ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿ 'ಸೂರ್ಯ' ಅಲ್ಲ, ಅಮಾವಾಸ್ಯೆ: ಸಿದ್ದರಾಮಯ್ಯ

|
Google Oneindia Kannada News

Recommended Video

Lok Sabha Elections 2019: ತೇಜಸ್ವಿ ಸೂರ್ಯ ಅಲ್ಲ, ಅಮಾವಾಸ್ಯೆ: ಸಿದ್ದರಾಮಯ್ಯ | Oneindia Kannada

ಚಾಮರಾಜನಗರ, ಏಪ್ರಿಲ್ 16: ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಿ, ಸಂವಿಧಾನ ಸುಟ್ಟುಹಾಕಿ ಎನ್ನುವ ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ 'ಸೂರ್ಯ' ಅಲ್ಲ ಅಮಾವಾಸ್ಯೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಚಾಮರಾಜನಗರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಧೃವನಾರಾಯಣ್ ಪರ ಪ್ರಚಾರ ಮಾಡಿದ ಅವರು, ಬಿಜೆಪಿ ಕೋಮುವಾದಿ ಮನಸ್ಥಿತಿ ವಿರುದ್ಧ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ವಿರುದ್ಧ ಹರಿಹಾಯ್ದರು.

ಬಿಜೆಪಿಯವರೇನು ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಾ:ಸಿದ್ದರಾಮಯ್ಯ ಪ್ರಶ್ನೆಬಿಜೆಪಿಯವರೇನು ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಾ:ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ, ಮೀಸಲಾತಿ ನಿಲ್ಲಿಸುತ್ತೇವೆ ಎನ್ನುತ್ತಾರೆ. ಇವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ, ಸಂವಿಧಾನವನ್ನು ತಮ್ಮ ಮನೆಯ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿರುವವಂತೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್

ತಮ್ಮ ಎಂದಿನ ವ್ಯಂಗ್ಯದ ಶೈಲಿಯಲ್ಲಿಯೇ ಬಿಜೆಪಿ ಚುಚ್ಚಿದ ಸಿದ್ದರಾಮಯ್ಯ, ಬಿಜೆಪಿಯು ಒಬ್ಬ ಹಿಂದುಳಿದವರಿಗೂ ಈ ಬಾರಿ ಟಿಕೆಟ್ ನೀಡಿಲ್ಲ, ಆದರೆ ಕಾಂಗ್ರೆಸ್ ಎಲ್ಲ ಜಾತಿ, ಸಮುದಾಯದವರಿಗೂ ಅವಕಾಶ ನೀಡಿದೆ. ಬಿಜೆಪಿಯವರು ಕೋಮುವಾದಿಗಳು ಅದರ ಆದಾರದಲ್ಲಿಯೇ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಶ್ರೀನಿವಾಸ್‌ಪ್ರಸಾದ್ ರಾಜೀನಾಮೆ ಕೊಡಲಿಲ್ಲವೇಕೆ?

ಶ್ರೀನಿವಾಸ್‌ಪ್ರಸಾದ್ ರಾಜೀನಾಮೆ ಕೊಡಲಿಲ್ಲವೇಕೆ?

ಅನಂತ್‌ಕುಮಾರ್ ಹೆಗಡೆ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಇವರೆಲ್ಲಾ ಸಂವಿಧಾನದ ವಿರುದ್ಧ ಮಾತನಾಡಿದಾಗ, ದಲಿತಪರ ಎಂದು ಕರೆಸಿಕೊಳ್ಳುವ ಶ್ರೀನಿವಾಸಪ್ರಸಾದ್ ಅವರು ಪಕ್ಷ ಬಿಟ್ಟು ಏಕೆ ಬರಲಿಲ್ಲ, ಕನಿಷ್ಟ ಪ್ರತಿಭಟನೆಯನ್ನೂ ಸಹ ಅವರು ಮಾಡಲಿಲ್ಲ ಏಕೆ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

'ಬಿಜೆಪಿಯವರು ಮಾತ್ರ ದೇಶಪ್ರೇಮಿಗಳಾ'

'ಬಿಜೆಪಿಯವರು ಮಾತ್ರ ದೇಶಪ್ರೇಮಿಗಳಾ'

ನಾವು ದೇಶಪ್ರೇಮಿಗಳು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ, ಆದರೆ ಬಿಜೆಪಿ ಯಾವೊಬ್ಬರೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ, ಬಿಜೆಪಿಯವರು ಮಾತ್ರವೇ ದೇಶಪ್ರೇಮಿಗಳಾದರೆ ಉಳಿದವರೆಲ್ಲಾ ಏನು? ಎಂದು ಪ್ರಶ್ನೆ ಮಾಡಿದರು.

ಅದು 'ಮೂಡ್' ಅಲ್ಲ, ಜನರ ಅಭಿಪ್ರಾಯ:ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯಅದು 'ಮೂಡ್' ಅಲ್ಲ, ಜನರ ಅಭಿಪ್ರಾಯ:ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

ಇಂದಿರಾ ಅವಧಿಯಲ್ಲಿ ಪಾಕಿಸ್ತಾನವೇ ಶರಣಾಗಿತ್ತು

ಇಂದಿರಾ ಅವಧಿಯಲ್ಲಿ ಪಾಕಿಸ್ತಾನವೇ ಶರಣಾಗಿತ್ತು

ಸರ್ಜಿಕಲ್ ಸ್ಟ್ರೈಕ್ ಮಾಡಿದ್ದನ್ನು ಮೋದಿ ಎದೆ ತಟ್ಟುಕೊಳ್ಳುತ್ತಾರೆ, ಈವರೆಗೆ 12 ಸರ್ಜಿಕಲ್ ಸ್ಟ್ರೈಕ್ ಆಗಿದೆ ಎಂದು ಹೇಳಿದ ಅವರು, ಇಂದಿರಾ ಗಾಂಧಿ ಅವರು 90000 ಪಾಕಿಸ್ತಾನಿ ಸೈನಿಕರು ಭಾರತಕ್ಕೆ ಶರಣಾಗುವಂತೆ ಮಾಡಿದ್ದರು. ಆದರೆ ಕಾಂಗ್ರೆಸ್ ಎಂದೂ ಸಹ ಸೈನಿಕರ ಸಾಧನೆಯನ್ನು ಆಧಾರವಾಗಿಟ್ಟುಕೊಂಡು ಮತ ಕೇಳಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇಂದು ಬಹಿರಂಗ ಪ್ರಚಾರದ ಕೊನೆಯ ದಿನ

ಇಂದು ಬಹಿರಂಗ ಪ್ರಚಾರದ ಕೊನೆಯ ದಿನ

ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು, ಚಾಮರಾಜನಗರ ಮತ್ತು ಮೈಸೂರುಗಳಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದಾರೆ. ಕುಮಾರಸ್ವಾಮಿ ಮಂಡ್ಯದಲ್ಲಿ ಪ್ರಚಾರದಲ್ಲಿ ನಿತರಾಗಿದ್ದರೆ, ದೇವೇಗೌಡ, ಪರಮೇಶ್ವರ್ ಅವರು ತುಮಕೂರಿನಲ್ಲಿ ಇದ್ದಾರೆ.

English summary
BJP is a communal party do not for them said Siddaramaiah. He said BJP candidate Tejasvi Surya once said burn the constitution, BJP minister Anantkumar Hegde said we change the constitution. BJP did not know about social justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X