ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಡ್ಡ ಮತದಾನಕ್ಕೆ ಸಿದ್ದರಾಮಯ್ಯ ಪ್ರಚೋದನೆ: ನಾರಾಯಣಸ್ವಾಮಿ ಛಲವಾದಿ ಕಿಡಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂ10: ಆತ್ಮಸಾಕ್ಷಿ ಮತದಾನ ಎಂದ್ರೆ ಅಡ್ಡ ಮತದಾನ ಮಾಡಿಸೋದಾ ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಆತ್ಮಸಾಕ್ಷಿ ಮತದಾನ ಎಂದು ಸಿದ್ದರಾಮಯ್ಯ ಅಡ್ಡಮತದಾನ ಮಾಡಲು ಪ್ರಚೋದನೆ ನೀಡಿದ್ದಾರೆ. ಹಿಂದೆ ಅವರದ್ದೇ ಶಾಸಕರು ಬೇರೆ‌ ಪಕ್ಷಕ್ಕೆ ಮತ ಹಾಕಿದಾಗ ಇವರೇನು ಮಾಡಿದರು, ಸ್ಪೀಕರ್ ಬಳಸಿಕೊಂಡು ಆ ಶಾಸಕರ ಸದಸ್ಯತ್ವವನ್ನೇ ರದ್ದುಗೊಳಿಸಿದರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಶಾಸಕರನ್ನು ಹೊಗಳಿದ ಸೋಮಣ್ಣ; ವೇದಿಕೆಯಲ್ಲಿ ಇತರ ಬಿಜೆಪಿಗರಿಗೆ ಸುಸ್ತೋಸುಸ್ತುಕಾಂಗ್ರೆಸ್ ಶಾಸಕರನ್ನು ಹೊಗಳಿದ ಸೋಮಣ್ಣ; ವೇದಿಕೆಯಲ್ಲಿ ಇತರ ಬಿಜೆಪಿಗರಿಗೆ ಸುಸ್ತೋಸುಸ್ತು

ಅವರೊಂದು ರೀತಿಯಲ್ಲಿ ಎರಡು ತಲೆ ಹಾವಿದ್ದಂತೆ ಎಂಬ ಶ್ರೀರಾಮುಲು ಹೇಳಿಕೆ ಸತ್ಯ. ಸಿದ್ದರಾಮಯ್ಯ ಅವರ ದ್ವಂದ್ವ ನೀತಿ ಹಾಸ್ಯಾಸ್ಪದವಾಗಿದೆ, ಜನರು‌ ನಗುವ ಪರಿಸ್ಥಿತಿಯನ್ನು ತಾವೇ ತಂದುಕೊಂಡಿದ್ದಾರೆ, ಬಿಜೆಪಿಯವರನ್ನು ಸೀಳುನಾಯಿಗಳಿಗೆ ಹೋಲಿಸಿ ಮಾತನಾಡುವುದು ಅವರಿಗೆ ಶೋಭೆಯಲ್ಲ, ಅಧಿಕಾರ ಕಳೆದುಕೊಂಡು ಹೀಗೆ ಮಾತನಾಡುತ್ತಿದ್ದಾರಾ ಎಂದು ಸಿದ್ದರಾಮಯ್ಯ ಹೇಳಿಕೆಗಳಿಗೆ ಅಸಮಾಧಾನ ಹೊರ ಹಾಕಿದರು. ಇದೇ ವೇಳೆ, ಕೋಮುವಾದಿ ಬಿಜೆಪಿಯನ್ನು ಹೊರಗಿಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಜಾತ್ಯತೀತ ಎಂದು ಹೇಳಿಕೊಂಡು ಜಾತಿ ಮಾಡುತ್ತಿದ್ದಾರೆ. ನಿಜವಾದ ಕೋಮುವಾದಿ ಅವರೇ ಹೊರತು ಇನ್ಯಾರು ಅಲ್ಲ, ಜಾತ್ಯಾತೀತ ಎಂಬುದು ಅವರಿಗೆ ಒಂದ ಪದವಾಗಿದೆಯೇ ಹೊರತು ಅವರ ನಡೆಯಾಗಿಲ್ಲ ಎಂದು ಟೀಕಿಸಿದರು.

ಇನ್ನು, ಮೈ.ವಿ.ರವಿಶಂಕರ್ ದಕ್ಷಿಣ ಪದವೀಧರ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ, ಬಿಜೆಪಿ ಪರ ಎಲ್ಲೆಡೆ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಕ್ಷೇತ್ರದ ಹುಡುಕಾಟದಲ್ಲಿ ಸಿದ್ದರಾಮಯ್ಯ

ಕ್ಷೇತ್ರದ ಹುಡುಕಾಟದಲ್ಲಿ ಸಿದ್ದರಾಮಯ್ಯ

ಕುತಂತ್ರ ರಾಜಕಾರಣ ಮಾಡುತ್ತಾ ಬಂದು ಕಾಂಗ್ರೆಸ್ ನಲ್ಲಿ ತಾನೊಬ್ಬನೇ ನಾಯಕರಾಗಿ ಬೆಳೆದರು. ಹತ್ತು ಜನ ಗೆಲ್ಲಿಸಿಕೊಂಡು ಬರುವವನು ನಿಜವಾದ ನಾಯಕ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿದುಕೊಂಡು ಬರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವರು ನಿಜವಾದ ನಾಯಕರಲ್ಲ, ಚಾಮುಂಡೇಶ್ವರಿಯಲ್ಲಿ ಅವರ ಸ್ಥಿತಿ ಏನಾಯಿತು. ಈಗ ಬಾದಾಮಿಯಲ್ಲಿ ಏನು ಪರಿಸ್ಥಿತಿ ಇದೆ. ಹೀಗಾಗಿ ಗೆಲ್ಲಲು ಯಾವುದೇ ಕ್ಷೇತ್ರವಿಲ್ಲದೆ, ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದಾರೆ. ಇವರೊಬ್ಬ ಲೀಡರ್ ರಾ, ಬೊಗಳೆ ಭಾಷಣ ಮಾಡುವವರು ಲೀಡರ್ ಅಲ್ಲ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಕ್ಷೇತ್ರಗಳನ್ನು ಹುಡುಕುವ ಅಲೆಮಾರಿ : ಶ್ರೀನಿವಾಸಪ್ರಸಾದ್ ವ್ಯಂಗ್ಯಸಿದ್ದರಾಮಯ್ಯ ಕ್ಷೇತ್ರಗಳನ್ನು ಹುಡುಕುವ ಅಲೆಮಾರಿ : ಶ್ರೀನಿವಾಸಪ್ರಸಾದ್ ವ್ಯಂಗ್ಯ

 ಸಿದ್ದರಾಮಯ್ಯ ಮೇಲೆ ಬಸಪ್ಪ, ಒಳಗೆ ವಿಷಪ್ಪ

ಸಿದ್ದರಾಮಯ್ಯ ಮೇಲೆ ಬಸಪ್ಪ, ಒಳಗೆ ವಿಷಪ್ಪ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳೆದ ಬಾರಿ ಕಾಂಗ್ರೆಸ್ ದಲಿತರನ್ನು ಮುಖ್ಯ ಮಂತ್ರಿ ಮಾಡಬೇಕಾಗಿತ್ತು, ಆದರೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಕಾಂಕ್ಷಿಯಾಗಿದ್ದವರನ್ನೆಲ್ಲಾ ರಾಜಕೀಯವಾಗಿ ಮುಗಿಸಿದರು. ಕುದುರೆ ವ್ಯಾಪಾರ ಮಾಡಿ ಮುಖ್ಯ ಮಂತ್ರಿಯಾದರು. ಆ ಮೂಲಕ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಿದರು. ಕುತಂತ್ರ ರಾಜಕಾರಣ ಮಾಡುತ್ತಾ ಬಂದು ಕಾಂಗ್ರೆಸ್ ನಲ್ಲಿ ತಾನೊಬ್ಬನೇ ನಾಯಕರಾಗಿ ಬೆಳೆದರು. ಹತ್ತು ಜನ ಗೆಲ್ಲಿಸಿಕೊಂಡು ಬರುವವನು ನಿಜವಾದ ನಾಯಕ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿದುಕೊಂಡು ಬರುತ್ತಿದ್ದಾರೆ. ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೇಲೆ ಬಸಪ್ಪ ಆದರೆ ಒಳಗೆ ವಿಷಪ್ಪ. ತನ್ನ ಮುಖ್ಯ ಮಂತ್ರಿ ಸ್ಥಾನಕ್ಕೆ ಅಡ್ಡಿಯಾಗುತ್ತಿರುವವರನ್ನೆಲ್ಲಾ ರಾಜಕೀಯವಾಗಿ ಕತ್ತು ಹಿಸುಕಿ ಮುಗಿಸುತ್ತಿದ್ದಾರೆ. ಅವರಷ್ಟು ದಲಿತ ವಿರೋಧಿ ಬೇರೆ ಯಾರೂ ಇಲ್ಲ, ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

 ಮುಂದಿನ ಚುನಾವಣೆಯಲ್ಲಿಕಾಂಗ್ರೆಸ್ ನಿರ್ನಾಮ

ಮುಂದಿನ ಚುನಾವಣೆಯಲ್ಲಿಕಾಂಗ್ರೆಸ್ ನಿರ್ನಾಮ

ಸಿದ್ದರಾಮಯ್ಯನವರ ಕಾಂಗ್ರೆಸ್ ಚಡ್ಡಿಯನ್ನು ದೇಶದ ಜನ ಬಿಚ್ಚಿ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಿದ್ದರಾಮಯ್ಯನವರ ಚಡ್ಡಿ ಸುಡಿ ಅಭಿಯಾನಕ್ಕೆ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕಾಂಗ್ರೆಸ್ ಎಲ್ಲಿದೆ‌ ಹೇಳಿ, ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ನ್ನು ಅಟ್ಟಾಡಿಸಿ ಓಡಿಸಿದ್ದಾರೆ. ಹಾಗಾಗಿ ಚಡ್ಡಿ ಸುಡುವ ಕಾರ್ಯಕ್ರಮ ಹಮ್ಮಿಕೊಂಡು ಓಡಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರ ಕಥೆಯೂ ಮುಗಿಯುತ್ತದೆ ಎಂದು ಹೇಳಿದರು. ಆರ್ ಎಸ್ ಎಸ್ ನವರು ಯಾವಾಗಲೂ ಗುರಿಯಾಗುತ್ತಿರುವುದು ಅಲ್ಪಸಂಖ್ಯಾತರ ಮತಬ್ಯಾಂಕ್ ಗಾಗಿ. ಆರ್ ಎಸ್ ಎಸ್ ದೇಶ ನಿರ್ಮಾಣ ಮತ್ತು ವ್ಯಕ್ತಿ ನಿರ್ಮಾಣ ಮಾಡುವ ಸಂಘಟನೆಯಾಗಿದೆ. ಈ ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವನಾಗಿರುವ ನಾನು ಕೂಡ ಆರ್ ಎಸ್ ಎಸ್ ನವನಾಗಿದ್ದೇನೆ. ಇತರೆ ರಾಜ್ಯದ ಸಿಎಂಗಳು ಆರ್‌ಎಸ್‌ಎಸ್‌ ನವರಾಗಿದ್ದಾರೆ. ಇಡೀ ದೇಶವೇ ಆರ್ ಎಸ್‌ಎಸ್‌ನ್ನು ಒಪ್ಪಿಕೊಂಡಿದೆ. ಹಾಗಾಗಿ ಆರ್ ಎಸ್ ಎಸ್ ನ ವಿರುದ್ಧ ಮಾತನಾಡಿದಷ್ಟು ಎದುರಾಳಿಗಳು ಕುಗ್ಗುತ್ತಾರೆ ಎಂದು ಸಿದ್ದರಾಮಯ್ಯ ಮಾತನಾಡುತ್ತಿರುವುದಾಗಿ ಹೇಳಿದರು.

 ಚಡ್ಡಿ ಸುಡಿ ಸಿದ್ದರಾಮಯ್ಯ ಹೇಳಿಕೆಗೆ ಖಂಡನೆ

ಚಡ್ಡಿ ಸುಡಿ ಸಿದ್ದರಾಮಯ್ಯ ಹೇಳಿಕೆಗೆ ಖಂಡನೆ

ಸಿದ್ದರಾಮಯ್ಯ ಚಡ್ಡಿ ಆರ್‌ಎಸ್‌ಎಸ್ ಸಮವಸ್ತ್ರ. ಹಾಗಾಗಿ, ಅದನ್ನು ಸುಡಿ ಎಂದು ಹೇಳಿದ್ದಾರೆ. ಚಡ್ಡಿಯನ್ನು ಸುಟ್ಟು ಹಾಕಿದರು. ಆದರೆ ಚಡ್ಡಿಯನ್ನು ಕಾಂಗ್ರೆಸ್ ನವರು ಧರಿಸಿದ್ದರು. ಈ ಹಿಂದೆ ಪೋಲಿಸ್, ಸೈನಿಕರು ಸೇರಿದಂತೆ ಎಲ್ಲರು ಧರಿಸುತ್ತಿದ್ದರು. ಈಗಲೂ ಯುವ ಸಮೂಹ ಚಡ್ಡಿಯನ್ನು ಧರಿಸುತ್ತಿದೆ. ಮನುಷ್ಯರ ಮಾನವನ್ನು ಕಾಪಾಡುತ್ತಿದೆ. ಅದು ಮಾನವರ ಗೌರವದ ಸಂಕೇತವಾಗಿದೆ. ಅಂತಹ ಚಡ್ಡಿಯನ್ನು ಕಾಂಗ್ರೆಸ್‌ ನವರು ಸುಟ್ಟಿದ್ದಾರೆ. ಆ ಮೂಲಕ ಮಾನವರ ಮರ್ಯಾದೆ, ಗೌರವಗಳನ್ನು ಸುಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಮಾನವೂ ಈಗ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನಾಯಕರ ಇಂತಹ ಕೃತ್ಯಗಳೇ ಆ ಪಕ್ಷ ಈಗ ಈ ಪರಿಯ ದುಸ್ಥಿಗೆ, ಅವನತಿಗೆ ಬರಲು ಕಾರಣವಾಗಿದೆ ಎಂದರು. ಚಡ್ಡಿಯನ್ನು ತಯಾರು ಮಾಡುವವರು ನೇಕಾರರು, ಬಟ್ಟೆಗೆ ಬೇಕಾದ ವಸ್ತುಗಳನ್ನು ತಯಾರು ಮಾಡುವವರು ರೈತರು, ಚಡ್ಡಿಯನ್ನು ಹೊಲೆಯುವವರು, ಮಾರಾಟ ಮಾಡುವವರು ಇದ್ದಾರೆ. ಕಾಂಗ್ರೆಸ್ ಚಡ್ಡಿಯನ್ನು ಸುಡುವ ಮೂಲಕ ಅವರಿಗೆಲ್ಲ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

(ಒನ್ಇಂಡಿಯಾ ಸುದ್ದಿ)

Recommended Video

ಗಾಬರಿಯಿಂದ ಸಿದ್ದು ಹೊರಟಿದ್ದು ಎಲ್ಲಿಗೆ?? | Oneindia Kannada

English summary
Siddaramaiah had called BJP and JDS MLAs to vote conscientiously in Rajya Sabha Election. This is an encouragement for cross-voting, alleged BJP leader Chalavadi Narayanaswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X