• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಷೇಧದ ನಡುವೆಯೂ ಕಾವೇರಿ ನದಿಯಲ್ಲಿ ತೆಪ್ಪದ ಸವಾರಿ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಅಕ್ಟೋಬರ್ 28: ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಿತ್ತು. ಕಳೆದ ತಿಂಗಳಿನಿಂದ ಪ್ರವಾಸಿ ತಾಣಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ಅನ್‌ ಲಾಕ್‌ ಮಾಡಲಾಗಿದೆ.

ಇದೀಗ ದಸರಾ ಹಿನ್ನೆಲೆಯಲ್ಲಿ ಜನರು ಪ್ರವಾಸಿ ತಾಣಗಳತ್ತ ತೆರಳುತಿದ್ದಾರೆ. ಮಾಸ್ಕ್ ಧರಿಸಿ, ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದರೂ ಜನರು ಜಾಲಿ ರೈಡ್‌ ಹೋಗಿ ಜನಜಂಗುಳಿ ಆಗುತ್ತಿದೆ.

ವಿರೋಧದ ಹಿನ್ನೆಲೆ ಉದ್ದೇಶಿತ ಬಂಡಿಪುರ ಪ್ರವಾಸೋದ್ಯಮ ಸಫಾರಿ ಸ್ಥಗಿತ

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ನಿತ್ಯವೂ ಹರಿದು ಬರುತ್ತಿದೆ. ಈ ಆಗಮನವನ್ನೇ ಕಾದಿದ್ದ ಸ್ಥಳೀಯರು ಪ್ರವಾಸಿಗರಿಗೆ ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಇವರು ತೆಪ್ಪದ ಮೂಲಕ ಪ್ರವಾಸಿಗರಿಗೆ ಭರಚುಕ್ಕಿ, ಮಧ್ಯ ರಂಗನಾಥಸ್ವಾಮಿ, ಶಿಂಷಾದ ಮಾರಮ್ಮ, ವೆಸ್ಲಿ ಸೇತುವೆ ತೋರಿಸುತ್ತಿದ್ದಾರೆ.

ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತವು ವರ್ಷಗಳ ಹಿಂದೆಯೇ ಇಲ್ಲಿ ತೆಪ್ಪದ ಸವಾರಿಯನ್ನು ನಿಷೇಧಿಸಿದೆ. ಆದರೂ ಇದನ್ನು ಉಲ್ಲಂಘಿಸಿ ಕೆಲವರು ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಇಲ್ಲಿ ಕನಿಷ್ಟ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಿಲ್ಲ.

ನೀರಿನಲ್ಲಿ ಚಲಿಸುವ ಯಾವುದೇ ವಾಹನ ಏರುವ ಪ್ರವಾಸಿಗರಿಗೆ ಕಡ್ಡಾಯವಾಗಿ ಲೈಫ್ ಜಾಕೆಟ್ ಗಳನ್ನು ನೀಡಲೇಬೇಕು. ಎಲ್ಲೆಡೆ ಈ ನಿಯಮ ಪಾಲಿಸಲಾಗುತ್ತಿದೆ. ಇಲ್ಲಿ ತೆಪ್ಪವೆರುವ ಪ್ರವಾಸಿಗರಿಗೆ ಲೈಫ್ ಜಾಕೆಟ್ ಗಳನ್ನು ಕೊಡುತ್ತಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತೆಪ್ಪ ಮುಳುಗಿ ಕಾವೇರಿಯಲ್ಲಿ ಜಲಸಮಾಧಿ ಆಗುವುದು ತಪ್ಪಿದ್ದಲ್ಲ. ಆದರೆ ಹಣ ಮಾಡುವ ಕಾರ್ಯದಲ್ಲಿ ತೊಡಗಿರುವ ತೆಪ್ಪದ ಮಾಲೀಕರು ಈ ಕುರಿತು ತಲೆ ಕೆಡಿಸಿಕೊಂಡಿಲ್ಲ.

   Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada

   ವಿಷಯ ತಿಳಿದ ಬಳಿಕ ಎಚ್ಚೆತ್ತ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಕಾನೂನು ಬಾಹಿರವಾಗಿ ತೆಪ್ಪ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

   English summary
   Prediction of risk the Chamarajanagar district Administration has banned a boat ride on the Cauvery River.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X