ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಗ್ರಂಥಾಲಯ ಎದುರು ವಾಮಾಚಾರ?

By ಬಿ.ಎಂ.ಲವಕುಮಾರ್
|
Google Oneindia Kannada News

ಚಾಮರಾಜನಗರ, ಆಗಸ್ಟ್ 03 : ಚಾಮರಾಜನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಬಾಗಿಲಲ್ಲಿ ಮಣ್ಣಿನ ಕುಡಿಕೆ, ನಿಂಬೆಹಣ್ಣು, ಅರಿಸಿನ ಕುಂಕುಮಗಳು ಕಂಡು ಬಂದಿದ್ದು ಕಿಡಿಗೇಡಿಗಳು ವಾಮಾಚಾರ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಚಾಮರಾಜನಗರ ಮುಖ್ಯ ಗ್ರಂಥಾಲಯದ ಎದುರು ಇದಕ್ಕೂ ಹಿಂದೆಯೂ ಇದೇ ರೀತಿಯ ವಾಮಚಾರ ನಡೆದಿತ್ತು, ಇದು ಮೂರನೇ ಬಾರಿಗೆ ವಾಮಾಚಾರದ ಪ್ರಯೋಗ ನಡೆದಿದೆ ಎಂದು ತಿಳಿದುಬಂದಿದೆ. ಕಚೇರಿಗೆ ಆಗಮಿಸಿದ ಸಿಬ್ಬಂದಿಗೆ ಕೇಂದ್ರ ಗ್ರಂಥಾಲಯದ ಎದುರು ಬಾಗಿಲ ಬಳಿ ಮಣ್ಣಿನ ಕುಡಿಕೆ, ನಿಂಬೆಹಣ್ಣು, ಅರಿಸಿನ ಕುಂಕುಮ ಇರುವುದು ನೋಡಿ ಭಯಭೀತಾಗಿದ್ದಾರೆ.

ದೆವ್ವದ ಭಯ ಹೊಡೆದೋಡಿಸಲು ಸ್ಮಶಾನದಲ್ಲಿ ಮಲಗಿದ ಶಾಸಕ ದೆವ್ವದ ಭಯ ಹೊಡೆದೋಡಿಸಲು ಸ್ಮಶಾನದಲ್ಲಿ ಮಲಗಿದ ಶಾಸಕ

ಆದರೆ, ವಾಮಾಚಾರ ಯಾರು ಮಾಡಿಸಿದರು? ಯಾವ ಉದ್ದೇಶಕ್ಕೆ ಮಾಡಿದ್ದಾರೆ? ಎನ್ನುವುದು ತಿಳಿಯಬೇಕಾಗಿದೆ. ಆಗಾಗ ಗ್ರಂಥಾಲಯದ ಬಳಿ ಇಂತಹ ಕೃತ್ಯ ನಡೆಸುವುದಕ್ಕೆ ಕಾರಣ ಏನು? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Black magic performs near Chamarajanagar central library

ಆ.12 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ರಾಜ್ಯ ಮಟ್ಟದ ಗ್ರಂಥಪಾಲಕರ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ವಿಘ್ನ ತರುವ ಸಲುವಾಗಿ ಈ ರೀತಿಯ ವಾಮಾಚಾರ ಮಾಡಿಸಿರಬಹುದೆಂದು ಕೆಲವರು ಸಂಶಯಪಟ್ಟಿದ್ದಾರೆ. ಕೆಲವು ಕಿಡಿಗೇಡಿಗಳು ಭಯ ಹುಟ್ಟಿಸಲೆಂದೇ ಇಂತಹ ಕೃತ್ಯಕ್ಕೆ ಮುಂದಾಗಿದ್ದಾರಾ? ಎಂಬುದು ಪತ್ತೆಯಾಗಬೇಕಿದೆ.

English summary
Anonymous performed Black Magic in front of Chamarajanagar central library. This is the 3rd time Black Magic performed in library.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X