• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕ್ ಸವಾರರೇ ಎಚ್ಚರ:ಚಾಮರಾಜನಗರದಲ್ಲಿ ಶುರುವಾಗಿದೆ ಕಳ್ಳರ ಹಾವಳಿ

|

ಚಾಮರಾಜನಗರ, ಏಪ್ರಿಲ್ 24: ಬೆಂಗಳೂರು, ಮೈಸೂರು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತಿದ್ದ ಬೈಕ್ ಕಳ್ಳತನಗಳ ಬಗ್ಗೆ ಕೇಳಿ ತಿಳಿಯುತ್ತಿದ್ದ ಚಾಮರಾಜನಗರದ ಜನ ಇದೀಗ ತಮ್ಮ ನಗರದಲ್ಲೇ ಬೈಕ್ ಕಳ್ಳತನವಾಗುತ್ತಿರುವುದರಿಂದ ಬೆಚ್ಚಿ ಬಿದ್ದಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆ ಮುಂದೆ ನಿಲ್ಲಿಸುವವರ ಬೈಕ್ ಗಳನ್ನು ಕಳ್ಳರು ಕದ್ದು ಪರಾರಿಯಾಗುತ್ತಿದ್ದು, ಇದರಿಂದ ಬೈಕ್ ಕಳೆದುಕೊಂಡ ಮಾಲೀಕರು ಮಮ್ಮಲ ಮರಗುವಂತಾಗಿದೆ. ಆಸ್ಪತ್ರೆ ಆವರಣದಿಂದಲೇ ಬೈಕ್ ಗಳು ಕಳ್ಳತನವಾಗುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಹಾಯಕರು ಪರದಾಡುವಂತಾಗಿದೆ.

ಸಾವಿನ ಮನೆಯನ್ನೇ ಹುಡುಕಿ ಕೈಚಳಕ ತೋರಿಸುತ್ತಿದ್ದ ಕಳ್ಳ ಅರೆಸ್ಟ್‌

ಜಿಲ್ಲಾ ಸರ್ಕಾರಿ ಆಸ್ಪತ್ರೆಯು ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿದ್ದು, ಈ ಆಸ್ಪತ್ರೆ ಮುಂಭಾಗ ಬೈಕ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದ್ದು, ಈ ಸಂಬಂಧ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ವಾಹನಗಳ ಪಾರ್ಕಿಂಗ್ ಗೆ ಟೆಂಡರ್ ನೀಡಿದ್ದಾರೆ. ಇಷ್ಟೆಲ್ಲ ಮಾಡಿದವರು ಬೈಕ್ ಗಳ ಭದ್ರತೆಗೆ ಮಾತ್ರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹೀಗಾಗಿಯೇ ಬೈಕ್ ಕಳ್ಳತನವಾಗುತ್ತಿದೆ ಎಂಬುದು ಬೈಕ್ ಕಳೆದುಕೊಂಡವರ ಆರೋಪವಾಗಿದೆ.

ವಾಹನ ನಿಲುಗಡೆ ಪ್ರದೇಶದಲ್ಲಿ ಬೈಕ್ ಗಳನ್ನು ನಿಲ್ಲಿಸಿ, ಒಳ ಹೋದರೆ ಮತ್ತೇ ಬಂದು ನೋಡುವ ವೇಳೆಗೆ ಬೈಕ್ ಕಳ್ಳತನವಾಗಿರುತ್ತದೆ. ಈ ಬಗ್ಗೆ ಪಟ್ಟಣ ಠಾಣೆಗೆ ದೂರು ನೀಡಿದ್ದರು. ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಬೈಕ್ ಕಳ್ಳರ ಸುಳಿವೇ ಸಿಗುತ್ತಿಲ್ಲ. ಇದುವರೆಗೆ ಸುಮಾರು 8 ರಿಂದ 10 ಬೈಕ್ ಗಳು ಕಳ್ಳತನವಾಗಿದೆ.

ಮಹಿಳೆಯಿಂದ ಒಡವೆ ದೋಚಿ, ಸುಳ್ಳು ಆರೋಪವನ್ನೂ ಹೊರಿಸಿದ ನಕಲಿ ಪೊಲೀಸರು

ಆಗಿಂದ್ದಾಗೆ ಇಲ್ಲಿ ನಿಲ್ಲಿಸಿದ್ದ ಬೈಕ್ ಗಳು ಕಳ್ಳತನವಾಗುತ್ತಿರುವ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಸಿ ಕ್ಯಾಮೆರಾ ಸಹ ಕೆಟ್ಟು ಹೋಗಿದ್ದು, ಬೈಕ್ ಗಳ ಕಳುವಿಗೆ ಪುಷ್ಟಿ ನೀಡಿದಂತಾಗಿದೆ. ಆಸ್ಪತ್ರೆಯ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಕೆಟ್ಟು ಹೋಗಿ ಬಹಳ ದಿನವಾಗಿದೆ.

ಪೊಲೀಸ್ ಚೌಕಿಯಲ್ಲಿ ಟಿವಿಯನ್ನು ಅಳವಡಿಸಿದ್ದು, ಇದು ಸಹ ರಿಪೇರಿಗೆ ಬಂದಿದೆ. ಹೀಗಾಗಿ ಇದೆಲ್ಲವನ್ನು ಅರಿತವರೇ ಕಳ್ಳತನ ಮಾಡುತ್ತಿರಬಹುದು ಎಂದು ಸಂಶಯಿಸಲಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಬೈಕ್ ಕಳ್ಳರನ್ನು ಪತ್ತೆ ಹಚ್ಚಬೇಕಿದೆ.

English summary
Bike stealing began in Chamarajanagar District. Robbers are stealing bike in front of the district hospital. Patients and their helpers are struggling with this. Here's a short article on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X