್ಯದಲ್ಲಿ ಇಂದು 37733 ಜನರಿಗೆ ಸೋಂಕು | Oneindia Kannada

ಚಾಮರಾಜನಗರ ಆಸ್ಪತ್ರೆಯಲ್ಲಿ ಕಳೆದ ವಾರವಷ್ಟೆ 6000 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕವನ್ನು ಸ್ಥಾಪಿಸಲಾಗಿದ್ದು, ಇದು ಒಮ್ಮೆ ಭರ್ತಿ ಮಾಡಿದರೆ 36 ಗಂಟೆಗಳಷ್ಟು ಮಾತ್ರ ಬಳಸಬಹುದಾಗಿದೆ. ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್‌ಗಳಿದ್ದು, 53 ಐಸಿಯು ಹಾಗೂ 55 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಬಹುತೇಕ ಎಲ್ಲವೂ ಭರ್ತಿಯಾಗಿವೆ.

English summary
12 Covid-19 patients died due to oxygen shortage on Sunday night at the District Covid Hospital in Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X