ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿನ್ನೂ ಆರದ ಬೆಂಕಿ : ಅಪಾರ ಅರಣ್ಯ ಸಂಪತ್ತು ನಾಶ

ಸುಮಾರು 500 ಎಕರೆ ಅರಣ್ಯ ಪ್ರದೇಶ ನಾಶ; ರಾಷ್ಟ್ರೀಯ ಉದ್ಯಾನವನದ ಅಮೂಲ್ಯ ಸಸ್ಯ ಹಾಗೂ ಪ್ರಾಣಿ ಸಂಕುಲ ಭಸ್ಮ

|
Google Oneindia Kannada News

ಚಾಮರಾಜ ನಗರ, ಫೆಬ್ರವರಿ 20: ದುಷ್ಕರ್ಮಿಗಳ ಕುಕೃತ್ಯದಿಂದಾಗಿ ಶನಿವಾರ ಹೊತ್ತಿ ಉರಿಯುತ್ತಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬೆಂಕಿ ಇನ್ನೂ ಶಮನಗೊಂಡಿಲ್ಲ. ಅಗ್ನಿ ನಂದಿಸಲು ಸತತವಾಗಿ ಪ್ರಯತ್ನಿಸಲಾಗಿದ್ದರೂ ಜೋರಾಗಿ ಗಾಳಿ ಬೀಸುತ್ತಿರುವ ಕಾರಣ ಬೆಂಕಿ ಸಂಪೂರ್ಣ ಆರಿಲ್ಲ ಎನ್ನಲಾಗುತ್ತಿದೆ.

ಬೆಂಕಿಯ ಕೆನ್ನಾಲಿಗೆ ಓರ್ವ ಅರಣ್ಯ ಸಿಬ್ಬಂದಿಯನ್ನು ಬಲಿ ಪಡೆದಿರುವುದಲ್ಲದೇ ಸುಮಾರು ಐನೂರು ಹೆಕ್ಟೇರ್ ನಷ್ಟು ಅರಣ್ಯ ಸಂಪತ್ತು ನಾಶವಾಗಿದೆ. ಈವರೆಗಿನ ಬೆಂಕಿಯ ಕೆನ್ನಾಲಿಗೆಗೆ ಬೀಟೆ, ತೇಗ ಸೇರಿದಂತೆ ಹಲವಾರು ಬೆಲೆಬಾಳುವ ಮರಗಳು, ಮೊಲ, ಜಿಂಕೆ, ಹಾವು ಸೇರಿದಂತೆ ಹಲವು ಸಣ್ಣಪುಟ್ಟ ಪ್ರಾಣಿಗಳು ಆಹುತಿಯಾಗಿವೆ.

Bandipur fire could not douse despite easeless efforts

ಸ್ಥಳದಲ್ಲಿ ಬೆಂಕಿ ಆರಿಸುವ ಕಾರ್ಯಾಚರಣೆ ಮುಂದುವರಿದಿದೆ.

ಮೊಳೆಯೂರು, ಎನ್.ಬೇಗೂರು, ಗುಂಡ್ರೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅಧಿಕಾರಿಗಳೂ ಸೇರಿದಂತೆ 500ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರಿಗೆ 50ಕ್ಕೂ ಹೆಚ್ಚು ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ.

ನಾಲ್ಕು ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು,

ಕಾಡ್ಗಿಚ್ಚಿನಿಂದ ಗಾಯಗೊಂಡಿದ್ದ ಮೊಳೆಯೂರು ವಲಯ ಅರಣ್ಯಾಧಿಕಾರಿ ಗಂಗಾಧರ್, ಸಿಬ್ಬಂದಿಗಳಾದ ಮಂಜು ಹಾಗೂ ಮನು ಎಂಬವರಿಗೆ ಸರಗೂರಿನ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
Even after easeless efforts to douse the fire in Bandipur National forest, forest guards could not get success so far. Meanwhile, 500 hectares, Flora and fauna of National park has turned into ashes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X