ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಬಿ. ಶ್ರೀರಾಮುಲು ಮಾನವೀಯತೆಗೆ ಜನರ ಶ್ಲಾಘನೆ

|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್ 25 : "ಜೀವಕ್ಕೆ ಬೆಲೆ ಕಟ್ಟಲಾಗದು. ಆಪತ್ಕಾಲದಲ್ಲಿ ಹೆಣ್ಣು ಮಗಳ ಜೀವ ರಕ್ಷಿಸಿ ಧನ್ಯನಾದೆ" ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

"ನಾನೇನೋ ದೊಡ್ಡ ಕೆಲಸ ಮಾಡಿದೆ ಎಂದು ಹೇಳಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರಿಗೂ ಮಾನವೀಯ ಕಳಕಳಿ ಇದ್ದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂಬುದು ನನ್ನ ಆಶಯ" ಎಂದು ಶ್ರೀರಾಮುಲು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಆರೋಗ್ಯ ಸೂಚ್ಯಂಕ: ಕೇರಳ ಪ್ರಥಮ, ಉ.ಪ್ರದೇಶ ಕೊನೆ, ಕರ್ನಾಟಕ?ಆರೋಗ್ಯ ಸೂಚ್ಯಂಕ: ಕೇರಳ ಪ್ರಥಮ, ಉ.ಪ್ರದೇಶ ಕೊನೆ, ಕರ್ನಾಟಕ?

ಚಾಮರಾಜನಗರದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದ ಮಹಿಳೆಯನ್ನು ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಕಳುಹಿಸಿದ ಆರೋಗ್ಯ ಸಚಿವರ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮಹಿಳೆ ಆರೋಗ್ಯವಾಗಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದೆ.

ಶೀಘ್ರವೇ ವೈದ್ಯರು ಮತ್ತು ನರ್ಸ್ ಗಳ ನೇಮಕಾತಿ: ಆರೋಗ್ಯ ಸಚಿವ ಶ್ರೀರಾಮುಲುಶೀಘ್ರವೇ ವೈದ್ಯರು ಮತ್ತು ನರ್ಸ್ ಗಳ ನೇಮಕಾತಿ: ಆರೋಗ್ಯ ಸಚಿವ ಶ್ರೀರಾಮುಲು

B Sriramulu Helps To Admit Patient To Hospital

ರಸ್ತೆಯಲ್ಲಿ ಆಗಿದ್ದೇನು?: ಆರೋಗ್ಯ ಸಚಿವ ಬಿ. ಶ್ರೀರಾಮುಲು ಚಾಮರಾಜನಗರಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ರಸ್ತೆ ಬದಿಯ ಮನೆಯೊಂದರ ಬಳಿ ಮಹಿಳೆಯೊಬ್ಬರು ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು.

ಬೆಳಗಿನ ಚುಟುಕು ನಿದ್ದೆ ಹೃದಯ ಕಾಯಿಲೆ ದೂರ ಮಾಡುತ್ತದೆಬೆಳಗಿನ ಚುಟುಕು ನಿದ್ದೆ ಹೃದಯ ಕಾಯಿಲೆ ದೂರ ಮಾಡುತ್ತದೆ

ಇದನ್ನು ಗಮನಿಸಿದ ಸಚಿವರು ಅವರ ಕಾರಿನಲ್ಲಿ ಮಹಿಳೆಯನ್ನು ಮಲೆ ಮಹದೇಶ್ವರದ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಬೆಟ್ಟಕ್ಕೆ ಹೋಗಿ ವಾಪಸ್ ಆಗುವಾರ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆ ಆರೋಗ್ಯ ವಿಚಾರಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

"ಆರೋಗ್ಯ ಸಚಿವನಾಗಿ ಅಲ್ಲದೇ ಇದ್ದರೂ ಒಬ್ಬ ಸಾಮಾನ್ಯನಾಗಿ ಇನ್ನೊಬ್ಬರ ಪ್ರಾಣ ಉಳಿಸಿದ್ದಕ್ಕಿಂತ ಸಮಾಧಾನದ ಸಂಗತಿ ಇನ್ನೇನಿದೆ?" ಎಂದು ಬಿ. ಶ್ರೀರಾಮುಲು ಹೇಳಿದ್ದಾರೆ.

English summary
Family Welfare minister of Karnataka government B.Sriramulu help the women to admit hospital in Male Mahadeshwara of Chamarajanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X