ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1982 ರಲ್ಲಿ ಚಾಮರಾಜನಗರಕ್ಕೆ ಆಗಮಿಸಿದ್ದ ವಾಜಪೇಯಿ..!

By ಬಿ.ಎಂ.ಲವಕುಮಾರ್
|
Google Oneindia Kannada News

ಚಾಮರಾಜನಗರ, ಆಗಸ್ಟ್ 16 : ಮಾಜಿ ಪ್ರಧಾನಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿಯವರು 36 ವರ್ಷಗಳ ಹಿಂದೆ ಚಾಮರಾಜನಗರಕ್ಕೆ ಆಗಮಿಸಿದ್ದರು ಎನ್ನುವುದು ಸ್ಮರಣೀಯ ದಿನವಾಗಿ ಉಳಿದಿದೆ.

ಇಷ್ಟಕ್ಕೂ ಅವರು ಚಾಮರಾಜನಗರಕ್ಕೆ ಏಕೆ ಬಂದಿದ್ದರು ಎಂಬುದನ್ನು ನೋಡುವುದಾದರೆ ಅವರು ಅವತ್ತು ಭಾರತೀಯ ಜನತಾ ಪಾರ್ಟಿಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲು ಬಂದಿದ್ದರು ಎಂಬುದು ಇದೀಗ ತಿಳಿದು ಬಂದಿದೆ.

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

1982ರ ಜನವರಿ 11 ರಂದು ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂದೆ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರ ಸಭೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಅಟಲ್ ಬಿಹಾರಿ ವಾಜಪೇಯಿಯವರು, ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಣೇಶ್ ದೀಕ್ಷಿತ್‍ರವರ ಪರವಾಗಿ ಮತಯಾಚನೆ ಮಾಡಿದ್ದರು.

Atal Bihari Vajpayee

ಸ್ವತಃ ಗಣೇಶ್ ದೀಕ್ಷಿತ್ ಅವರು ಆ ದಿನದ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. 'ಅಂದು ವಾಜಪೇಯಿಯವರು ಆಗಮಿಸಿ ತಮ್ಮ ಕಂಚಿನ ಕಂಠದಲ್ಲಿ ತಮ್ಮ ಪರ ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮಾಡಿದ್ದು, ಇನ್ನೂ ಕಿವಿಗೆ ಕೇಳಿಸುವಂತಿದೆ ಅಂತಹ ಮಹಾನ್ ನಾಯಕ ಬಿಜೆಪಿಗೆ ಅನಿವಾರ್ಯವಾಗಿತ್ತು' ಎಂದರು.

ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳುಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು

'ಅಂತಹ ವ್ಯಕ್ತಿ ಮತ್ತೆ ಜನ್ಮವೆತ್ತಿ ಬರಲಿ ಹಾಗೂ ಬಿಜೆಪಿ ನಾಯಕರು ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶವನ್ನು ಪಕ್ಷದ ಸಂಘಟನೆಯಲ್ಲಿ ಬಳಸಿಕೊಂಡು ಪಕ್ಷ ಮುನ್ನಡೆಸುವಂತಾಗ ಬೇಕೆಂದು' ಈ ಸಂದರ್ಭದಲ್ಲಿ ಹೇಳಿದರು.

English summary
Former Prime Minister Atal Bihari Vajpayee (93) breathed his last on Thursday, 16 August, 2018. Atal Bihari Vajpayee visited Chamarajanagar in 1982 for election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X