• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರೇಮಿಗಳ ದಿನಕ್ಕೆ 5 ದಿನ ರಜೆ ಕೋರಿದ ವಿದ್ಯಾರ್ಥಿ ಪತ್ರ ವೈರಲ್‌!

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಫೆಬ್ರವರಿ 11: ಫೆಬ್ರುವರಿ 14 ರಂದು ಪ್ರೇಮಿಗಳ. ಇದಕ್ಕಾಗಿ ಐದು ದಿನಗಳ ಕಾಲ ರಜೆ ಕೊಡಿ‌ ಸರ್ ಎಂದು ಕೊಳ್ಳೇಗಾಲದ ಬಿಕಾಂ ವಿದ್ಯಾರ್ಥಿಯು ಕಾಲೇಜಿನ ಪ್ರಾಂಶುಪಾಲರಿಗೆ ಬರೆದಿರುವ ರಜಾ ಅರ್ಜಿ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್​​ ಆಗಿದೆ.

ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ‌ ಶಿವರಾಜು ಎಸ್. ಎಂಬ ವಿದ್ಯಾರ್ಥಿ ಹೆಸರಲ್ಲಿ ಈ ಅರ್ಜಿ ಇದೆ. ಪ್ರೇಮಿಗಳ‌ ದಿನ ಹತ್ತಿರ ಬರುತ್ತಿದ್ದು ನನಗೆ ‌ ಹುಡುಗಿಯರ ಕಾಟ ತಡೆಯಲು ಆಗುತ್ತಿಲ್ಲ, ಹಾಗಾಗಿ 5 ದಿನ ರಜೆ ಬೇಕೆಂದು‌ ಫೆಬ್ರವರಿ 9ರಂದು ಈ ಅರ್ಜಿ ಬರೆಯಲಾಗಿದೆ.‌

ಫೋಟೋ ವೈರಲ್: ಪ್ರೇಮಿಗಳ ದಿನಕ್ಕೂ ಮುನ್ನ ಬಸ್ ನಿಲ್ದಾಣದಲ್ಲಿ 'ಒಂದು ಮುತ್ತಿನ ಕಥೆ'

ಈ ರಜೆ ಅರ್ಜಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅರ್ಜಿಯಲ್ಲಿ ಪ್ರಾಂಶುಪಾಲ ಸೀಗ ನಾಯಕ ಅವರ ಸಹಿ ಮತ್ತು ಮೊಹರೂ ಇದೆ. ಈ ಬಗ್ಗೆ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದು, "ತನ್ನ ಸಹಿಯನ್ನು ಯಾರೋ ನಕಲಿ‌ ಮಾಡಿ, ಮೊಹರನ್ನು ಕದ್ದು ಹಾಕಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.

ಪ್ರೇಮಿಗಳ ಹಬ್ಬ ವಿಶೇಷ: ವಿಶೇಷ ಕರಕುಶಲ ವಸ್ತು ಪ್ರದರ್ಶನ ಮೇಳ

   ನಾಳೆಯಿಂದ ಫೆ. 25ರವರೆಗೆ ಕೃಷಿ ಹಾಗೂ ಕರಾವಳಿ ಕಲೋತ್ಸವ | Oneindia Kannada

   ಪ್ರೇಮಿಗಳ ದಿನಕ್ಕಾಗಿ ರಜೆ ಕೋರಿರುವುದು ಪ್ರಚಾರಕ್ಕಾಗಿ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. ಅನೇಕರು ಇದು ಸುಳ್ಳು ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಾಂಶುಪಾಲರ ಸಹಿಯ್ನೂ ನಕಲು ಮಾಡಿದ್ದು ನೋಡಿದರೆ ಇದು ಪ್ರಚಾರಕ್ಕಾಗಿ ಮಾಡಿದ್ದು ಎಂದು ಹಲವರು ಹೇಳಿದ್ದಾರೆ.

   English summary
   Chamarajanagar district B.com student leave letter goes viral on social media. Student seeks 5 days of leave for Valentine's day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X