ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಸೆಲ್ಫೀ ತೆಗೆದರೆ ಸಾವಿರ ರೂಪಾಯಿ ದಂಡ!

By Nayana
|
Google Oneindia Kannada News

ಬೆಂಗಳೂರು, ಮೇ 30: ಬಂಡೀಪುರದಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಅದರೊಂದಿಗೆ ಅರಣ್ಯ ಇಲಾಖೆ, ಸರ್ಕಾರ ಜತೆಗೂಡಿ ಅಲ್ಲಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗದಂತೆ ಕೆಲವು ಕಾನೂನುಗಳನ್ನು ಜಾರಿಗೆ ತಂದಿದೆ. ಆ ಕಾನೂನುಗಳ ಉಲ್ಲಂಘನೆಯ ಪ್ರಕಟಣಗಳೂ ಕೂಡ ಹೆಚ್ಚಾಗುತ್ತಿದೆ.

ದಿನನಿತ್ಯ ಸಾಕಷ್ಟು ಮಂದಿ ಬಂಡಿಪುರದ ಹೆದ್ದಾರಿಗಳಲ್ಲಿ ಹಾದು ಹೋಗುವಾಗ ಸಂರಕ್ಷಿತ ಅರಣ್ಯದಲ್ಲಿ ಪರಿಚಯಿಸಲಾಗಿದ್ದ ನೂತನ ನಿಯಮಗಳನ್ನು ಉಲ್ಲಂಘನೆ ಮಾಡಿ 1 ಸಾವಿರ ರೂ ದಂಡವನ್ನು ಪಾವತಿಸುತ್ತಿದ್ದಾರೆ.

ಹಾಗಾದರೆ ಅಲ್ಲಿರುವ ಕಾನೂನು ಏನೇನು ಎಂದು ನೋಡುವುದಾದರೆ ಪ್ರಾಣಿಗಳಿಗೆ ಆಹಾರ ಹಾಕುವುದು, ಧೂಮಪಾನ ಮಾಡುವುದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವುದು, ಹಾರನ್ ಮಾಡುವುದು ಹೀಗೆ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿ 1 ರಿಂದ 2 ಸಾವಿರ ರೂ ದಂಡ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Bandipura forest: Rs1,000 penalty for selfie!

ಪ್ರತಿವರ್ಷ ಎಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಬಂಡಿಪುರಕ್ಕೆ ಬರುವುದರಿಂದ ನಿಯಮಗಳ ಉಲ್ಲಂಘನೆ ಸಹ ಹೆಚ್ಚಾಗುತ್ತಿವೆ. ಮೈಸೂರು-ಮನನಂತವಾಡಿ ಮತ್ತು ಗುಂಡ್ಲುಪೇಟೆ-ಸುಲ್ತಾನ್ ಬತೇರಿ ಹೆದ್ದಾರಿಗಳಲ್ಲಿ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ದಂಡ ವಿಧಿಸುತ್ತಿದೆ.

ಈ ನಿಯಮ ಜಾರಿಯಾದಾಗಿನಿಂದಲೂ ಬಂಡಿಪುರ ಅಧಿಕಾರಿ ಪ್ರತಿ ದಿನ 12 ಸಾವಿರದಿಂದ 15 ಸಾವಿರ ರುಪಾಯಿವರೆಗೆ ಸಂಗ್ರಹಿಸುತ್ತಿದ್ದಾರೆ. ಎರಡು ಹೆದ್ದಾರಿಯಲ್ಲೂ ದಿನನಿತ್ಯ 5 ರಿಂದ 6 ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಯಾರೂ ಕೂಡ ಈ ಕಾನೂನುಗಳನ್ನು ಗಂಭೀರವಾಗಿ ಪರಿಗಣಿಸದಂತೆ ಕಾಣುತ್ತಿಲ್ಲ.

English summary
Tourists traveling through national highway in Bandipura forest, have to pay Rs.1,000 as penalty for violating disciplinary norms like selfie photography and feeding food to animals in forest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X