ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ದಸರಾ ಉದ್ಘಾಟನೆ ವೇಳೆ ಕಪ್ಪು ಬಾವುಟ ಪ್ರದರ್ಶನ, ಸಚಿವರು ಕೆಂಡಾಮಂಡಲ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್‌, 27: ಚಾಮರಾಜನಗರ ಜಿಲ್ಲಾ ದಸರಾದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ವೇಳೆ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ವೇದಿಕೆಯಲ್ಲೇ ಕಪ್ಪು ಬಾವುಟ ಪ್ರದರ್ಶನ ಮಾಡಿದರು.

ಚಾಮರಾಜೇಶ್ವರ ದೇವಾಲಯದ ಮುಂಭಾಗ ನಿರ್ಮಿಸಿರುವ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಿಸಲು ಸಚಿವ ಸೋಮಣ್ಣ ವೇದಿಕೆ ಏರಿ ಕುಳಿತಿದ್ದರು. ಅಲ್ಲೇ ಇದ್ದ ನಗರಸಭಾ ಸದಸ್ಯ ಆರ್‌.ಪಿ.ನಂಜುಂಡಸ್ವಾಮಿ ದೀಪಾಲಂಕಾರದ ಅವ್ಯವಸ್ಥೆ ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಿದರು. ಬಳಿಕ ಪೊಲೀಸರು ನಂಜುಂಡಸ್ವಾಮಿ ಅವರನ್ನು ಹೊರಕ್ಕೆ ಎಳೆದೊಯ್ದರು‌.

ಚಾಮರಾಜನಗರ ದಸರಾಗೆ ಚಾಲನೆ; ಇಂದು ಸಂಜೆಯಿಂದ ಸಾಂಸ್ಕೃತಿಕ‌ ಕಲರವಚಾಮರಾಜನಗರ ದಸರಾಗೆ ಚಾಲನೆ; ಇಂದು ಸಂಜೆಯಿಂದ ಸಾಂಸ್ಕೃತಿಕ‌ ಕಲರವ

ಇನ್ನು ಅನಿರೀಕ್ಷಿತ ಘಟನೆಯಿಂದ ಕೆಂಡಾಮಂಡಲವಾಗಿದ್ದ ಸಚಿವ ಸೋಮಣ್ಣ, ಯಾವ ರೀತಿ ವ್ಯವಸ್ಥೆ ಮಾಡಿದ್ದೀರಾ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು. ಕಪ್ಪು ಬಾವುಟ ಪ್ರದರ್ಶಿಸುವುದು ದೊಡ್ಡದಲ್ಲ. ಪೊಲೀಸರು, ಚೆಸ್ಕಾಂ ಸಿಬ್ಬಂದಿಗೆ ಕಾರ್ಯಕ್ರಮದ ಬಳಿಕ ಮೀಟಿಂಗ್ ಕರೆಯಲಿದ್ದು, ಎಲ್ಲರೂ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದು ವೇದಿಕೆಯಲ್ಲೇ ಸೂಚಿಸಿದರು. ವೇದಿಕೆ ಎರಡೂ ಬದಿಯಲ್ಲಿ ನಿಂತಿದ್ದ ಮುಖಂಡರನ್ನು ಕಂಡು ಖುರ್ಚಿ ಹಾಕಿಸಿ ಯಾರೂ ನಿಲ್ಲಬಾರದು ಎಂದು ಕೂರಿಸಿದರು. ಜಂಜಾಟ ಮರೆತು ಕಾರ್ಯಕ್ರಮ ನೋಡಿ ಎಂದು ಹೇಳಿದರು.

Black flag protest during Chamarajanagar Dasara inauguration

ಈ ಸಂದರ್ಭದಲ್ಲಿ ಶಾಸಕರಾದ ಸಿ‌.ಪುಟ್ಟರಂಗಶೆಟ್ಟಿ, ನಿರಂಜನ ಕುಮಾರ್, ಎನ್.ಮಹೇಶ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಾಲ್ಕು ದಿನಗಳ‌ ಕಾಲ‌ ನಡೆಯುವ ಚಾಮರಾಜನಗರ ಜಿಲ್ಲೆಯ ದಸರಾಗೆ ಇಂದು ಸಾಂಪ್ರದಾಯಿಕವಾಗಿ ಚಾಲನೆ ಕೊಡಲಾಗಿದೆ. ಜಿಲ್ಲೆಯಲ್ಲಿ ಇಂದಿನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ಮೇಳೈಸಲಿದೆ. ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಶಾಸಕ ಸಿ.ಪುಟ್ಟರಂಗಶೆಟ್ಟಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತಿ ಸಿಇಒ ಕೆ.ಎಂ.ಗಾಯತ್ರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಇದ್ದರು.

Black flag protest during Chamarajanagar Dasara inauguration

ಚಾಮರಾಜನಗರ ದಸರಾಗೆ ಅದ್ಧೂರಿ ಚಾಲನೆ
ದಸರಾ ಉತ್ಸವ ಅಂಗವಾಗಿ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿರುವ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಉದ್ಘಾಟಿಸಿದ್ದರು. ಬಳಿಕ ಜೆ.ಎಚ್.ಪಟೇಲ್ ಸಭಾಂಗಣ ಹಾಗೂ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದ್ದು, ‌ಕೆಲವೇ ಕ್ಷಣಗಳಲ್ಲಿ ಸಚಿವ ಸೋಮಣ್ಣ ಪ್ರಧಾನ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ.

ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಪ್ರತಿ ದಿನ ಜಿಲ್ಲೆಯ ಜಾನಪದ ಕಲೆಗಳು ಪ್ರದರ್ಶನ ಕಾಣಲಿವೆ. ಪ್ರತಿ ದಿನವೂ 20ಕ್ಕೂ ಹೆಚ್ಚು ಜಾನಪದ ತಂಡಗಳು ಕಲೆಯನ್ನು ಪ್ರದರ್ಶಿಸಲಿವೆ. ಸೋಬಾನೆ ಪದ, ಗೊರವರ ಕುಣಿತ, ಕಂಸಾಳೆ, ನೀಲಗಾರರ ಪದ, ತಂಬೂರಿ ಪದ, ಡೊಳ್ಳು ಕುಣಿತ, ತೊಗಲು ಗೊಂಬೆಯಾಟ, ಭಜನೆ, ನೃತ್ಯ ರೂಪಕ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯಲಿವೆ. ಇನ್ನು ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಕಲಾವಿದರು ಜನರನ್ನು ರಂಜಿಸಲಿದ್ದಾರೆ.

ಇನ್ನು ಚಾಮರಾಜನಗರ ದಸರಾ ಮಹೋತ್ಸವವನ್ನು ಅದ್ಧೂರಿ ಹಾಗೂ ವೈವಿಧ್ಯಮಯವಾಗಿ ನಡೆಸುವಂತೆ ಮುಂಚೆಯೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದರು. ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯ ಸಮಿತಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ಜಿಲ್ಲೆಯ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿತ್ತು. ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ದಸರಾ ಅದ್ಧೂರಿ ಆಚರಣೆಗೆ ಸಾಧ್ಯವಾಗಿರಲಿಲ್ಲ. ಐತಿಹಾಸಿಕ ಪರಂಪರೆ ಹಿನ್ನೆಲೆ ದಸರಾ ಮಹೋತ್ಸವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವವನ್ನು ಹೆಚ್ಚು ವಿಜೃಂಭಣೆಯಿಂದ ನಡೆಸಬೇಕು ಎಂದು ಸಚಿವರು ತಿಳಿಸಿದ್ದರು.

English summary
During Chamarajanagar Dasara cultural program inauguration, member of city council RP Nanjundaswamy and others show black flag on stage and protest. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X