ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ನವೆಂಬರ್ 20: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ನಾಸ್ತಿಕ ಆಸ್ತಿಕರೆನ್ನದೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ತಾಣವಾಗಿದ್ದು, ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅದರಲ್ಲೂ ವೀಕೆಂಡ್ ಗಳಲ್ಲಂತೂ ತಾಣ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.

ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಮಡಿಕೇರಿಯ ಪ್ರವಾಸಿ ತಾಣಗಳುನಿರ್ವಹಣೆಯಿಲ್ಲದೆ ಸೊರಗುತ್ತಿವೆ ಮಡಿಕೇರಿಯ ಪ್ರವಾಸಿ ತಾಣಗಳು

ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ಕಾರಣದಿಂದ ಎಲ್ಲರೂ ಸಾರಿಗೆ ಬಸ್‍ನಲ್ಲೇ ತೆರಳುವುದು ಅನಿವಾರ್ಯವಾಗಿದೆ. ಹೀಗಾಗಿ ಬಸ್ಸಿಗೆ ಕಾಯುವುದೇ ಪ್ರವಾಸಿಗರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರವಾಸಿಗರಿಗೆ ತಕ್ಕಂತೆ ಇಲ್ಲಿ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ಇರುವುದರಿಂದ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ತೆರಳಬೇಕಿದೆ.

Ban on Private vehicle in Himavad Gopalaswamy hill: tourists face inconvenience

ಪ್ರತಿ ಶನಿವಾರ ಭಾನುವಾರ ಹಾಗೂ ರಜೆಯ ದಿನಗಳಲ್ಲಿ ಬಂಡೀಪುರ ಊಟಿ ಮುಂತಾದ ಕಡೆಗೆ ಪ್ರವಾಸಕ್ಕೆ ತೆರಳಿದ್ದ ಪ್ರಯಾಣಿಕರು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ಹೋಗೋಣವೆಂದು ಬರುತ್ತಾರೆ. ಹೀಗೆ ಬರುವವರಿಗೆ ಇಲ್ಲಿಗೆ ತೆರಳಲು ಪಟ್ಟಣದ ಸಾರಿಗೆ ಘಟಕದಿಂದ 5 ಮಿನಿ ಬಸ್ಸುಗಳ ಸೇವೆ ಒದಗಿಸಲಾಗಿತ್ತು. ಆಗ ಯಾವುದೇ ತೊಂದರೆಗಳಿಲ್ಲದೆ ಪ್ರವಾಸಿಗರು ನಿಗದಿತ ಸಮಯಕ್ಕೆ ತಲುಪಬಹುದಾಗಿತ್ತು.

ಆದರೆ ಕಳೆದ 20 ದಿನಗಳಲ್ಲಿ ಎರಡು ಬಸ್ಸುಗಳ ಇಂಜಿನ್ ಸ್ಥಗಿತಗೊಂಡ ಪರಿಣಾಮ ಕೇವಲ ಮೂರು ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಇದರಿಂದ ಬೆಟ್ಟಕ್ಕೆ ತೆರಳುವ ಪ್ರವಾಸಿಗರು ಬಹಳ ಹೊತ್ತು ಸರದಿ ಸಾಲಿನಲ್ಲಿ ಕಾದು ಬಳಿಕ ಬಸ್ಸನ್ನೇರಿಕೊಂಡು ಹೋಗಬೇಕಿದೆ.

Ban on Private vehicle in Himavad Gopalaswamy hill: tourists face inconvenience

ನೆತ್ತಿ ಸುಡುವ ಬಿಸಿಲಿನಲ್ಲಿ ನಿಂತುಕೊಂಡು ಬಸ್ಸಿಗೆ ಕಾಯುವುದು ಕಷ್ಟದ ಕೆಲಸವಾಗಿದ್ದು, 40 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯದ ಬಸ್ಸುಗಳಲ್ಲಿ 60ರಿಂದ70 ಜನರನ್ನು ಕರೆದೊಯ್ಯಲಾಗುತ್ತಿದೆ. ಇದು ಅಪಾಯಕಾರಿ. ಏಕೆಂದರೆ ಈ ರಸ್ತೆಯಲ್ಲಿ ಹಲವುಬಾರಿ ಅವಘಡಗಳು ನಡೆದು ಸ್ವಲ್ಪದರಲ್ಲೇ ಪ್ರಯಾಣಿಕರು ಪಾರಾಗಿದ್ದಾರೆ. ಈಗಿರುವ ಬಸ್ಸುಗಳಲ್ಲೇ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಬದಲು ಹೆಚ್ಚುವರಿ ಬಸ್ ಗಳನ್ನು ಸಂಬಂಧಿಸಿದ ಅಧಿಕಾರಿಗಳು ಒದಗಿಸಬೇಕಾಗಿದೆ. ಈಗಿರುವ ಬಸ್‍ಗಳು ಗೋಪಾಲಸ್ವಾಮಿ ಬೆಟ್ಟದ ಕಡಿದಾದ ಏರು ರಸ್ತೆಯಲ್ಲಿ ಸಂಚರಿಸಲು ಪ್ರಯಾಸಪಡುತ್ತಿದ್ದು ಕೆಲವೊಮ್ಮೆ ಕೆಟ್ಟು ನಿಲ್ಲುತ್ತಿವೆ.

ಮೂರು ತಿಂಗಳ ಹಿಂದೆ ಮಂಡ್ಯ ಸಾರಿಗೆ ಘಟಕದ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಐದು ಮಿನಿಬಸ್ಸುಗಳನ್ನು ಇಲ್ಲಿಗೆ ನಿಯೋಜಿಸಿ ಸೇವೆಯನ್ನು ಒದಗಿಸುತ್ತಿದ್ದು ಎರಡು ಬಸ್ಸುಗಳು ಕೆಟ್ಟುನಿಂತಿದ್ದು ಇರುವ ಮೂರು ಬಸ್ಸುಗಳನ್ನು 24 ಸಲ ಓಡಿಸಲಾಗುತ್ತಿದೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಮತ್ತು ಚಾಲಕ ನಿರ್ವಾಹಕರಿಗೂ ಒತ್ತಡವಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಕೆಟ್ಟು ನಿಂತ ಬಸ್ಸನ್ನು ಶೀಘ್ರವೇ ಸರಿಪಡಿಸಿ ಸಂಚರಿಸಲು ಅನುಕೂಲ ಮಾಡಿಕೊಡಬೇಕಿದೆ.

English summary
After Chamarajanagara district administration bans private vehicles to Himavad Gopalaswamy hills, tourists are facing inconvenience to travel to the famous tourist spot, which is in Chamarajanagara district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X